ವಿದ್ಯಾರ್ಥಿಗಳ ವ್ಯಸನಕ್ಕೆ ಕಾರಣವಾಗುವ ಮಾದಕ ವಸ್ತು ಕಳ್ಳಸಾಗಣೆಯಿಂದ ಸಮಾಜದ ಮೇಲೆ ಮಾರಕ ಪರಿಣಾಮ: ದೆಹಲಿ ಹೈಕೋರ್ಟ್

ಸುಮಾರು 200 ಗ್ರಾಂನಷ್ಟು ಅಮಲು ಪದಾರ್ಥದೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯವ್ಯಕ್ತಪಡಿಸಿದೆ.
Justice Subramonium Prasad, Delhi High Court
Justice Subramonium Prasad, Delhi High Court

ಭೂಗತ ಜಗತ್ತಿನ ಸಂಘಟಿತ ಚಟುವಟಿಕೆ ಮತ್ತು ಮಾದಕ ದ್ರವ್ಯಗಳ ರಹಸ್ಯ ಕಳ್ಳಸಾಗಣೆಯು, ಹೆಣ್ಣು ಗಂಡು ಎಂಬ ಭೇದವಿಲ್ಲದೆ ಹದಿಹರೆಯದವರು ಮತ್ತು ವಿದ್ಯಾರ್ಥಿಗಳ ಮಾದಕವಸ್ತು ವ್ಯಸನಕ್ಕೆ ಕಾರಣವಾಗುತ್ತಿದೆ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ.

ಇದರಿಂದ ಒಟ್ಟಾರೆ ಸಮಾಜದ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದೆ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದ್ದು ಸುಮಾರು 200 ಗ್ರಾಂ ಅಮಲು ಪದಾರ್ಥದೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

Also Read
ಆರ್ಯನ್‌ ಖಾನ್‌ ಪ್ರಕರಣ: ಮುಖ್ಯ ತನಿಖಾಧಿಕಾರಿ ಹುದ್ದೆಯಿಂದ ಸಮೀರ್‌ ವಾಂಖೆಡೆ ವರ್ಗಾವಣೆ

ಪ್ರಕರಣ ತನಿಖೆಯ ಆರಂಭಿಕ ಘಟ್ಟದಲ್ಲಿದೆ. ಅರ್ಜಿದಾರ ಮಾದಕವಸ್ತು ದಂಧೆಕೋರರಿಗೆ ಅಮಲು ಪದಾರ್ಥಗಳನ್ನು ಸರಬರಾಜು ಮಾಡಿದ ಆರೋಪ ಆರೋಪ ಎದುರಿಸುತ್ತಿದ್ದು ಆತನಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತು ವಾಣಿಜ್ಯ ಪ್ರಮಾಣದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಎನ್‌ಡಿಪಿಎಸ್ ಕಾಯಿದೆಯಡಿ ಕ್ರೈಂ ಬ್ರಾಂಚ್‌ನಲ್ಲಿ ದಾಖಲಾದ ಮತ್ತೊಂದು ಅಪರಾಧದಲ್ಲಿ ವ್ಯಕ್ತಿ ಭಾಗಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಆತ ಇನ್ನೊಂದು ಅಪರಾಧ ಎಸಗುವ ಸಾಧ್ಯತೆಯಿದೆ ಎಂದ ಪೀಠ ಅರ್ಜಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com