ನ್ಯಾಯಮೂರ್ತಿಗಳ ವಲಯವಾರು ಪರಿಣತಿ ಆಧರಿಸಿ ಜುಲೈ 3ರಿಂದ ಹೊಸ ರೋಸ್ಟರ್ ವ್ಯವಸ್ಥೆ ಜಾರಿಗೊಳಿಸಲಿರುವ ಸುಪ್ರೀಂ

ಮೂಲಗಳ ಪ್ರಕಾರ, ರೋಸ್ಟರ್ ಹಂಚಿಕೆಯಲ್ಲಿ ಹೊಸ ವೈಜ್ಞಾನಿಕ ಬದಲಾವಣೆಯು ಪಾರದರ್ಶಕತೆ ಮತ್ತು ನಿರ್ದಿಷ್ಟತೆ ತರುವ ಗುರಿಯನ್ನು ಹೊಂದಿದೆ.
CJI Chandrachud, Supreme court
CJI Chandrachud, Supreme court

ಪ್ರಕರಣಗಳ ಫೈಲಿಂಗ್‌ ಹಂತದಲ್ಲಿ ನಿಗದಿಪಡಿಸುವ ಪ್ರಕರಣಗಳ ವರ್ಗ ಆಧರಿಸಿ ಹೊಸ, ವೈಜ್ಞಾನಿಕ ರೋಸ್ಟರ್‌ ವ್ಯವಸ್ಥೆಯನ್ನು ಜುಲೈ 3 ರಂದು ಸುಪ್ರೀಂ ಕೋರ್ಟ್‌ ಜಾರಿಗೆ ತರಲಿದೆ.

ನ್ಯಾಯಮೂರ್ತಿಗಳ ವಲಯವಾರು ಪರಿಣತಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿರುವ ಪ್ರಕರಣಗಳು ಮತ್ತು ಪ್ರಕರಣಗಳ ಬಾಕಿ ಉಳಿಕೆಯನ್ನು ಆಧರಿಸಿ ಹೊಸ ರೋಸ್ಟರ್ ವ್ಯವಸ್ಥೆ ರೂಪು ತಳೆದಿದೆ ಎಂದು ನ್ಯಾಯಾಂಗದ ಉನ್ನತ ಮೂಲಗಳು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿವೆ.

ಸಾಮಾನ್ಯ ಸಿವಿಲ್, ಕ್ರಿಮಿನಲ್ ಹಾಗೂ ಸೇವಾ ಪ್ರಕರಣಗಳು ಅತಿ ಹೆಚ್ಚಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತವೆ. ಜೊತೆಗೆ ಅಂತಹ ಪ್ರಕರಣಗಳು ಬಾಕಿ ಉಳಿದಿರುವ ಕಾರಣ ಈ ಬಗೆಯ ಪ್ರಕರಣಗಳ ವಿಚಾರಣೆಗೆ ಹೆಚ್ಚು ನ್ಯಾಯಮೂರ್ತಿಗಳನ್ನು ನಿಯೋಜಿಸಲಾಗಿದೆ.

ಇದಲ್ಲದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠಗಳು ವಿಚಾರಣೆ ನಡೆಸಲಿದ್ದು ಹಳೆಯ ಪ್ರಕರಣಗಳ ವಿಲೇವಾರಿಗಾಗಿ ಅಂತಹ ಹೆಚ್ಚಿನ ಪ್ರಕರಣಗಳಲ್ಲಿ ಇಬ್ಬರು ಅತಿ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಪೀಠಗಳು ವಿಚಾರಣೆ ನಡೆಸಲಿವೆ.

ಇತ್ತೀಚಿಗೆ ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿರುವುದು ಮತ್ತು ಕೆಲವರು ನಿವೃತ್ತಿಯ ಹೊಸ್ತಿಲಲ್ಲಿರುವುದರಿಂದ ಪ್ರಕರಣದ ವರ್ಗಗಳ ಮರುವಿತರಣೆ ಅಗತ್ಯವಿರುವುದರಿಂದ ವ್ಯವಸ್ಥೆಯ ಮರು ಅವಲೋಕನ ಅಗತ್ಯವಾಗಿದೆ ಎಂದು ಮೂಲಗಳು ವಿವರಿಸಿವೆ.

ಪ್ರಸ್ತುತ, ಹೊಸ ಆಡಳಿತದಲ್ಲಿ, ನೇರ ಮತ್ತು ಪರೋಕ್ಷ ತೆರಿಗೆ, ಭೂ ಸ್ವಾಧೀನ, ಪರಿಹಾರ (ಸಾವು ಅಥವಾ ದೈಹಿಕ ಹಾನಿ ಒಳಗೊಂಡ ಮೋಟಾರು ವಾಹನ ಪ್ರಕರಣಗಳು ಸೇರಿದಂತೆ), ಮಧ್ಯಸ್ಥಿಕೆ, ದಿವಾಳಿತನ ಮತ್ತು ಕಾರ್ಪೊರೇಟ್ ಕಾನೂನಿಗೆ  ಸಂಬಂಧಿಸಿದಂತೆ ವಿಶೇಷ ಪೀಠಗಳು ಇರಲಿವೆ.

ಪೀಠದಲ್ಲಿರುವ ವಿವಿಧ ನ್ಯಾಯಮೂರ್ತಿಗಳು ಕ್ರಿಮಿನಲ್‌ ಪ್ರಕರಣಗಳನ್ನು ನಿರ್ವಹಿಸಲಿದ್ದು ಅವರ ಸಂಖ್ಯೆಯನ್ನು ನೀಡಲಾಗಿದೆ.

ಮೂಲಗಳ ಪ್ರಕಾರ, ಪಾರದರ್ಶಕತೆ ಮತ್ತು ನಿರ್ದಿಷ್ಟತೆಯನ್ನು ತರುವ ಗುರಿಯೊಂದಿಗೆ ರೋಸ್ಟರ್ ಹಂಚಿಕೆಯಲ್ಲಿ ಹೊಸ ವೈಜ್ಞಾನಿಕ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೋಸ್ಟರ್ ಜೊತೆಗೆ, ಸಿಜೆಐ ಅವರೆದುರು ಹೊಸ ಪ್ರಕರಣಗಳ ಉಲ್ಲೇಖ ಮತ್ತು ಪಟ್ಟಿ ಪ್ರಕ್ರಿಯೆಯ ನೂತನ ವಿಧಾನ ಜುಲೈ 3 ರಿಂದ ಅಸ್ತಿತ್ವಕ್ಕೆ ಬರಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್‌ ಕ್ಲಿಕ್ಕಿಸಿ:

Also Read
ಹೊಸ ಪ್ರಕರಣಗಳ ಉಲ್ಲೇಖ ಮತ್ತು ಪಟ್ಟಿ: ಜುಲೈ 3ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನೂತನ ವಿಧಾನ
Kannada Bar & Bench
kannada.barandbench.com