ಕೋ- ಲೊಕೇಷನ್ ಹಗರಣ: ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ 7 ದಿನಗಳ ಕಾಲ ಸಿಬಿಐ ವಶಕ್ಕೆ

ಎನ್ಎಸ್ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಚಿತ್ರಾ ಅವರನ್ನು ಸಿಬಿಐ ಬಂಧಿಸಿತ್ತು.
ಕೋ- ಲೊಕೇಷನ್ ಹಗರಣ: ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ 7 ದಿನಗಳ ಕಾಲ ಸಿಬಿಐ ವಶಕ್ಕೆ
Published on

ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಸಿಬಿಐ ಬಂಧಿಸಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿಯ ನ್ಯಾಯಾಲಯವೊಂದು ಏಳು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ [ಸಿಬಿಐ ಮತ್ತು ಸಂಜಯ್‌ ಗುಪ್ತಾ ಮತ್ತಿತರರ ನಡುವಣ ಪ್ರಕರಣ].

ಮಾರ್ಚ್‌ 5ರಂದು ಜಾಮೀನು ಅರ್ಜಿ ತಿರಸ್ಕರಿಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್ “ಸಾರ್ವಜನಿಕ ಬೊಕ್ಕಸದ ನಷ್ಟಕ್ಕೆ ಆಳವಾಗಿ ಸಂಬಂಧ ಹೊಂದಿರುವ ಪಿತೂರಿಗಳನ್ನು ಒಳಗೊಂಡ ಕಾರಣಕ್ಕೆ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಜಾಮೀನು ಪ್ರಕರಣಗಳನ್ನು ವಿಭಿನ್ನವಾಗಿ ಪರಿಗಣಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದರು.

Also Read
‘ಎನ್ಎಸ್ಇ ಇತಿಹಾಸದ ಕರಾಳ ಅವಧಿ’: ಚಿತ್ರಾ ರಾಮಕೃಷ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

"ನಿರ್ದಿಷ್ಟ ಸಮಯದಲ್ಲಿ ಎನ್‌ಎಸ್‌ಇಯ ಯಾವುದೇ ಕಾರ್ಯಕಾರಿ ಮುಖ್ಯಸ್ಥರಿಗೆ ಅರಿವಿಲ್ಲದೆ ಮತ್ತು (ಅವರ) ಸಕ್ರಿಯ ಸಹಕಾರವಿಲ್ಲದೆ ಈ ರೀತಿಯ ಕೋ ಲೊಕೇಷನ್‌ ವಂಚನೆ ಸಾಧ್ಯವಿಲ್ಲ, ಈ ಅವಧಿಯನ್ನುಎನ್‌ಎಸ್‌ಇ ಇತಿಹಾಸದ ಕರಾಳ ಅವಧಿ ಎಂದು ಪರಿಗಣಿಸಬಹುದು” ಎಂದು ಅವರು ಹೇಳಿದ್ದರು.

ʼಸಿದ್ಧ ಪುರುಷʼ ಎಂದು ಚಿತ್ರಾ ಬಿಂಬಿಸಿದ್ದ ಎನ್‌ಎಸ್‌ಇಯ ಮತ್ತೊಬ್ಬ ಅಧಿಕಾರಿ ಆನಂದ್‌ ಸುಬ್ರಮಣಿಯನ್‌ ಅವರಿಗೆ ಅಸಮಂಜಸ ರೀತಿಯಲ್ಲಿ ವೇತನ ನಿಗದಿ ಮತ್ತು ಆಗಾಗ್ಗೆ ವೇತನ ಪರಿಷ್ಕರಣೆಯಂತಹ ದುಷ್ಕೃತ್ಯದಲ್ಲಿ ಆಕೆ ತೊಡಗಿದ್ದಾರೆ ಎಂದು ಸೆಬಿ ತನ್ನ ಆದೇಶದಲ್ಲಿ ತಿಳಿಸಿತ್ತು. ಆ ಮೂಲಕ ಹಗರಣ ಬೆಳಕಿಗೆ ಬಂದಿತ್ತು.

Kannada Bar & Bench
kannada.barandbench.com