ವೈವಾಹಿಕ ಅತ್ಯಾಚಾರ: ದೆಹಲಿ ಹೈಕೋರ್ಟ್‌ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ಭಿನ್ನ ತೀರ್ಪುಯ ನೀಡುವ ವೇಳೆ ನ್ಯಾ. ಶಕ್ದೆರ್ ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದರೆ, ನ್ಯಾ ಶಂಕರ್ ಅದನ್ನು ಎತ್ತಿ ಹಿಡಿದಿದ್ದರು.
ವೈವಾಹಿಕ ಅತ್ಯಾಚಾರ: ದೆಹಲಿ ಹೈಕೋರ್ಟ್‌ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 375 ವಿನಾಯಿತಿ 2ರ ಕುರಿತು ದೆಹಲಿ ಹೈಕೋರ್ಟ್‌ ನೀಡಿದ್ದ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ [ಖುಷ್ಬೂ ಸೈಫಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅರ್ಜಿದಾರರಲ್ಲಿ ಒಬ್ಬರಾದ ಖುಷ್ಬೂ ಸೈಫಿ ಅವರು ಸಲ್ಲಿಸಿದ ಮೇಲ್ಮನವಿಯನ್ನು ಮಂಗಳವಾರ ಬೆಳಗ್ಗೆ ನೋಂದಾಯಿಸಲಾಗಿದ್ದು ಇದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಅರ್ಜಿದಾರರಿಂದ ಸಲ್ಲಿಕೆಯಾದ ಮೊದಲ ಮೇಲ್ಮನವಿಯಾಗಿದೆ.

Also Read
ವೈವಾಹಿಕ ಅತ್ಯಾಚಾರ: ಭಿನ್ನ ತೀರ್ಪಿತ್ತರೂ ʼಸುಪ್ರೀಂʼ ಸಮಸ್ಯೆ ಬಗೆಹರಿಸಲಿ ಎಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು

ಪತ್ನಿಯ ಸಮ್ಮತಿ ಇಲ್ಲದೆ ಆಕೆಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂಬ 375ರ ಎರಡನೇ ವಿನಾಯಿತಿಯ ಸಿಂಧುತ್ವವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ಸಿ ಹರಿ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮೇ 11ರಂದು ಪ್ರಕರಣ ಕುರಿತು ಭಿನ್ನ ತೀರ್ಪು ನೀಡಿತ್ತು. ನ್ಯಾ. ಶಕ್ದೆರ್ ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದರೆ ನ್ಯಾ ಶಂಕರ್‌ ಅದನ್ನು ಎತ್ತಿ ಹಿಡಿದಿದ್ದರು.

Also Read
ಪತ್ನಿ ಬಳಿ ಲೈಂಗಿಕತೆ ಕೋರಿ ಗಂಡ ತನ್ನ ಹಕ್ಕು ಚಲಾಯಿಸುತ್ತಾನೆ: ವೈವಾಹಿಕ ಅತ್ಯಾಚಾರ ತೀರ್ಪಿನಲ್ಲಿ ನ್ಯಾ. ಹರಿ ಶಂಕರ್

ಐಪಿಸಿಯ ಸೆಕ್ಷನ್ 375ರ ಎರಡನೇ ವಿನಾಯಿತಿ, ಸೆಕ್ಷನ್ 376 ಬಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 198 ಬಿಯು ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿ ಅಥವಾ ಬೇರ್ಪಟ್ಟ ಪತಿ ಲೈಂಗಿಕ ಸಂಭೋಗ ನಡೆಸುವುದಕ್ಕೆ ಸಂಬಂಧಿಸಿರುವುದರಿಂದ ಸಂವಿಧಾನದ 14, 15, 19 (1) (ಎ) ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಹೀಗಾಗಿ ತಡೆಹಿಡಿಯಲು ಅವು ಅರ್ಹವಾಗಿವೆ ಎಂದು ನ್ಯಾಯಮೂರ್ತಿ ಶಕ್ದೆರ್‌ ತಿಳಿಸಿದ್ದರು.

Also Read
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿದ ಮನವಿ: ಭಿನ್ನ ತೀರ್ಪು ನೀಡಿದ ದೆಹಲಿ ಹೈಕೋರ್ಟ್

ಆದರೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ಶಂಕರ್‌, “ವಿನಾಯಿತಿ 14, 19 ಅಥವಾ 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎನ್ನಲು ಯಾವುದೇ ಆಧಾರ ಇಲ್ಲ. ಇದರಲ್ಲಿ ಸ್ಪಷ್ಟ ವ್ಯತ್ಯಾಸಗಳಿವೆ. ಅರ್ಜಿಯನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಭಾವಿಸುವೆ” ಎಂದಿದ್ದರು.

ಮೇಲ್ಮನವಿದಾರೆ ಖುಷ್ಬೂ ಸೈಫಿ ಅವರು ನ್ಯಾ. ಶಕ್ದೆರ್‌ ಅವರ ತೀರ್ಪನ್ನು ಬೆಂಬಲಿಸಿದ್ದು ನ್ಯಾ. ಹರಿ ಶಂಕರ್ ಅವರ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com