ನ್ಯಾಯಾಂಗವನ್ನು ದೂಷಿಸುವುದು ಸರ್ಕಾರದ ಹೊಸ ಪ್ರವೃತ್ತಿ; ಹಿಂದೆ ಇದನ್ನು ಖಾಸಗಿ ವ್ಯಕ್ತಿಗಳು ಮಾಡುತ್ತಿದ್ದರು: ಸಿಜೆಐ

ಈ ಹಿಂದೆ ನ್ಯಾಯಾಧೀಶರ ಮೇಲೆ ಅಪಪ್ರಚಾರ ಮಾಡುವ ಯತ್ನಗಳು ಖಾಸಗಿ ವ್ಯಕ್ತಿಗಳಿಂದ ಮಾತ್ರ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಸರ್ಕಾರವೂ ಇದರಲ್ಲಿ ಸೇರಿಕೊಂಡಿದೆ ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Justice NV Ramana
Justice NV Ramana
Published on

ನ್ಯಾಯಾಂಗದ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸಕ್ಕೆ ಸರ್ಕಾರಗಳು ಕೈ ಹಾಕಿವೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ದಾಖಲಿಸಲಾಗಿದ್ದ ಎಫ್‌ಐಆರ್‌ ವಜಾ ಮಾಡಿದ್ದ ಛತ್ತೀಸಗಡ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸಿಜೆಐ ರಮಣ ನೇತೃತ್ವದ ಪೀಠವು ಮೇಲಿನಂತೆ ಹೇಳಿತು.

ಈ ಹಿಂದೆ ನ್ಯಾಯಾಧೀಶರ ಮೇಲೆ ಅಪಪ್ರಚಾರ ಮಾಡುವ ಯತ್ನಗಳು ಖಾಸಗಿ ವ್ಯಕ್ತಿಗಳಿಂದ ಮಾತ್ರ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಸರ್ಕಾರವೂ ಇದರಲ್ಲಿ ಸೇರಿಕೊಂಡಿದೆ ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.

Also Read
ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಆಕಾರ್‌; ನ್ಯಾಯಾಲಯದ ಆದೇಶದ ಹೊರತಾಗಿಯೂ ಮತ್ತೆ ಪ್ರಯಾಣಕ್ಕೆ ತಡೆ

“ನ್ಯಾಯಮೂರ್ತಿಗಳ ಹೆಸರಿಗೆ ಸರ್ಕಾರ ಮಸಿ ಬಳಿಯುವುದು ಈಗ ಹೊಸ ಪ್ರವೃತ್ತಿಯಾಗಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದ್ದು, ಇದನ್ನು ನಾವೀಗ ನ್ಯಾಯಾಲಯದಲ್ಲಿ ಕಾಣುತ್ತಿದ್ದೇವೆ. ಈ ಹಿಂದೆ ಖಾಸಗಿ ವ್ಯಕ್ತಿಗಳು ಮಾತ್ರ ಅದನ್ನು ಮಾಡುತ್ತಿದ್ದರು. ಈಗ ಪ್ರತಿದಿನವೂ ನಾವು ಅದನ್ನು ಕಾಣುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಅವರು “ಇದನ್ನು ಒಪ್ಪಲಾಗದು” ಎಂದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

Kannada Bar & Bench
kannada.barandbench.com