WhatsApp, Supreme Court
WhatsApp, Supreme Court

ಸುಪ್ರೀಂ ಕೋರ್ಟ್ ಪ್ರಕರಣದ ಮಾಹಿತಿ ಇದೀಗ ವಾಟ್ಸಾಪ್‌ನಲ್ಲಿ ಲಭ್ಯ

ಈ ಕ್ರಮ ವಕೀಲರು ಮತ್ತು ನ್ಯಾಯಾಧೀಶರ ಕಾರ್ಯಚಟುವಟಿಕೆಯಲ್ಲಿ ಗಮನಾರ್ಹ ಬದಲಾವಣೆ ತರಲಿದ್ದು ಕಾಗದ ಉಳಿಸುವಲ್ಲಿ ದೊಡ್ಡಮಟ್ಟದ ಕೊಡುಗೆ ನೀಡಲಿದೆ ಎಂದು ಸಿಜೆಐ ತಿಳಿಸಿದ್ದಾರೆ.

ತನ್ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೇವೆಯಲ್ಲಿ ವಾಟ್ಸಾಪ್‌ನ್ನೂ ಒಳಗೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು “75 ನೇ ವರ್ಷಾಚರಣೆಯಲ್ಲಿರುವ ಸುಪ್ರೀಂ ಕೋರ್ಟ್‌ ನ್ಯಾಯ ದೊರಕಿಸಿಕೊಡುವ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ. ತನ್ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೇವೆಯಲ್ಲಿ ವಾಟ್ಸಾಪ್‌ ಸಂದೇಶಗಳನ್ನೂ ಒಳಗೊಳ್ಳಲಿದೆ. ... ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಸ್ವಯಂಚಾಲಿತ ಸಂದೇಶ ವಕೀಲರಿಗೆ ದೊರೆಯಲಿದೆ. ದಾವೆಪಟ್ಟಿಯ ವಿವರಗಳು ದೊರೆಯಲಿದೆ. ವಾಟ್ಸಾಪ್‌ ಮೊಬೈಲ್‌ ಸಂಖ್ಯೆ ಏಕಮುಖ ಸಂದೇಶ ರವಾನಿಸುತ್ತದೆ” ಎಂದು ವಿವರಿಸಿದ್ದಾರೆ.

ನ್ಯಾಯಾಲಯದ ಅಧಿಕೃತ ವಾಟ್ಸಾಪ್‌ ಸಂಖ್ಯೆ 8767687676.

ಈ ಕ್ರಮ  ವಕೀಲರು ಮತ್ತು ನ್ಯಾಯಾಧೀಶರ ಕಾರ್ಯಚಟುವಟಿಕೆಯಲ್ಲಿ ಗಮನಾರ್ಹ ಬದಲಾವಣೆ ತರಲಿದ್ದು ಕಾಗದ ಉಳಿಸುವಲ್ಲಿ ದೊಡ್ಡಮಟ್ಟದ ಕೊಡುಗೆ ನೀಡಲಿದೆ ಎಂದು ಸಿಜೆಐ ತಿಳಿಸಿದ್ದಾರೆ.

ಬಹಳಷ್ಟು ವಕೀಲರು ಸುಪ್ರೀಂ ಕೋರ್ಟ್‌ಗೆ ಬರಲಿದ್ದು ದೇಶದೆಲ್ಲೆಡೆ ಇರುವ ದೂರದ ವ್ಯಕ್ತಿಗಳು ಕೂಡ ನ್ಯಾಯಾಲಯದ ಮಾಹಿತಿ ಪಡೆಯಲು ಇದು ಸಹಕಾರಿಯಾಗಿದೆ.

"ಎಲ್ಲಾ ಸೇವೆಗಳನ್ನು ಮೇಘರಾಜ್ ಕ್ಲೌಡ್ 2.0 ಗೆ ಬದಲಿಸುತ್ತಿದ್ದೇವೆ, ಇದು ನ್ಯಾಶನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ರಚಿಸಿದ ಕ್ಲೌಡ್ ಇನ್ಫ್ರಾ ಆಗಿದೆ.  ನಾವು ಸುಪ್ರೀಂ ಕೋರ್ಟ್ ಮತ್ತು ಇ-ಕೋರ್ಟ್‌ಗಳ ಯೋಜನೆಯನ್ನು ಸಹ ಇಲ್ಲಿಗೇ ತರಲಿದ್ದೇವೆ. ಈಗ ಎಲ್ಲಾ ನ್ಯಾಯಾಲಯಗಳು ಆನ್‌ಲೈನ್‌ ಕಲಾಪ ನಡೆಸಬಹುದಾಗಿದ್ದ ಈ ಮುಂಚಿನ ನಿರ್ಬಂಧಗಳಿಲ್ಲ. ಭಾರತದಲ್ಲಿನ ಸರ್ವರ್‌ಗಳಲ್ಲೇಎಲ್ಲಾ ದತ್ತಾಂಶ ಸಂರಕ್ಷಿತವಾಗಿರುತ್ತದೆ" ಎಂದು ಸಿಜೆಐ ವಿವರಿಸಿದರು.

ಸುಪ್ರೀಂ ಕೋರ್ಟ್‌ನ ಈ ಕ್ರಮವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶ್ಲಾಘಿಸಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಲಘು ದಾಟಿಯಲ್ಲಿ ಸಿಜೆಐ ಅವರು ಹೆಚ್ಚು ಹೆಚ್ಚು ಡಿಜಿಟಲ್‌ ಸಾಧನ ಬಳಸುವುದರಿಂದ ಹೆಚ್ಚು ಹೆಚ್ಚು ಯುವಕರಾಗಿ ಕಾಣುತ್ತಾರೆ” ಎಂದರು.

Related Stories

No stories found.
Kannada Bar & Bench
kannada.barandbench.com