
Kerala HC, Justice PV Kunhikrishnan
ಮಲಯಾಳಂ ಚಿತ್ರ ಚುರುಲಿಯಲ್ಲಿ ಅಶ್ಲೀಲ ಭಾಷೆ ಬಳಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಯೊಂದನ್ನು ಗುರುವಾರ ತಿರಸ್ಕರಿಸಿದ ಕೇರಳ ಹೈಕೋರ್ಟ್ ತೀರ್ಪನ್ನು ಟೀಕಿಸುವ ಮುನ್ನ ವಕೀಲರುಗಳು ಅದನ್ನು ಸರಿಯಾಗಿ ಓದಬೇಕು ಎಂದು ಕಿವಿಮಾತು ಹೇಳಿದೆ. ವಕೀಲರೇ ಹೀಗೆ ಮಾಡಿದರೆ ಸಾಮಾಜಿಕ ಮಾಧ್ಯಮದಲ್ಲಿ ತೀರ್ಪು ಮತ್ತು ನ್ಯಾಯಾಧೀಶರ ಬಗ್ಗೆ ಸಾಮಾನ್ಯ ನಾಗರಿಕರು ನೀಡುವ ಹೇಳಿಕೆಗಳನ್ನು ದೂಷಿಸಲು ಸಾಧ್ಯವೇ? ಎಂದು ನ್ಯಾ. ಪಿ ವಿ ಕುನ್ಹಿಕೃಷ್ಣನ್ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.