ಪ್ರಕರಣ ಬಾಕಿ ಉಳಿಯುವುದಕ್ಕೆ ಅವುಗಳನ್ನು ಮುಂದೂಡಬೇಕೆನ್ನುವ ವಕೀಲರ ಕೋರಿಕೆಯೂ ಒಂದು ಕಾರಣ: ನ್ಯಾ. ಎಂ ಆರ್ ಶಾ

"ವೈಯಕ್ತಿಕ ತೊಂದರೆಗಳನ್ನು ಉಲ್ಲೇಖಿಸಿ ಪ್ರತಿದಿನ 5ರಿಂದ 6 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದೂಡಿಕೆ ಪತ್ರಗಳನ್ನು ನೀಡಲಾಗುತ್ತದೆ" ಎಂದು ನ್ಯಾ. ಶಾ ಹೇಳಿದರು.
ಪ್ರಕರಣ ಬಾಕಿ ಉಳಿಯುವುದಕ್ಕೆ ಅವುಗಳನ್ನು ಮುಂದೂಡಬೇಕೆನ್ನುವ ವಕೀಲರ ಕೋರಿಕೆಯೂ ಒಂದು ಕಾರಣ: ನ್ಯಾ. ಎಂ ಆರ್ ಶಾ
Justice MR Shah

ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಪ್ರಮಾಣದ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ವಕೀಲರು ಪದೇ ಪದೇ ಅವುಗಳನ್ನು ಮುಂದೂಡುವಂತೆ ಕೋರುವುದೂ ಒಂದು ಕಾರಣ ಎಂದು ನ್ಯಾಯಮೂರ್ತಿ ಎಂ ಆರ್ ಶಾ ಮಂಗಳವಾರ ಹೇಳಿದ್ದಾರೆ.

ದೇಶದೆಲ್ಲೆಡೆ ಪಟಾಕಿ ತಯಾರಿಕೆ ಮತ್ತು ಬಳಕೆ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣವನ್ನು ಅಂತಿಮ ಇತ್ಯಾರ್ಥಕ್ಕಾಗಿ ಯಾವಾಗ ಪಟ್ಟಿ ಮಾಡಬೇಕು ಎಂದು ಸಂಬಂಧಪಟ್ಟಂತೆ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರೊಂದಿಗೆ ಚರ್ಚಿಸುವಾಗ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Also Read
ಆದೇಶ ಉಲ್ಲಂಘನೆ: ದೇಶದ ಆರು ಪ್ರಮುಖ ಪಟಾಕಿ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂಕೋರ್ಟ್

" ಬಾಕಿ ಉಳಿಯುವುದಕ್ಕೆ ಒಂದು ಕಾರಣ ಎಂದರೆ ಮುಂದೂಡಿಕೆ ಪತ್ರಗಳು. ವೈಯಕ್ತಿಕ ತೊಂದರೆಗಳನ್ನು ಉಲ್ಲೇಖಿಸಿ ಪ್ರತಿದಿನ 5 ರಿಂದ 6 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂದೂಡಿಕೆ ಪತ್ರಗಳನ್ನು ನೀಡಲಾಗುತ್ತದೆ” ಎಂದು ಅವರು ಹೇಳಿದರು.

ನಿಜಕ್ಕೂ ನಮಗೆ ಹೆಚ್ಚಿನ ಹೊರೆ ಇದೆ. ಪ್ರತಿದಿನ ಒಬ್ಬರಲ್ಲಾ ಒಬ್ಬ ವಕೀಲರು ತಮ್ಮ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಕೇಳುತ್ತಾರೆ” ಎಂದು ನ್ಯಾಯಮೂರ್ತಿಗಳು ಒಂದು ಹಂತದಲ್ಲಿ ಹೇಳಿದರು.

ಆಗ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು 70,000 ಪ್ರಕರಣಗಳು ಬಾಕಿ ಇವೆ ಎಂದರು. ಆಗ ಶಾ “ವಕೀಲರು ಪ್ರಕರಣ ಮುಂದೂಡುವುದೇ ಇದಕ್ಕೆ ಕಾರಣ… ಯಾರೋ ಪ್ರಮಾಣಪತ್ರ ನೀಡಲು ಎಂದು ನಾವು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಕಿರಿಯ ವಕೀಲರನ್ನು ವಾದಿಸಲು ಕೇಳುತ್ತೇವೆ. ಆದರೆ ಅವರು ಮಾಡುವುದಿಲ್ಲ. ಕಿರಿಯ ವಕೀಲರು ವಾದಿಸಿದರೆ ನಾವು ಶೇ 5ರಷ್ಟು ರಿಯಾಯಿತಿ ನೀಡುತ್ತೇವೆ ಎಂದರು. ಆಗ ದವೆ ಅವರು ಲಘು ದಾಟಿಯಲ್ಲಿ “ನಮ್ಮ ಗೌನ್‌ಗಳನ್ನು ತೆಗೆದಿರಿಸಬೇಕಾಗುತ್ತದೆ” ಎಂದು ಪ್ರತಿಕ್ರಿಯಿಸಿದರು. ಅಂತಿಮವಾಗಿ ಜುಲೈ 22ಕ್ಕೆ ನ್ಯಾಯಾಲಯ ಪ್ರಕರಣದ ವಿಚಾರಣೆ ನಿಗದಿಪಡಿಸಿತು.

Related Stories

No stories found.