ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯ: ಎನ್‌ಸಿಡಿಆರ್‌ಸಿ

ಕೇರಳ ಮೂಲದ ಖಾಸಗಿ ಆಸ್ಪತ್ರೆಯೊಂದು ಸಂತಾನ ಹರಣ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಸೂಕ್ತವಲ್ಲದ ರಕ್ತ ನೀಡಿದ್ದು ಇದರಿಂದ ಆಕೆ ಸಾವನ್ನಪಿದ ಆರೋಪ ಕೇಳಿ ಬಂದಿದೆ.
NCDRC
NCDRC
Published on

ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯವಾಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಪುನರುಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ 2002ರಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ₹ 1 ಲಕ್ಷ ವ್ಯಾಜ್ಯ ವೆಚ್ಚ ಮತ್ತು ₹ 20 ಲಕ್ಷ ಪರಿಹಾರ ಒದಗಿಸುವಂತೆ ತಿರುವನಂತಪುರ ಮೂಲದ ಖಾಸಗಿ ಆಸ್ಪತ್ರೆಗೆ ನ್ಯಾಯಮೂರ್ತಿ ಆರ್‌ ಕೆ ಅಗರವಾಲ್ (ಅಧ್ಯಕ್ಷರು) ಮತ್ತು ಡಾ ಎಸ್‌ ಎಂ ಕಾಂತಿಕರ್ (ಸದಸ್ಯರು) ಅವರಿದ್ದ ಪೀಠ ಸೂಚಿಸಿತು.

Also Read
ಥಲಸ್ಸೀಮಿಯಾ ರೋಗಿಗಳಿಗೆ ಕಿಲೇಷನ್‌ ಔಷಧ, ರಕ್ತ ಪೂರೈಕೆ: ಸರ್ಕಾರಕ್ಕೆ ನಿರ್ದೇಶನ ಕೋರಿ ಹೈಕೋರ್ಟ್‌ನಲ್ಲಿ ಮನವಿ

ಸಜೀನಾ ಎಂಬ ಮಹಿಳೆ ಮತ್ತು ಆಕೆಯ ಪತಿ ಎ ಕೆ ನಜೀರ್ ಅವರು ಸಮದ್ ಆಸ್ಪತ್ರೆಯಲ್ಲಿ ಬಂಜೆತನ ನಿವಾರಣಾ ಚಿಕಿತ್ಸೆ ಪಡೆಯುತ್ತಿದ್ದರು. ಗರ್ಭಾಶಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ನಂತರ, ಸಜೀನಾ ಅವರ ರಕ್ತ ವರ್ಗಾವಣೆ ಪ್ರಾರಂಭವಾಯಿತು ಆದರೆ ಒ+ ಬದಲಿಗೆ ಬಿ+ ರಕ್ತವನ್ನು ನೀಡಿದ್ದರಿಂದ ಅದು ವ್ಯತಿರಿಕ್ತ ಪರಿಣಾಮ ಬೀರಿ ಕೆಲ ದಿನಗಳಲ್ಲೇ ಆಕೆ ಮೃತಪಟ್ಟಿದ್ದರು.

Also Read
ಪಿಡುಗಾಗುತ್ತಿರುವ ರಕ್ತ ಚಂದನ ಕಳ್ಳಸಾಗಣೆ: ಪ್ರಕರಣಗಳ ವಿವರ ಕೋರಿದ ಮದ್ರಾಸ್ ಹೈಕೋರ್ಟ್

ಆಸ್ಪತ್ರೆಯು ವೈದ್ಯಕೀಯ ವೆಚ್ಚ ₹ 4.5 ಲಕ್ಷ ಹಾಗೂ, ಪರಿಹಾರ ರೂಪದಲ್ಲಿ ₹ 45 ಲಕ್ಷ ನೀಡಬೇಕು ಎಂದು ನಜೀರ್ ಕೇರಳ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಆದರೆ ನಜೀರ್‌ ಅವರ ಆರೋಪಗಳನ್ನು ಆಸ್ಪತ್ರೆ ನಿರಾಕರಿಸಿತ್ತು. ದೂರನ್ನು ಭಾಗಶಃ ಒಪ್ಪಿದ ರಾಜ್ಯ ಆಯೋಗ ₹ 9.33 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತ್ತು.

ರಾಜ್ಯ ಆಯೋಗದ ಸಂಶೋಧನೆಗಳನ್ನು ಆಧರಿಸಿ ಎನ್‌ಸಿಡಿಆರ್‌ಸಿ, ಆಸ್ಪತ್ರೆಯ ನಡೆಯಲ್ಲಿ ಎದ್ದುಕಾಣುವ ಲೋಪಗಳಿವೆ. ರಕ್ತದ ಗುಂಪು ಮತ್ತು ರೋಗಿಗಳನ್ನು ಗುರುತಿಸುವಲ್ಲಿ ದೋಷ ಉಂಟಾಗಿರುವ ಸಾಧ್ಯತೆ ಹೆಚ್ಚಿದೆ. ಈ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿ ಹೊಣೆಗಾರರು. ಹೀಗಾಗಿ ಆಯೋಗ ₹9,33,000 ಪರಿಹಾರ ಒದಗಿಸುವಂತೆ ಸೂಚಿಸಿರುವುದು ತಪ್ಪು. ಅರ್ಜಿದಾರರು ಹೆಚ್ಚಿನ ಪರಿಹಾರ ಪಡೆಯಲು ಅರ್ಹರು ಎಂದು ಅದು ಅಭಿಪ್ರಾಯಪಟ್ಟಿತು.

Kannada Bar & Bench
kannada.barandbench.com