ಅಶ್ಲೀಲ ಚಲನಚಿತ್ರ ಪ್ರಕರಣ: ಕುಂದ್ರಾ, ಶೆರ್ಲಿನ್ ಚೋಪ್ರಾ, ಪೂನಂಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು

ಎಲ್ಲಾ ಆರೋಪಿಗಳು ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದು ಅವರ ಬಗ್ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಗಮನಿಸಿತು.
Poonam Pandey, Raj Kundra and Sherlyn Chopra
Poonam Pandey, Raj Kundra and Sherlyn Chopra Facebook, Twitter

ಒಟಿಟಿ ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್‌ ಕುಂದ್ರಾ ರೂಪದರ್ಶಿಗಳಾದ ಶೆರ್ಲಿನ್‌ ಚೋಪ್ರಾ, ಪೂನಂ ಪಾಂಡೆ ಹಾಗೂ ಇನ್ನಿಬ್ಬರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ [ರಿಪು ಸುದನ್‌ ಬಾಲ್‌ಕಿಶನ್‌ ಕುಂದ್ರಾ ಅಲಿಯಾಸ್‌ ರಾಜ್‌ ಕುಂದ್ರಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಎಲ್ಲಾ ಆರೋಪಿಗಳು ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದು ಅವರ ಬಗ್ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಗಮನಿಸಿತು.  

Also Read
ಅಶ್ಲೀಲ ಚಿತ್ರ ಪ್ರಕರಣದ ಸುಳಿಯಲ್ಲಿ ರಾಜ್‌ ಕುಂದ್ರಾ: 1,497 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಮುಂಬೈ ಪೊಲೀಸರು

ಹೀಗಾಗಿ ಆರೋಪಿಗಳು ತನಿಖೆಗೆ ಸಹಕರಿಸಬೇಕು ಮತ್ತು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ ವಿಧಿಸಬಹುದಾದ ಷರತ್ತುಗಳಿಗೆ ಬದ್ಧವಾಗಿ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ತಿಳಿಸಿತು.

ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕೆಲವು ಜಾಲತಾಣಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಮಧುಕರ್ ಕ್ರಿಶನ್ ಖೇಣಿ ಎಂಬುವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಾಗಿತ್ತು. ಬಾಲಿವುಡ್‌ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಕುಂದ್ರಾ ಅವರನ್ನು ಜುಲೈ 2021 ರಲ್ಲಿ ಮುಂಬೈ ಪೋಲೀಸರು ಬಂಧಿಸಿದ್ದರು.

Related Stories

No stories found.
Kannada Bar & Bench
kannada.barandbench.com