ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಆರೋಪ ಮುಕ್ತಗೊಳಿಸಲು ಕೋರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಜಾಗೊಳಸಿದೆ [ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಎನ್‌ಐಎ ಇನ್ನಿತರರ ನಡುವಣ ಪ್ರಕರಣ].
ಪೀಠವು ಪುರೋಹಿತ್ ಅವರ ಮನವಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ನಿರಾಕರಿಸಿತು. ಆದರೂ ಹೈಕೋರ್ಟ್ ಆದೇಶದ ಅವಲೋಕನಗಳ ಪ್ರಭಾವಕ್ಕೆ ವಿಚಾರಣಾ ನ್ಯಾಯಾಲಯ ಒಳಗಾಗಬಾರದು ಎಂದು ಸ್ಪಷ್ಟಪಡಿಸಿತು.
“ವಿಶೇಷ ಅನುಮತಿ ಅರ್ಜಿಯನ್ನು ಪರಿಗಣಿಸಿಲ್ಲವಾದರೂ ಅರ್ಜಿದಾರರ ವಿರುದ್ಧದ ವಿಚಾರಣೆಯು ಮುಂದುವರಿದಿದೆ ಎಂದು ನಮಗೆ ತಿಳಿಸಲಾಗಿದೆ. ಸಕ್ಷಮ ಪ್ರಾಧಿಕಾರದ ಸಮ್ಮತಿಯ ವಿಚಾರವಾಗಿ ಮಾಡಲಾದ ಅವಲೋಕನವು ಸೆಷನ್ಸ್ ನ್ಯಾಯಾಲಯ ನಡೆಸುವ ವಿಚಾರಣೆ ಮೇಲೆ ಪೂರ್ವಾಗ್ರಹ ಉಂಟುಮಾಡಬಾರದು. ಮೇಲಿನ ಆದೇಶದೊಂದಿಗೆ, ವಿಶೇಷ ರಜೆ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿತು.
ಸೇನಾಧಿಕಾರಿ ಪುರೋಹಿತ್ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸ್ಫೋಟದ ಸಂಚು ರೂಪಿಸಿದ್ದ ಅಭಿನವ್ ಭಾರತ್ ಎಂಬ ಸಂಘಟನೆಯ ಸಭೆಗಳಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿತ್ತು.