ಸುದೀರ್ಘ ರಜೆ ಕುರಿತು ಸಚಿವ ರಿಜಿಜು ಹೇಳಿಕೆ ಬೆನ್ನಲ್ಲೇ ಚಳಿಗಾಲದ ರಜೆಯಲ್ಲಿ ರಜಾಕಾಲೀನ ಪೀಠ ಇರುವುದಿಲ್ಲ ಎಂದ ಸಿಜೆಐ

ಸಾಮಾನ್ಯವಾಗಿ ಮೇ-ಜೂನ್‌ ಬೇಸಿಗೆ ರಜೆಯಲ್ಲಿ ರಜಾಕಾಲೀನ ಪೀಠಗಳನ್ನು ರಚಿಸಲಾಗುತ್ತದೆಯೇ ವಿನಾ ಡಿಸೆಂಬರ್‌ನಲ್ಲಿನ ಚಳಿಗಾಲದಲ್ಲಿ ಅಲ್ಲ.
CJI DY Chandrachud and Law Minister Kiren Rijiju
CJI DY Chandrachud and Law Minister Kiren Rijiju
Published on

ಮುಂಬರುವ ಚಳಿಗಾಲದ ರಜೆಯಲ್ಲಿ ಯಾವುದೇ ರಜಾಕಾಲೀನ ಪೀಠ ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಮೇ-ಜೂನ್‌ ಸಂದರ್ಭದ ಬೇಸಿಗೆ ರಜೆಯಲ್ಲಿ ರಜಾಕಾಲೀನ ಪೀಠಗಳನ್ನು ರಚಿಸಲಾಗುತ್ತದೆಯೇ ವಿನಾ ಡಿಸೆಂಬರ್‌ನಲ್ಲಿನ ಚಳಿಗಾಲದಲ್ಲಿ ಅಲ್ಲ.

“ಇಂದಿನಿಂದ 2023ರ ಜನವರಿ 2ರವರೆಗೆ ಯಾವುದೇ ಪೀಠ ಕರ್ತವ್ಯ ನಿರ್ವಹಿಸುವುದಿಲ್ಲ” ಎಂದು ಸಿಜೆಐ ಶುಕ್ರವಾರ ಹೇಳಿದರು. ಡಿಸೆಂಬರ್‌ 19ರಿಂದ ಚಳಿಗಾಲದ ರಜೆ ಆರಂಭವಾಗಲಿದ್ದು, ಜನವರಿ 2ರಿಂದ ನ್ಯಾಯಾಲಯ ಪುನಾರಂಭವಾಗಲಿದೆ.

ಇತ್ತೀಚೆಗೆ ಕಾನೂನು ಸಚಿವ ಕಿರೆನ್‌ ರಿಜಿಜು ಅವರು “ನ್ಯಾಯಾಲಯಗಳ ಸುದೀರ್ಘ ರಜೆಯು ನ್ಯಾಯದಾನ ಬಯಸುವವರಿಗೆ ಹೆಚ್ಚು ಅನುಕೂಲಕರವಾಗಿಲ್ಲ ಎಂಬ ಭಾವನೆ ಭಾರತದ ಜನರಲ್ಲಿದೆ. ಈ ಸದನದ ಸಂದೇಶ ಅಥವಾ ಭಾವನೆಯನ್ನು ನ್ಯಾಯಾಂಗಕ್ಕೆ ತಿಳಿಸುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ” ಎಂದಿದ್ದರು. ನ್ಯಾಯಾಲಯಗಳ ಸುದೀರ್ಘ ರಜೆಯ ಕುರಿತು ಆಗಾಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗುತ್ತಿರುತ್ತದೆ.

Kannada Bar & Bench
kannada.barandbench.com