ಅಸಮಾನತೆಗೆ ಎಡೆ ಮಾಡಿಕೊಡುತ್ತಿರುವ ಕೋವಿಡ್ ಲಸಿಕೆ ನೀತಿ: ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ

18ರಿಂದ 44 ವರ್ಷ ವಯೋವರ್ಗದ ಸಾಮಾಜಿಕ ಸ್ತರದಲ್ಲಿ ಬಹಜನರು ಕೂಡ ಇದ್ದು ಅವರಿಗೆ ಲಸಿಕೆಗೆ ಹಣಪಾವತಿಸಲು ಸಾಧ್ಯವಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಸಮಾನತೆಗೆ ಎಡೆ ಮಾಡಿಕೊಡುತ್ತಿರುವ ಕೋವಿಡ್ ಲಸಿಕೆ ನೀತಿ: ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ
Supreme Court and Covid vaccine

ಕೇಂದ್ರ ಸರ್ಕಾರದ ಕೋವಿಡ್‌ ಲಸಿಕಾ ನೀತಿಯಿಂದ ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಸಾರ್ವಜನಿಕ ಆರೋಗ್ಯದ ಹಕ್ಕಿಗೆ ಧಕ್ಕೆ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಈಗಿನ ನೀತಿಯನ್ನು ಪುನರ್‌ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಕೋವಿಡ್‌ ನಿರ್ವಹಣೆ ಕುರಿತಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ರಿಟ್‌ ಅರ್ಜಿಯ ಆದೇಶದಲ್ಲಿ ನ್ಯಾಯಾಲಯ, 18ರಿಂದ 44 ವರ್ಷ ವಯೋವರ್ಗದ ಸಾಮಾಜಿಕ ಸ್ತರದಲ್ಲಿ ಬಹಜನರು (ಸವಲತ್ತು ವಂಚಿತ ಮತ್ತು ಸಮಾಜದ ಅಂಚಿನಲ್ಲಿರುವ ಗುಂಪಿನ ವ್ಯಕ್ತಿಗಳು) ಕೂಡ ಇದ್ದು ಅವರಿಗೆ ಲಸಿಕೆಗೆ ಹಣಪಾವತಿಸಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿದೆ.

ಅಂತಹ ಜನರಿಗೆ ಲಸಿಕೆಯನ್ನು ಉಚಿತವಾಗಿ ಒದಗಿಸಬೇಕೆ? ರಿಯಾಯ್ತಿ ದರದಲ್ಲಿ ಒದಗಿಸಬೇಕೆ? ಒದಗಿಸುವುದಾದರೆ ಎಷ್ಟು ಜನರಿಗೆ ನೀಡಬೇಕು ಎಂಬುದು ರಾಜ್ಯಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರವಾಗಿದೆ. ಇದು ಅಸಮಾನತೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

"ಅವರಿಗೆ ಕಡ್ಡಾಯವಾಗಿ ಲಸಿಕೆ ದೊರೆಯುತ್ತದೆಯೋ ಇಲ್ಲವೋ ಎಂಬುದು ಆಯಾ ರಾಜ್ಯಗಳ ಆರ್ಥಿಕತೆ ಅವಲಂಬಿಸಿ ಅದನ್ನು ಉಚಿತವಾಗಿ ನೀಡಬೇಕೆ ಅಥವಾ ರಿಯಾಯ್ತಿ ದರದಲ್ಲಿ ನೀಡಬೇಕೆ ನೀಡುವುದಾದರೆ ಎಷ್ಟು ಜನರಿಗೆ ನೀಡಬೇಕು ಎಂಬುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರವಾಗಿದೆ. ಇದು ಅಸಮಾನತೆಗೆ ಎಡೆ ಮಾಡಿಕೊಡುತ್ತದೆ” ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.

Also Read
ಅಮೆರಿಕ ಕಡಿಮೆ ದರದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವಾಗ ನಮ್ಮವರೇಕೆ ಹೆಚ್ಚು ಪಾವತಿಸಬೇಕು? ಸುಪ್ರೀಂ ಪ್ರಶ್ನೆ

45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಕೇಂದ್ರ ಲಸಿಕೆ ಒದಗಿಸಲಿದೆ ಮತ್ತು 18 ರಿಂದ 44ರ ವಯೋಮಿತಿಯ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ಲಸಿಕೆ ಒದಗಿಸಬೇಕು ಎಂಬ ವಾಣಿಜ್ಯಿಕ ನೆಲೆಯಲ್ಲಿ ತಾರತಮ್ಯ ಎಸಗಲಾಗದು ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಸಾರ್ವಜನಿಕ ಆರೋಗ್ಯದ ಹಕ್ಕಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಲಸಿಕೆ ಸಂಗ್ರಹಿಸಲು ಮತ್ತು ತಯಾರಕರಿಗೆ ಬೆಲೆ ನಿಗದಿಪಡಿಸಲು ತಾರ್ಕಿಕ ವಿಧಾನವನ್ನು ಅಳವಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಲಸಿಕೆ ಸಂಗ್ರಹವನ್ನು ಕೇಂದ್ರೀಕೃತವಾಗಿಸುವುದು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅದರ ವಿತರಣೆಯನ್ನು ವಿಕೇಂದ್ರೀಕರಿಸುವುದು ತಾರ್ಕಿಕ ವಿಧಾನವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಆದರೆ, ಇದೇ ವೇಳೆ ತಾನು ಲಸಿಕಾ ನೀತಿಯ ಸಾಂವಿಧಾನಿಕತೆಯ ಬಗ್ಗೆ ಯಾವುದೇ ರೀತಿಯ ಆದೇಶವನ್ನು ಹೊರಡಿಸುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.

No stories found.
Kannada Bar & Bench
kannada.barandbench.com