‘ಗೋಮಾಂಸ ಸೇವನೆ ತಪ್ಪಲ್ಲ’ ಟ್ವೀಟ್: ಕಂಗನಾ ವಿರುದ್ಧದ ಪ್ರಕರಣ ವಜಾಗೊಳಿಸಿದ ಪಂಜಾಬ್ ಹರ್ಯಾಣ ಹೈಕೋರ್ಟ್

ಕಂಗನಾ ವಿರುದ್ಧ ಎಫ್ಐಆರ್ ನೋಂದಾಯಿಸಲು ಮಾಡಿದ ಯತ್ನದಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದ ಅರ್ಜಿದಾರರ ಮನವಿಯನ್ನೂ ಕೋರ್ಟ್ ತಿರಸ್ಕರಿಸಿತು.
ನಟಿ ಕಂಗನಾ ರನೌತ್
ನಟಿ ಕಂಗನಾ ರನೌತ್

ಗೋಮಾಂಸ ಸೇವನೆ ಉತ್ತೇಜಿಸುವ ಟ್ವೀಟ್ ಮಾಡಿದ್ದಕ್ಕಾಗಿ ನಟಿ ಕಂಗನಾ ರನೌತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಜಾಗೊಳಿಸಿದೆ.

Also Read
ಬಿಎಂಸಿ ನಡೆ ಅಧಿಕಾರದಲ್ಲಿರುವವರ ಪ್ರತೀಕಾರದ ದ್ಯೋತಕ ಎಂದ ಕಂಗನಾ: 2 ಕೋಟಿ ರೂ ಪರಿಹಾರ ಕೋರಿ ಅರ್ಜಿ ಸಲ್ಲಿಕೆ
Also Read
ಕಂಗನಾ V. ಬಿಎಂಸಿ: ಕಟ್ಟಡ ಧ್ವಂಸ ಕಾರ್ಯಾಚರಣೆ ಹಿಂದೆ ದುರುದ್ದೇಶ ಗೋಚರಿಸುತ್ತದೆ ಎಂದ ಬಾಂಬೆ ಹೈಕೋರ್ಟ್‌

ಕಳೆದ ವರ್ಷ, ಒಂದು ಟ್ವೀಟ್‌ನಲ್ಲಿ ಕಂಗನಾ ಗೋಮಾಂಸ ಅಥವಾ ಇನ್ನಾವುದೇ ಮಾಂಸ ತಿನ್ನುವುದು ತಪ್ಪಲ್ಲ. ಇದು ಧಾರ್ಮಿಕ ವಿಚಾರವಲ್ಲ ಎಂದು ಹೇಳಿದ್ದರು.

ಟ್ವೀಟ್ ಒಂದು ನಿರ್ದಿಷ್ಟ ವರ್ಗದ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ ಎಂದು ಆರೋಪಿಸಿ ನವನೀತ್ ಗೋಪಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಮನೋಜ್ ಬಾಜಪೇಯ್ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ:

"ಆಕ್ಷೇಪಿತ ಪೋಸ್ಟಿನಲ್ಲಿ ಐಪಿಸಿ ಸೆಕ್ಷನ್ 295-ಎ ಅಡಿಯಲ್ಲಿ ಶಿಕ್ಷಾರ್ಹವಾದ ಅಂಶಗಳು ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪೋಸ್ಟ್ ಮಾಡಿರುವ ವ್ಯಕ್ತಿ ಸಸ್ಯಾಹಾರಿಯಾಗಿರುವುದರಿಂದ ಅದನ್ನು ಸಲಹೆ ಎನ್ನುವುದಿರಲಿ, ಗೋಮಾಂಸ ಸೇವನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲೂ ಕೂಡ ಬರುವುದಿಲ್ಲ.”

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಕಂಗನಾ ವಿರುದ್ಧ ಎಫ್ಐಆರ್ ನೋಂದಾಯಿಸಲು ಮಾಡಿದ ಯತ್ನದಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದ ಅರ್ಜಿದಾರರ ಮನವಿಯನ್ನೂ ಕೋರ್ಟ್ ತಿರಸ್ಕರಿಸಿತು. ಜೀವಕ್ಕೆ ಬೆದರಿಕೆ ಇರುವ ಕುರಿತಂತೆ ಪೂರಕ ವಿವರಗಳನ್ನು ನೀಡಿಲ್ಲ. ಅರ್ಜಿ ಅಸ್ಪಷ್ಟ ಮತ್ತು ತಪ್ಪು ಕಲ್ಪನೆಗಳಿಂದ ಕೂಡಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಲಾಯಿತು.

Related Stories

No stories found.
Kannada Bar & Bench
kannada.barandbench.com