ಲೆ. ಗವರ್ನರ್ ಪಾಲಿಕೆ ಸದಸ್ಯರ ನಾಮ ನಿರ್ದೇಶನ ಮಾಡಿದರೆ ಚುನಾಯಿತ ದೆಹಲಿ ಪಾಲಿಕೆ ಅಸ್ಥಿರ: ಸುಪ್ರೀಂ

"ಲೆ. ಗವರ್ನರ್ ಅವರಿಗೆ ಈ ಅಧಿಕಾರ ನೀಡುವ ಮೂಲಕ, ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪಾಲಿಕೆಯನ್ನು ಪರಿಣಾಮಕಾರಿಯಾಗಿ ಅಸ್ಥಿರಗೊಳಿಸಬಹುದು. ಅವರಿಂದ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಅಧಿಕಾರವೂ ಇದೆ" ಎಂದು ಸಿಜೆಐ ಹೇಳಿದ್ದಾರೆ.
Arvind Kejriwal, Delhi LG VK Saxena and Supreme Court
Arvind Kejriwal, Delhi LG VK Saxena and Supreme Court

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರ ಸಚಿವ ಸಂಪುಟದ ಸಹಾಯ, ಸೂಚನೆ ಪಡೆಯದೆ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ನಾಮ ನಿರ್ದೇಶನದಿಂದ ಎಂಸಿಡಿ ಪರಿಣಾಮಕಾರಿಯಾಗಿ ಅಸ್ಥಿರಗೊಳುತ್ತದೆ. ಏಕೆಂದರೆ ಈ ರೀತಿ ನಾಮನಿರ್ದೇಶಿತಗೊಂಡವರಿಗೆ ಮತದಾನದ ಅಧಿಕಾರ ಇದೆ” ಎಂದು ಹೇಳಿತು.

Also Read
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸಮರ: ವಿಸ್ತೃತ ಪೀಠಕ್ಕೆ ಒಪ್ಪಿಸಲು ಸುಪ್ರೀಂ ಸಮ್ಮತಿ

"ಲೆ. ಗವರ್ನರ್‌ ಅವರಿಗೆ ಈ ಅಧಿಕಾರ ನೀಡುವ ಮೂಲಕ, ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪಾಲಿಕೆಯನ್ನು ಪರಿಣಾಮಕಾರಿಯಾಗಿ ಅಸ್ಥಿರಗೊಳಿಸಬಹುದು.  ಹಾಗೆ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಅಧಿಕಾರವೂ ಇದೆ" ಎಂದು ಸಿಜೆಐ ಹೇಳಿದರು.

ಲೆ. ಗವರ್ನರ್‌ ಅವರು 1991 ರಲ್ಲಿ ಚುನಾಯಿತ ಸರ್ಕಾರವನ್ನು ಸಂಪೂರ್ಣ ಬದಿಗೆ ಸರಿಸಿದ್ದರಿಂದ ಸಂವಿಧಾನದ 239 ಎಎ ವಿಧಿ ಜಾರಿಗೆ ಬಂದಿತ್ತು. ಅದಾದ ಬಳಿಕ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲು ಎಂದು ದೆಹಲಿ ಸರ್ಕಾರ ಹೇಳಿದೆ.

ಇದಲ್ಲದೆ, ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಎಲ್‌ಜಿ ಬದ್ಧರಾಗಿರಬೇಕು.  ಭಿನ್ನಾಭಿಪ್ರಾಯವಿದ್ದಲ್ಲಿ ಅವರು ಸಮಸ್ಯೆಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಬಹುದು ಎಂದು ಹೇಳಲಾಗಿದೆ.

Kannada Bar & Bench
kannada.barandbench.com