ತುರ್ತು ವಿಚಾರಣೆ ಕೋರುವ ಪ್ರಕರಣಗಳ ಮೌಖಿಕ ಉಲ್ಲೇಖ ಪರಿಪಾಠಕ್ಕೆ ನೂತನ ಸಿಜೆಐ ಖನ್ನಾ ನೇತೃತ್ವದ ಸುಪ್ರೀಂ ಗುಡ್‌ ಬೈ

ಪ್ರಕರಣವನ್ನು ತುರ್ತಾಗಿ ವಿಚಾರಣೆ ಮಾಡುವಂತೆ ಸಲ್ಲಿಸುವ ಮನವಿಗಳನ್ನು ಇಮೇಲ್ ಅಥವಾ ಲಿಖಿತ ಚೀಟಿಗಳ ಮೂಲಕ ನೀಡಬೇಕು ಎಂದು ತಿಳಿಸಲಾಗಿದೆ.
CJI Sanjiv Khanna
CJI Sanjiv Khanna
Published on

ಮಹತ್ವದ ಪ್ರಕ್ರಿಯಾತ್ಮಕ ಬದಲಾವಣೆಯೊಂದರಲ್ಲಿ ನೂತನ ಸಿಜೆಐ ಸಂಜೀವ್‌ ಖನ್ನಾ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ತುರ್ತು ವಿಚಾರಣೆ ಕೋರಿ ಪ್ರಕರಣಗಳನ್ನು ಮೌಖಿಕವಾಗಿ ಉಲ್ಲೇಖಿಸುವುದನ್ನು ನಿಷೇಧಿಸಿದೆ.

ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ಮೌಖಿಕವಾಗಿ ಮಾಡುವ ಮನವಿಗಳನ್ನು ಇನ್ನು ಮುಂದೆ ಪರಿಗಣಿಸುವುದಿಲ್ಲ. ಅಂತಹ ಮನವಿಗಳನ್ನು ಇಮೇಲ್‌ ಅಥವಾ ಲಿಖಿತ ಚೀಟಿಗಳ ಮೂಲಕ ನೀಡಬೇಕು ಎಂದು ಸಿಜೆಐ ಖನ್ನಾ ಮಂಗಳವಾರ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

Also Read
ಜಾರಿ ನಿರ್ದೇಶನಾಲಯದಿಂದ ತುರ್ತು ವಿಚಾರಣೆ ಕೋರಿಕೆ: ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆ ತಡೆಹಿಡಿದ ದೆಹಲಿ ಹೈಕೋರ್ಟ್‌

"ಇನ್ನು ಮುಂದೆ ಯಾವುದೇ ಲಿಖಿತ ಅಥವಾ ಮೌಖಿಕ ಉಲ್ಲೇಖ ಇರುವಂತಿಲ್ಲ. ಇಮೇಲ್ ಅಥವಾ ಲಿಖಿತ ಚೀಟಿಯಲ್ಲಿ ಮಾತ್ರವೇ ತುರ್ತು ಪ್ರಕರಣಗಳನ್ನು ಉಲ್ಲೇಖಿಸಬೇಕು. ತುರ್ತಾಗಿ ಪ್ರಕರಣ ಆಲಿಸಲು ಇರುವ ಕಾರಣಗಳನ್ನು ತಿಳಿಸಬೇಕು" ಎಂದು ಸಿಜೆಐ ಹೇಳಿದರು.

ನಿವೃತ್ತ ಸಿಜೆಐ ಡಿ ವೈ ಚಂದ್ರಚೂಡ್‌ ಅವರ ಅಧಿಕಾರಾವಧಿಯಲ್ಲಿ ತುರ್ತಾಗಿ ಪ್ರಕರಣಗಳ ವಿಚಾರಣೆಗಾಗಿ ಮೌಖಿಕವಾಗಿ ಮನವಿ ಮಾಡಲು ವಕೀಲರಿಗೆ ಅವಕಾಶ ಮಾಡಿಕೊಡಲಾಗಿತ್ತಾದರೂ ಸಾಮಾನ್ಯವಾಗಿ ತೆರವು ಕಾರ್ಯಾಚರಣೆ ಇಲ್ಲವೇ ಸಂಭಾವ್ಯ ಬಂಧನಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರವೇ ಇದಕ್ಕೆ ಅನುಮತಿಸಲಾಗಿತ್ತು.  

Kannada Bar & Bench
kannada.barandbench.com