ಸ್ಪೈಸ್‌ಜೆಟ್‌ನ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಇತ್ತೀಚಿನ ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಮನವಿ ಸಲ್ಲಿಸಲಾಗಿದೆ.
Spice Jet
Spice Jet

ಇತ್ತೀಚೆಗೆ ಉಂಟಾದ ಸುರಕ್ಷತಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರ ಏರ್‌ಲೈನ್‌ ಸ್ಪೈಸ್‌ಜೆಟ್‌ನ ಎಲ್ಲಾ ಹಾರಾಟ ಸೇವೆಗಳನ್ನು ನಿಲ್ಲಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Also Read
ಕಂಪೆನಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸ್ಪೈಸ್‌ಜೆಟ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಈ ಸಂಬಂಧ ರಾಹುಲ್ ಭಾರದ್ವಾಜ್ ಎಂಬ ವಕೀಲರು ತಮ್ಮ ಪುತ್ರ ಯುಗನ್ ಭಾರದ್ವಾಜ್ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

Also Read
ವಂಚನೆ ಪ್ರಕರಣ: ಸ್ಪೈಸ್‌ಜೆಟ್‌ ಪ್ರವರ್ತಕ ಅಜಯ್‌ ಸಿಂಗ್‌ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಪ್ರಯಾಣಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವಂತಹ ಅಪಘಾತ ತಡೆಯುವ ಉದ್ದೇಶದಿಂದ ಸ್ಪೈಸ್‌ಜೆಟ್‌ನವಿಮಾನಗಳನ್ನು ಸ್ಥಗಿತಗೊಳಿಸಬೇಕಿದೆ. ಅನೇಕ ದುರ್ಘಟನೆಗಳು ಮತ್ತು ಕೂದಲೆಳೆಯಂಚಿನಲ್ಲಿ ಪಾರಾದ ಸನ್ನಿವೇಶಗಳು ಘಟಿಸಿದ್ದರೂ ನಾಗರಿಕವಿಮಾನಯಾನಮಹಾನಿರ್ದೇಶನಾಲಯ ಡಿಜಿಸಿಎ ಕ್ರಮ ಕೈಗೊಂಡಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ಪ್ರಯಾಣಿಕರಿಗೆ ಒದಗಿಸಲಾದ ಜೀವಿಸುವ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Also Read
[ಚುಟುಕು] ಸ್ಪೈಸ್‌ಜೆಟ್‌ ಮುಚ್ಚುವ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಮಾನಯಾನ ಸಂಸ್ಥೆ

ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿರುವ ಸ್ಪೈಸ್‌ಜೆಟ್‌ ಸರಣಿ ಅಪಘಾತಗಳ ನಂತರ ಇತ್ತೀಚೆಗೆ ಸುದ್ದಿಯಲ್ಲಿದೆ. ಸಂಸ್ಥೆಯ ದೆಹಲಿ- ದುಬೈವಿಮಾನ ತಾಂತ್ರಿಕದೋಷದಿಂದಾಗಿಕರಾಚಿಯಲ್ಲಿ ಇಳಿದರೆ ಮತ್ತೊಂದು ವಿಮಾನದ ವಿಂಡ್‌ಶೀಲ್ಡ್‌ ಒಡೆದಿತ್ತು. ಪಾಟ್ನಾದಿಂದ ಹಾರಾಟ ಆರಂಭಿಸಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಹಕ್ಕಿಯೊಂದು ಬಡಿದು ಅವಘಡ ಸಂಭವಿಸಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ.

Related Stories

No stories found.
Kannada Bar & Bench
kannada.barandbench.com