ತಾಯಂದಿರಾಗಿರುವ ವಕೀಲೆಯರಿಗೆ ವಾದ ಮಂಡಿಸಲು ನಿರ್ದಿಷ್ಟ ಸಮಯ: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿನೂತನ ಹೆಜ್ಜೆ
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರು ಜಾರಿ ಮಾಡಿರುವ ನೋಟಿಸ್ ಒಂದನ್ನು ಜಾರಿ ಮಾಡಿದ್ದು ವೈಯಕ್ತಿಕ ನಿರ್ಬಂಧಗಳಿರುವ ಯುವ ತಾಯಂದಿರು ತಾವು ಮಂಡಿಸುವ ವಾದಕ್ಕಾಗಿ ಮುಂಚಿತವಾಗಿಯೇ ನಿರ್ದಿಷ್ಟ ಸಮಯವಕಾಶ ಪಡೆಯಬಹುದು ಎಂದು ಹೇಳಿದ್ದಾರೆ.
ಪ್ರಕರಣವೊಂದರ ವಿಚಾರಣೆ ನಡೆಸುವ ಬದಲು ಮುಂದೂಡುವಂತೆ ವಕೀಲೆಯೊಬ್ಬರು ನ್ಯಾಯಾಲಯವನ್ನು ಕೋರಿದಾಗ ನ್ಯಾಯಾಧೀಶರು ಈ ವ್ಯವಸ್ಥೆಗೆ ಚಾಲನೆ ನೀಡಿದರು.
ವಕೀಲರೊಬ್ಬರು ತಮ್ಮ ಮಗನನ್ನು ಮಧ್ಯಾಹ್ನ 3.30 ಕ್ಕೆ ಶಾಲೆಯಿಂದ ಕರೆದುಕೊಂಡು ಬರಬೇಕಿದ್ದರಿಂದ ಸಂಜೆ ಸಂಜೆ 4 ಗಂಟೆಗೆ ನ್ಯಾಯಾಲಯ ಕಲಾಪದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
ಈ ಬಗ್ಗೆ ನೋಟಿಸ್‌ನಲ್ಲಿ ಪ್ರಸ್ತಾಪಿಸಿರುವ ನ್ಯಾಯಮೂರ್ತಿಗಳು “ ಘಟನೆ ನನ್ನನ್ನು ಯೋಚಿಸುವಂತೆ ಮಾಡಿತು. ನನ್ನೆದುರು ಕೆಲವು ಯುವ ತಾಯಂದಿರು ಅಭ್ಯಾಸ ಮಾಡುತ್ತಿದ್ದಾರೆ. ಇದೇ ರೀತಿಯ ತೊಂದರೆಗಳು ಅವರಿಗೂ ಇರಬಹುದು. ಅವರಿಗೆ ಅವಕಾಶ ಕಲ್ಪಿಸುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ" ಎಂದಿದ್ದಾರೆ. ಹೊಸ ವ್ಯವಸ್ಥೆ ಜುಲೈ 5, 2022ರಿಂದ ಜಾರಿಗೆ ಬರಲಿದೆ.