ಮೂರನೇ ವರ್ಷದ 'ಕರ್ನಾಟಕ ಸಂವಿಧಾನ ಫೆಲೋಶಿಪ್‌'ಗೆ ಅರ್ಜಿ ಆಹ್ವಾನಿಸಿದ ನ್ಯಾಯ ಸಂಸ್ಥೆ

ಇದು ಒಂದು ವರ್ಷದ ವೇತನ ಸಹಿತ ಫೆಲೋಶಿಪ್ ಆಗಿದ್ದು ಕರ್ನಾಟಕದ 18 ತಳ ಸಮುದಾಯದ ವಕೀಲರನ್ನು ಆಯ್ಕೆ ಮಾಡಲಾಗುತ್ತದೆ.
ಮೂರನೇ ವರ್ಷದ 'ಕರ್ನಾಟಕ ಸಂವಿಧಾನ ಫೆಲೋಶಿಪ್‌'ಗೆ ಅರ್ಜಿ ಆಹ್ವಾನಿಸಿದ ನ್ಯಾಯ ಸಂಸ್ಥೆ
Published on

ಜನರಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ʼನ್ಯಾಯʼ ಸಂಸ್ಥೆ 2026ನೇ ಸಾಲಿನ ಸಂವಿಧಾನ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ತಳ ಸಮುದಾಯಗಳಲ್ಲಿ ಕಾನೂನು ಅರಿವನ್ನು ಹೆಚ್ಚಿಸುವುದು ಮತ್ತು ಮತ್ತು ನ್ಯಾಯ ಪಡೆಯುವಲ್ಲಿ  ಇರುವ ಅಸಮಾನತೆಗಳನ್ನು ಕಡಿಮೆ ಮಾಡುವುದು ಫೆಲೋಶಿಪ್‌ನ ಉದ್ದೇಶವಾಗಿದೆ.

ಆಯ್ಕೆಯಾಗುವ ಫೆಲೋಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳು (ಎನ್‌ಜಿಒ), ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತು ಇನ್ನಿತರೆ ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಇದು ಒಂದು ವರ್ಷದ ವೇತನ ಸಹಿತ ಫೆಲೋಶಿಪ್‌ ಆಗಿದ್ದು ಕರ್ನಾಟಕದ 18 ತಳಮಟ್ಟದ ವಕೀಲರು ಫೆಲೋಶಿಪ್‌ಗೆ ಆಯ್ಕೆಯಾಗಲಿದ್ದಾರೆ. ಕ್ಷೇತ್ರಾಧಾರಿತವಾದ ಫೆಲೋಶಿಪ್‌ಗೆ ಆಯ್ಕೆಯಾದ ವಕೀಲರು (ಫೆಲೋಗಳು) ಕರ್ನಾಟಕದಲ್ಲಿ ನೆಲೆಸಿರಬೇಕು ಅಥವಾ ಸ್ಥಳಾಂತರಕ್ಕೆ ಸಿದ್ಧರಿರಬೇಕು.  ಫೆಲೋಶಿಪ್‌ ಅವಧಿ 12 ತಿಂಗಳುಗಳಾಗಿರುತ್ತದೆ.  ಆಯ್ಕೆಯಾದವರ ಕಾರ್ಯಕ್ಷಮತೆಯ ಆಧಾರದ ಮೇಲೆ ಫೆಲೋಶಿಪ್ ಅನ್ನು ಇನ್ನೂ ಒಂದು ವರ್ಷ ವಿಸ್ತರಿಸುವ ಸಾಧ್ಯತೆಗಳಿವೆ.

ಫೆಲೋಗಳ ಜವಾಬ್ದಾರಿ

1. ಸಮುದಾಯದ ಅಗತ್ಯಕ್ಕೆ ತಕ್ಕಂತೆ ಕನ್ನಡದಲ್ಲಿ ಕಾನೂನು ಅರಿವು ವಸ್ತುವಿಷಯ ರಚಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಡಿಡಿ ಚಂದನ, ಆಕಾಶವಾಣಿ ಮತ್ತಿತರ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಸಾರ ಮಾಡಬೇಕಾಗುತ್ತದೆ.

 2. ತಳಮಟ್ಟದ ಸಮುದಾಯ ಸದಸ್ಯರಿಗೆ ಕಾನೂನು ಅರಿವು ಮತ್ತು ಸಾಮರ್ಥ್ಯ ನಿರ್ಮಾಣ ತರಬೇತಿ ನೀಡುವುದು. 

3. ನ್ಯಾಯ ಸಂಸ್ಥೆ ಸಹಯೋಗ ಹೊಂದಿರುವ ತಳಮಟ್ಟದ ಸಂಸ್ಥೆಗಳ ಫಲಾನುಭವಿಗಳಿಂದ ಮತ್ತು ನ್ಯಾಯದ ವಾಟ್ಸಾಪ್ ಸಹಾಯವಾಣಿಯಲ್ಲಿ ಸ್ವೀಕರಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು. 

4. ಸಮುದಾಯದ ಕಾನೂನು ಸಮಸ್ಯೆಗಳಿಗೆ ಸಲಹೆ ನೀಡುವುದು. 

5. ಕ್ಷೇತ್ರಾಧಾರಿತ ಕಾರ್ಯಕ್ರಮಗಳಲ್ಲಿ ಉಚಿತ (ಪ್ರೋ ಬೋನೊ) ಕಾನೂನು ಪ್ರತಿನಿಧಿತ್ವ ನೀಡುವುದು. 

6. ಸಾಮೂಹಿಕ ಸಮಸ್ಯೆಗಳನ್ನು ಗುರುತಿಸಿ, ನ್ಯಾಯ ತಂಡದೊಂದಿಗೆ ಪರಿಹಾರಕ್ಕೆ ಸಹಕಾರ ನೀಡುವುದು.

