ಸಾವು ಬದುಕಿನ ಸಂಗತಿಯಾಗಿ ಪರಿಣಮಿಸಿರುವ 1.4 ಶತಕೋಟಿ ಡಾಲರ್ ತೆರಿಗೆ: ಬಾಂಬೆ ಹೈಕೋರ್ಟ್‌ನಲ್ಲಿ ಫೋಕ್ಸ್‌ವ್ಯಾಗನ್‌ ಅಳಲು

ಸ್ಕೋಡಾ ಫೋಕ್ಸ್‌ವ್ಯಾಗನ್‌ಗೆ ಸೇರಿದ ಸರಕುಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಜೊತೆಗೆ ಭವಿಷ್ಯದಲ್ಲಿ ತೆರಿಗೆ ಬೇಡಿಕೆ ಇಟ್ಟು ಸರಕುಗಳನ್ನು ತಡೆಹಿಡಿಯುವುದಿಲ್ಲ ಎಂದು ಕಸ್ಟಮ್ಸ್ ಅಧಿಕಾರಿಗಳು ಬಾಂಬೆ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಸಾವು ಬದುಕಿನ ಸಂಗತಿಯಾಗಿ ಪರಿಣಮಿಸಿರುವ 1.4 ಶತಕೋಟಿ ಡಾಲರ್ ತೆರಿಗೆ: ಬಾಂಬೆ ಹೈಕೋರ್ಟ್‌ನಲ್ಲಿ ಫೋಕ್ಸ್‌ವ್ಯಾಗನ್‌ ಅಳಲು
Published on

ಭಾರತೀಯ ಕಸ್ಟಮ್ಸ್‌ ಅಧಿಕಾರಿಗಳೊಂದಿಗಿನ $1.4 ಶತಕೋಟಿ ತೆರಿಗೆ ವಿವಾದ ದೇಶದಲ್ಲಿ ತನ್ನ ಕಾರ್ಯಾಚರಣೆಯ ಸಾವು ಬದುಕಿನ ವಿಚಾರವಾಗಿದೆ ಎಂದು ಫೋಕ್ಸ್‌ವ್ಯಾಗನ್‌ ಸಮೂಹ ಸೋಮವಾರ ಬಾಂಬೆ ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿದೆ.

 ಕಂಪೆನಿಯಿಂದ ಆಮದಾಗುವ ವಾಹನಗಳ ಬಿಡಿಭಾಗಗಳನ್ನು ಕಂಪ್ಲೀಟ್ಲಿ ನಾಕ್ಡ್ ಡೌನ್ (ಸಿಕೆಡಿ) ಘಟಕಗಳಾಗಿ ವರ್ಗೀಕರಿಸುವ ಕಸ್ಟಮ್ಸ್ ನಿರ್ಧಾರ ಫೋಕ್ಸ್‌ವ್ಯಾಗನ್‌ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತದೆ ಎಂದು ಹಿರಿಯ ವಕೀಲ ಅರವಿಂದ್ ದಾತಾರ್ ವಾದಿಸಿದರು. ಇದು ಫೋಕ್ಸ್‌ವ್ಯಾಗನ್‌ ಪಾಲಿಗೆ ಸಾವು- ಬದುಕಿನ ಹೋರಾಟ ಎಂತಲೂ ಅವರು ಹೇಳಿದರು.

Also Read
ಲಾಟರಿ ವಿತರಕರು ಕೇಂದ್ರಕ್ಕೆ ಸೇವಾ ತೆರಿಗೆ ಪಾವತಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಈ ಮಧ್ಯೆ ಸ್ಕೋಡಾ ಫೋಕ್ಸ್‌ವ್ಯಾಗನ್‌ಗೆ ಸೇರಿದ ಯಾವುದೇ ಸರಕುಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಜೊತೆಗೆ ಭವಿಷ್ಯದಲ್ಲಿ ತೆರಿಗೆ ಬೇಡಿಕೆ ಇಟ್ಟು ಯಾವುದೇ ಸರಕುಗಳನ್ನು ತಡೆಹಿಡಿಯುವುದಿಲ್ಲ ಎಂದು ಕಸ್ಟಮ್ಸ್ ಅಧಿಕಾರಿಗಳು ನ್ಯಾಯಮೂರ್ತಿಗಳಾದ ಬಿಪಿ ಕೊಲಾಬ್‌ವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ಪೀಠಕ್ಕೆ ಭರವಸೆ ನೀಡಿದರು.

ಸೆಪ್ಟೆಂಬರ್ 2024 ರಲ್ಲಿ ಶೋ-ಕಾಸ್ ನೋಟಿಸ್ ನೀಡಿದ ನಂತರ ಫೋಕ್ಸ್‌ವ್ಯಾಗನ್‌ನ 100ಕ್ಕೂ ಹೆಚ್ಚು ಸರಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಂಪೆನಿ ಪರ ವಕೀಲರು ಹೇಳಿದ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಈ ರೀತಿ ಪ್ರತಿಕ್ರಿಯಿಸಿದರು.  

Also Read
ಕೇಂದ್ರಕ್ಕೆ ₹665 ಕೋಟಿ ತೆರಿಗೆ ವಂಚನೆ: ರಿತು ಮಿನೋಚಾಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್‌

ಆಡಿ, ಸ್ಕೋಡಾ ಹಾಗೂ ಫೋಕ್ಸ್‌ವ್ಯಾಗನ್‌ ವಾಹನಗಳನ್ನು ಆಮದು ಮಾಡಿಕೊಳ್ಳುವಾಗ ಸಿಕೆಡಿ ಘಟಕದ ಬದಲಿಗೆ ಪ್ರತ್ಯೇಕ ಬಿಡಿ ಭಾಗಗಳು ಎಂದು ಸುಳ್ಳೇ ವರ್ಗೀಕರಿಸಿ ಹೆಚ್ಚು ಸುಂಕ ವಿಧಿಸುವುದರಿಂದ ಕಂಪೆನಿ ತಪ್ಪಿಸಿಕೊಂಡಿದೆ ಎಂದು ಶೋಕಾಸ್‌ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಫೋಕ್ಸ್‌ವ್ಯಾಗನ್‌ ಪರವಾಗಿ ಹಿರಿಯ ವಕೀಲರಾದ ಅರವಿಂದ್ ದಾತಾರ್ ಹಾಗೂ ರೋಹನ್ ಶಾ ಅವರು ತೀರಾ ತಡವಾಗಿ ಶೋಕಾಸ್ ನೋಟಿಸ್ ನೀಡಲಾಗಿದ್ದು ಗಡುವು ಮೀರಿದೆ ಎಂದರು.  ಫೆಬ್ರವರಿ 20 ರಂದು ವಿಚಾರಣೆ ಮುಂದುವರೆಯಲಿದೆ ಮುಂದುವರಿಯಲಿವೆ.

Kannada Bar & Bench
kannada.barandbench.com