ಕೆಫೆ ಕಾಫಿ ಡೇ ವಿರುದ್ಧ ಇಂಡಸ್ಇಂಡ್ ಬ್ಯಾಂಕ್ ಸಲ್ಲಿಸಿದ್ದ ದಿವಾಳಿತನದ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

ಶೈಲೇಂದ್ರ ಅಜ್ಮೀರಾ ಅವರನ್ನು ಮಧ್ಯಂತರ ಪರಿಹಾರ ವೃತ್ತಿಪರರನ್ನಾಗಿ ನ್ಯಾಯಾಲಯ ನೇಮಿಸಿದೆ.
Cafe coffee day
Cafe coffee day
Published on

ಕರ್ನಾಟಕ ಮೂಲದ ಪ್ರಸಿದ್ಧ ಕಾಫಿ ಉದ್ಯಮ ಕೆಫೆ ಕಾಫಿ ಡೇಯ ಮಾತೃಸಂಸ್ಥೆಯಾದ ಕಾಫಿ ಡೇ ಗ್ಲೋಬಲ್‌ ವಿರುದ್ಧ ಇಂಡಸ್‌ಇಂಡ್‌ ಬ್ಯಾಂಕ್‌ ಸಲ್ಲಿಸಿರುವ ದಿವಾಳಿತನದ ಅರ್ಜಿಯನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಈಚೆಗೆ ಸ್ವೀಕರಿಸಿದೆ.

ಶೈಲೇಂದ್ರ ಅಜ್ಮೀರಾ ಅವರನ್ನು ಮಧ್ಯಂತರ ಪರಿಹಾರ ವೃತ್ತಿಪರರನ್ನಾಗಿ ನ್ಯಾಯಾಲಯ ನೇಮಿಸಿದೆ.

ಕಾಫಿ ಡೇ ₹ 94 ಕೋಟಿಗೂ ಅಧಿಕ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ಇಂಡಸ್‌ಇಂಡ್ ಬ್ಯಾಂಕ್‌ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಟಿ ಕೃಷ್ಣವಲ್ಲಿ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

Also Read
ದಿವಾಳಿತನ ಪ್ರಕ್ರಿಯೆ: ಗೋಫಸ್ಟ್ ಏರ್‌ಲೈನ್ಸ್‌ ಮನವಿಗೆ ಸಮ್ಮತಿ ಸೂಚಿಸಿದ್ದ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ

ಅರ್ಜಿ ಆಧರಿಸಿ, ಪೀಠ  ದಿವಾಳಿ ಅರ್ಜಿಯನ್ನು ಸ್ವೀಕರಿಸಿದೆ. "ಪ್ರಸ್ತುತ ಅರ್ಜಿಯು ಪರಿಪೂರ್ಣವಾಗಿದ್ದು ಕಾಫಿ ಡೇ ಗ್ಲೋಬಲ್‌ ಸುಸ್ತಿದಾರನಾಗಿರುವುದನ್ನು ಸಾಬೀತುಪಡಿಸಿದೆ. ₹ 1 ಕೋಟಿಗಿಂತ ಹೆಚ್ಚಿನ ಸುಸ್ತಿ ಮೊತ್ತಕ್ಕೆ, 2016ರ ದಿವಾಳಿ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲಾಗಿದೆ. ಆ ಪ್ರಕಾರ, ಮೊರಟೋರಿಯಂ ಘೋಷಿಸಲಾಗಿದೆ" ಎಂದು ಜುಲೈ 20 ರಂದು ಎನ್‌ಸಿಎಲ್‌ಟಿ ನೀಡಿರುವ ತೀರ್ಪು ತಿಳಿಸಿದೆ.

2019ರಲ್ಲಿ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ವಿ ಜಿ ಸಿದ್ಧಾರ್ಥ, ಕೆಫೆ ಕಾಫಿ ಡೇ ಪ್ರವರ್ತಕರಾಗಿದ್ದರು. ಏಪ್ರಿಲ್ 7, 2022 ರಂತೆ, ಕಂಪನಿ ಬಳಿ ಒಟ್ಟು ₹94.1 ಕೋಟಿ ಮೊತ್ತ ಇದೆ ಎಂದು ಇಂಡಸ್‌ಇಂಡ್‌ ಹೇಳಿಕೊಂಡಿದ್ದು ಹೀಗಾಗಿ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Indus_Ind_Bank_Ltd__v__Coffee_Day_Global_Ltd.pdf
Preview
Kannada Bar & Bench
kannada.barandbench.com