ಹಿಂದೂ ದೇವರಲ್ಲಿ ನಂಬಿಕೆ ಇರುವ ಅನ್ಯಧರ್ಮೀಯರು ದೇಗುಲ ಪ್ರವೇಶಿಸುವುದನ್ನು ತಡೆಯುವಂತಿಲ್ಲ: ಮದ್ರಾಸ್ ಹೈಕೋರ್ಟ್

ತಿರುವಟ್ಟಾರ್‌ನಲ್ಲಿರುವ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್‌ನ ಕುಂಭಾಭಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸಲು ಅನುಮತಿ ನೀಡದಂತೆ ಸೂಚಿಸಬೇಕೆಂದು ಅರ್ಜಿದಾರರು ಕೋರಿದ್ದರು.
Madurai Meenakshi Temple
Madurai Meenakshi Temple Image for representative purposes only

ಇನ್ನೊಂದು ಧರ್ಮಕ್ಕೆ ಸೇರಿದ ವ್ಯಕ್ತಿಗೆ ನಿರ್ದಿಷ್ಟ ಹಿಂದೂ ದೇವತೆಯಲ್ಲಿ ನಂಬಿಕೆಯಿದ್ದರೆ, ಆ ದೇವರ ದೇವಸ್ಥಾನ ಪ್ರವೇಶ ತಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಿ ಸೋಮನ್ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾರ್ಯದರ್ಶಿ, ಇನ್ನಿತರರ ನಡುವಣ ಪ್ರಕರಣ].

ತಿರುವಟ್ಟಾರ್‌ನಲ್ಲಿರುವ ಅರುಲ್ಮಿಘು ಆದಿಕೇಶವ ಪೆರುಮಾಳ್ ತಿರುಕೋವಿಲ್‌ನ ಕುಂಭಾಭಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸಲು ಅನುಮತಿ ನೀಡದಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ ಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರಿದ್ದ ವಿಭಾಗೀಯ ಪೀಠ ಈ ಅವಲೋಕನಗಳನ್ನು ನೀಡಿದೆ.

ಕ್ರೈಸ್ತ ಧರ್ಮಕ್ಕೆ ಸೇರಿದವರು ಎನ್ನಲಾದ ಸಚಿವರೊಬ್ಬರ ಹೆಸರನ್ನು ಕುಂಭಾಭಿಷೇಕ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಸಿ ಸೋಮನ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು.

Also Read
ಸಹಿಷ್ಣುತೆ ಹಿಂದೂ ಧರ್ಮದ ಪರಮ ಕುರುಹು: ಎರಡು ಪಂಥಗಳಿಗೂ ದೇವಾಲಯದಲ್ಲಿ ಪಠನೆ ಮಾಡಲು ಅನುಮತಿಸಿದ ಮದ್ರಾಸ್‌ ಹೈಕೋರ್ಟ್‌

ನಾಗೋರ್ ದರ್ಗಾ ಮತ್ತು ವೇಲಂಕಣಿ ಚರ್ಚ್‌ಗಳಲ್ಲಿ ವಿವಿಧ ಹಿಂದೂ ದೇವರುಗಳ ಮೇಲೆ ಹುಟ್ಟಿನಿಂದ ಕ್ರೈಸ್ತರಾದ ಡಾ. ಕೆ ಜೆ ಯೇಸುದಾಸ್ ಅವರ ಭಕ್ತಿಗೀತೆಗಳನ್ನು ಯಾವುದೇ ಆಕ್ಷೇಪಣೆಗಳಿಲ್ಲದೆ ಹಾಕುತ್ತಿರುವುದನ್ನು ನ್ಯಾಯಾಲಯ ಇದೇ ವೇಳೆ ಎತ್ತಿ ತೋರಿಸಿದೆ.

ಅಲ್ಲದೆ ಕುಂಭಾಭಿಷೇಕದಂತಹ ಸಾರ್ವಜನಿಕ ಉತ್ಸವ ನಡೆದಾಗ ದೇಗುಲ ಪ್ರವೇಶಿಸುವ ಪ್ರತಿಯೊಬ್ಬ ಭಕ್ತನ ಧಾರ್ಮಿಕ ಅಸ್ಮಿತೆಯನ್ನು ಪರಿಶೀಲಿಸುವುದು ಅಧಿಕಾರಿಗಳಿಗೆ ಅಸಾಧ್ಯವಾಗುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

"ನಮ್ಮ ಪರಿಗಣಿತ ಅಭಿಪ್ರಾಯದಲ್ಲಿ, ದೇವಾಲಯದ ಕುಂಭಾಭಿಷೇಕದಂತಹ ಸಾರ್ವಜನಿಕ ಉತ್ಸವ ನಡೆದಾಗ, ದೇವಾಲಯದ ಪ್ರವೇಶ ಅನುಮತಿಸುವ ಉದ್ದೇಶದಿಂದ ಪ್ರತಿಯೊಬ್ಬ ಭಕ್ತನ ಧಾರ್ಮಿಕ ಗುರುತನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಅಸಾಧ್ಯವಾಗುತ್ತದೆ. ಮತ್ತೊಂದು ಧರ್ಮಕ್ಕೆ ಸೇರಿದ ವ್ಯಕ್ತಿ, ನಿರ್ದಿಷ್ಟ ಹಿಂದೂ ದೇವತೆಯಲ್ಲಿ ನಂಬಿಕೆಯನ್ನು ಹೊಂದಿದ್ದರೆ, ಅದನ್ನು ತಡೆಯಲು ಸಾಧ್ಯವಿಲ್ಲ ಅಥವಾ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗದು” ಎಂದು ತಿಳಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com