ಕೇರಳದ ರಾಷ್ಟ್ರೀಯ ಉನ್ನತ ಕಾನೂನು ಅಧ್ಯಯನ ವಿಶ್ವವಿದ್ಯಾಲಯ (ಎನ್‌ಯುಎಎಲ್‌ಎಸ್) ಉಪಕುಲಪತಿ ಡಾ. ಕೆ ಸಿ ಸನ್ನಿ ಪ್ರಯಾಣಿಸುತ್ತಿದ್ದ ಜೀಪಿನ ಮೇಲೆ ಶನಿವಾರ ಆನೆ ದಾಳಿ ನಡೆದು ಅವರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ ಚೋಳನಾಯ್ಕನ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಕ್ಕಳ ಶಿಕ್ಷಣ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಡಾ. ಸನ್ನಿ ಮತ್ತು ಎಂಟು ಜನರ ತಂಡ ಅರಣ್ಯ ಪ್ರದೇಶದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತಂಡ ರೆಸ್ಟರಂಟ್ ಬಳಿ ನಿಂತಾಗ ಆನೆ ದಾಳಿ ಮಾಡಿತು ಎಂದು ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿವೆ.
"ಅವರು ಮಲಪ್ಪುರಂನಲ್ಲಿ ಮಾತನಾಡಲು ಹೋಗಿದ್ದರು. ನಂತರ ಅವರು ಶಿಬಿರದ ಉದ್ಘಾಟನೆಗೆ ತೆರಳುತ್ತಿದ್ದರು. ಅವರು ತಮ್ಮ ವಾಹನವನ್ನು ರೆಸ್ಟೋರೆಂಟ್‌ನಲ್ಲಿ ನಿಲ್ಲಿಸಿದ್ದರು. ಆಗ ದಾಳಿ ನಡೆದಿದೆ" ಎಂದು ಮೂಲಗಳು ತಿಳಿಸಿವೆ. ಡಾ.ಸನ್ನಿ ಅವರನ್ನು ಪೆರಿಂದಳ್ಮನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.