ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ, ಗುರುವಾರದಂದು ನಿಯಮಿತ ಪ್ರಕರಣಗಳ ವಿಚಾರಣೆ ನಡೆಯದು: ಸಿಜೆಐ ಖನ್ನಾ

ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ 83,410ರಷ್ಟು ಪ್ರಕರಣಗಳು ಬಾಕಿ ಇದ್ದು ಅವುಗಳ ಸಂಖ್ಯೆ ಕಡಿಮೆ ಮಾಡುವುದು ಈ ಬದಲಾವಣೆಯ ಉದ್ದೇಶವಾಗಿದೆ.
CJI Sanjiv Khanna
CJI Sanjiv Khanna
Published on

ಸುದೀರ್ಘ ಅಂತಿಮ ವಿಚಾರಣೆ ಅಗತ್ಯವಿರುವ ನಿಯಮಿತ ಪ್ರಕರಣಗಳನ್ನು ಅಂತಹ ಪ್ರಕರಣಗಳ ವಿಚಾರಣೆಗೆಂದೇ ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದ್ದ ಬುಧವಾರ ಮತ್ತು ಗುರುವಾರದಂದು ಆಲಿಸದೇ ಇರಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ 83,410ರಷ್ಟು ಪ್ರಕರಣಗಳು ಬಾಕಿ ಇದ್ದು ಅವುಗಳ ಸಂಖ್ಯೆ ಕಡಿಮೆ ಮಾಡುವುದು ಈ ಬದಲಾವಣೆಯ ಉದ್ದೇಶವಾಗಿದೆ.

Also Read
ತುರ್ತು ವಿಚಾರಣೆ ಕೋರುವ ಪ್ರಕರಣಗಳ ಮೌಖಿಕ ಉಲ್ಲೇಖ ಪರಿಪಾಠಕ್ಕೆ ನೂತನ ಸಿಜೆಐ ಖನ್ನಾ ನೇತೃತ್ವದ ಸುಪ್ರೀಂ ಗುಡ್‌ ಬೈ

ಸುಪ್ರೀಂ ಕೋರ್ಟ್‌ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್‌ ಖನ್ನಾ ನವೆಂಬರ್ 11ರಂದು ಅಧಿಕಾರ ವಹಿಸಿಕೊಂಡ ಬಳಿಕ ಜಾರಿಗೆ ಬಂದ ಮೊದಲ ಸುಧಾರಣೆ ಇದಾಗಿದೆ.

ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ಕೋರುವ ವರ್ಗಾವಣೆ ಅರ್ಜಿಗಳು, ಜಾಮೀನು ಮನವಿ ಸೇರಿದಂತೆ ಮಿಸಿಲೇನಿಯಸ್‌ ಪ್ರಕರಣಗಳನ್ನು ಮಂಗಳವಾರ, ಬುಧವಾರ ಹಾಗೂ ಗುರುವಾರ ಆಲಿಸಲಾಗುವುದು ಎಂದು ನ್ಯಾಯಾಲಯ ಶನಿವಾರ ಹೊರಡಿಸಿರುವ ಸುತ್ತೋಲೆ ತಿಳಿಸಿದೆ.

Also Read
ತುರ್ತು ವಿಚಾರಣೆ ಕೋರುವ ಪ್ರಕರಣಗಳ ಮೌಖಿಕ ಉಲ್ಲೇಖ ಪರಿಪಾಠಕ್ಕೆ ನೂತನ ಸಿಜೆಐ ಖನ್ನಾ ನೇತೃತ್ವದ ಸುಪ್ರೀಂ ಗುಡ್‌ ಬೈ

ಇದಲ್ಲದೆ, ಮಿಸಿಲೇನಿಯಸ್‌ ಅಥವಾ ನಿಯಮಿತ ವಿಚಾರಣೆಯೇ ಇದ್ದರೂ ಮಂಗಳವಾರ, ಬುಧವಾರ ಮತ್ತು ಗುರುವಾರದಂದು ಪಟ್ಟಿ ಮಾಡುವಂತೆ ನಿರ್ದೇಶಿಸಲಾದ ವಿಶೇಷ ಪೀಠದ ಪ್ರಕರಣಗಳು ಅಥವಾ ಭಾಗಶಃ ಆಲಿಸಿದ ಪ್ರಕರಣಗಳನ್ನು ಊಟದ ವಿರಾಮದ ನಂತರದ ಕಲಾಪದಲ್ಲಿ ಅಥವಾ ಸಕ್ಷಮ ಪ್ರಾಧಿಕಾರದ ನಿರ್ದೇಶನದಂತೆ ಆಲಿಸಬೇಕೆಂದು ಸುತ್ತೋಲೆ ತಿಳಿಸಿದೆ. ಮುಂದಿನ ಆದೇಶದವರೆಗೆ ಸುಪ್ರೀಂ ಕೋರ್ಟ್‌ ನಿರ್ಧಾರ ಜಾರಿಯಲ್ಲಿರಲಿದೆ. 

Kannada Bar & Bench
kannada.barandbench.com