ಯಾರು ಅರ್ಜಿ ಸಲ್ಲಿಸಬಹುದು?

  1. ಕನ್ನಡದಲ್ಲಿ ಸರಾಗವಾಗಿ ಮಾತನಾಡುವ, ತಳಮಟ್ಟದಲ್ಲಿ ಕೆಲಸ ಮಾಡುವ, ಅತ್ಯಂತ ನುರಿತ ವಕೀಲರು.

  2. ಕರ್ನಾಟದಲ್ಲಿ ಕನಿಷ್ಠ 3 ವರ್ಷಗಳ ವಕಾಲತ್ತು ಅನುಭವ ಹೊಂದಿದವರು.

  3. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸೂಕ್ತ ಕಾನೂನು ವೇದಿಕೆಗಳಲ್ಲಿ ಪ್ರತಿನಿಧಿಸಲು ಸಿದ್ಧರಿರುವವರು.

  4. ಮಹಿಳಾ ಹಕ್ಕುಗಳು, ಮಕ್ಕಳ ಹಕ್ಕುಗಳು, ಅಂಗವೈಕಲ್ಯ ಹಕ್ಕುಗಳು, ಕಾರ್ಮಿಕ ಹಕ್ಕುಗಳು ಅಥವಾ ಹಿಂದುಳಿದ ಸಮುದಾಯಗಳ ಹಕ್ಕುಗಳಲ್ಲಿ ಪರಿಣತಿ ಹೊಂದಿದವರು.

  5. ಸಾಮಾಜಿಕ ಯೋಜನೆಗಳು ಮತ್ತು ಹಕ್ಕುಗಳ ಕುರಿತು ಸೂಕ್ಷ್ಮ ತಿಳಿವುಳ್ಳವರು.

  6. ವ್ಯಾಜ್ಯ ಪರಿಹಾರದಲ್ಲಿ  (dispute resolution)  ಅನುಭವ ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರುವವರು.

  7. ಕಾನೂನು ಜಾಗೃತಿ ಕೆಲಸದಲ್ಲಿ ಆಸಕ್ತಿ ಹೊಂದಿದವರು.

  8. ಗುರುತಿಸಲಾದ ಸಮಸ್ಯೆಗಳನ್ನು ಆಧರಿಸಿ ಸಮುದಾಯ ಕೌಶಲ್ಯ  ರೂಪಿಸಲು ಸಿದ್ಧರಿರುವವರು.

ಸ್ಟೈಫಂಡ್/ ಮಾಸಿಕ ವೇತನ: ಪ್ರತಿಯೊಬ್ಬ ಫೆಲೋಗೆ ₹30,000 ಮಾಸಿಕ ಸ್ಟೈಫಂಡ್ ದೊರೆಯುತ್ತದೆ.

ಕೆಲಸದ ಸ್ಥಳ: ಫೆಲೋಶಿಪ್ ಕೆಲಸವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುತ್ತದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31 ಅಕ್ಟೋಬರ್ 2025 (ರೋಲಿಂಗ್ ಆಧಾರದ ಮೇಲೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ)

ಫೆಲೋಶಿಪ್ ಪ್ರಾರಂಭ ದಿನಾಂಕ: 1 ಜನವರಿ 2026

ಫೆಲೋಶಿಪ್ ಅಂತಿಮ ದಿನಾಂಕ: 31 ಡಿಸೆಂಬರ್ 2026(ಆರಂಭ ಮತ್ತು ಅಂತಿಮ ದಿನಾಂಕಗಳು ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.)

ಫೆಲೋಶಿಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, https://kannada.nyaaya.org/access-to-justice-network/samvidhaan-fellowship/  ಸಂಪರ್ಕಿಸಿ 

ಅರ್ಜಿ ನಮೂನೆ: https://forms.gle/swrEHAwHdcVcokeKA

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:📧 ಶಿರೀಷ ಬಿ. ರೆಡ್ಡಿ, ಕಾರ್ಯಕ್ರಮ ವ್ಯವಸ್ಥಾಪಕರು, ನ್ಯಾಯ ಸಂಸ್ಥೆ- shirisha@nyaaya.in 

ನ್ಯಾಯ ಸಂಸ್ಥೆ ಬಗ್ಗೆ:ನ್ಯಾಯ ಒಂದು ಮುಕ್ತ ಪ್ರವೇಶ ಡಿಜಿಟಲ್ ಕಾನೂನು ಸಂಪನ್ಮೂಲವಾಗಿದೆ. ಇದು ಸರಳ, ಕಾರ್ಯಸಾಧ್ಯ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತೆ ರೂಪಿಸಲಾಗಿದ್ದು ನಾಗರಿಕರಿಗೆ ದಿನನಿತ್ಯದ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ನ್ಯಾಯ ಪಡೆಯಲು ಅಧಿಕಾರ ಚಲಾಯಿಸುತ್ತಾರೆ. ನ್ಯಾಯ ಎಂಬುದು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಯೋಜನೆಯಾಗಿದೆ. ಭಾರತೀಯ ಕಾನೂನು ಮತ್ತು ನೀತಿಯಲ್ಲಿ ಸುಧಾರಣೆಗಳಿಗೆ ಸಕ್ರಿಯವಾಗಿ ಕೊಡುಗೆ ನೀಡುವ ಪ್ರಮುಖ ನೀತಿ ಚಿಂತಕರ ಸಂಸ್ಥೆಯೇ ʼವಿಧಿʼ.  

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:

Attachment
PDF
Karnataka Samvidhaan Fellowship Applications 2025 - 2026 English & Hindi_20251008_183617_0000
Preview
Kannada Bar & Bench
kannada.barandbench.com