ದ್ವೇಷ ಸಾಧನೆಗಾಗಿ ಪಿಐಎಲ್ ದುರ್ಬಳಕೆ: ಸುಪ್ರೀಂ ಕೋರ್ಟ್ ಕಿಡಿ

ತಡೆಯಾಜ್ಞೆ ಹೊರತಾಗಿಯೂ ಕಟ್ಟಡ ತೆರವು ಮಾಡಿದ್ದಕ್ಕಾಗಿ ಪಾಟ್ನಾದ ಅಧಿಕಾರಿಗಳನ್ನೂ ನ್ಯಾಯಾಲಯ ಕಟುವಾಗಿ ಟೀಕಿಸಿತು. ಆಸ್ತಿ ನಾಶಕ್ಕಾಗಿ ಸರ್ಕಾರ ನೀಡಿದ ಕುಂಟು ನೆಪ ತನಗೆ ಸರಿದೋರುತ್ತಿಲ್ಲ ಎಂದಿತು.
PIL
PIL
Published on

ಬೇರೆ ನ್ಯಾಯಾಲಯಗಳು ಅಥವಾ ನ್ಯಾಯವ್ಯಾಪ್ತಿಗಳಲ್ಲಿ ಪರಿಹಾರ ದೊರೆಯದಿದ್ದಾಗ ಹಾಗೆ ಪರಿಹಾರ ಪಡೆಯಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ [ಅಜಯ್ ಕುಮಾರ್ ಯಾದವ್ @ ಅಜಯ್ ರೈ ಮತ್ತು ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಂತಹ ದುರ್ಬಳಕೆ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹೈಕೋರ್ಟ್‌ಗಳು ಬಳಕೆಮಾಡಬಹುದಾದ ಸಮಯವನ್ನು ಇಂತಹ ದುರ್ಬಳಕೆ ತಿಂದುಹಾಕುತ್ತದೆ ಎಂದು ನ್ಯಾ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.

Also Read
ಡೆಂಗಿ ಹೆಚ್ಚಳ: ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು, ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

“ಸಮಸ್ಯೆ ಏನೆಂದರೆ ಪಿಐಎಲ್‌ ನ್ಯಾಯವ್ಯಾಪ್ತಿಯನ್ನು ವೈಯಕ್ತಿಕ ದ್ವೇಷ ಸಾಧನೆಗಾಗಿ ಪಿಐಎಲ್‌ ನ್ಯಾಯವ್ಯಾಪ್ತಿಯನ್ನು ವಿವಿಧ ಹೈಕೋರ್ಟ್‌ಗಳಲ್ಲಿ ಬಳಸಲಾಗುತ್ತಿದೆ. ಸಿವಿಲ್‌ ನ್ಯಾಯಾಲಯ ಅಥವಾ ಇನ್ನೆಲ್ಲಿಯೇ ಹೋದರೂ ವಿಜಯ ದೊರೆಯದಿದ್ದಾಗ ಪಿಐಎಲ್‌ ಹೂಡಿ ಆದೇಶ ಪಡೆಯುವವರಿದ್ದಾರೆ. ದಶಕಗಳಿಂದ ಬಾಕಿ ಉಳಿದಿರುವ ಕ್ರಿಮಿನಲ್‌ ಇಲ್ಲವೇ ಸಿವಿಲ್‌ ಮೊಕದ್ದಮೆಗಳನ್ನು ವಿಚಾರಣೆ ನಡೆಸುವ ಬದಲು ದಿನವಿಡೀ ಪಿಐಎಲ್‌ಗಳಿಗೆ ಸಂಬಂಧಿಸಿದಂತೆ ಅಸಂಬದ್ಧ ನಿರ್ದೇಶನಗಳನ್ನು ನೀಡಲಾಗುತ್ತಿದೆ” ಎಂದು ಅದು ಬೇಸರ ವ್ಯಕ್ತಪಡಿಸಿತು.

ಪಾಟ್ನಾದ ಸದರ್ ಪ್ರದೇಶದಲ್ಲಿ ಕೆಲಆಸ್ತಿಗಳ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಮೌಖಿಕ ಟೀಕೆ ಮಾಡಿತು.

ಕೆಲ ಅನಧಿಕೃತ ನಿರ್ಮಾಣಗಳನ್ನು ನೆಲಸಮಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಂತೆ ಮಾರ್ಚ್ 18 ರಂದು ಪಾಟ್ನಾ ಹೈಕೋರ್ಟ್ ನೀಡಿದ್ದ ಆದೇಶದಂತೆ  ತೆರವು ಕಾರ್ಯಾಚರಣೆ ನಡೆದಿತ್ತು.

Also Read
ರಾಜ್ಯದಲ್ಲಿ ಆನೆಗಳ ಅಸಹಜ ಸಾವು ಪ್ರಕರಣ: ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ನಿರ್ದೇಶಿಸಿದ ಹೈಕೋರ್ಟ್‌

ಗಮನಾರ್ಹವೆಂದರೆ ಹೈಕೋರ್ಟ್‌‌ ಪ್ರಕರಣವನ್ನು ವಿಲೇವಾರಿ ಮಾಡುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮಾರ್ಚ್ 22ರಂದು ಆದೇಶಿಸಿದ್ದರೂ ಮರುದಿನದಿಂದಲೇ ಎರಡು ದಿನಗಳ ಕಾಲ ತೆರವು ಕಾರ್ಯಾಚರಣೆ ನೀಡಿತ್ತು.

ಹೀಗಾಗಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ಹೊರತಾಗಿಯೂ ಕೆಲ ಕಟ್ಟಡ ತೆರವು ಮಾಡಿದ್ದಕ್ಕಾಗಿ ಪಾಟ್ನಾದ ಅಧಿಕಾರಿಗಳನ್ನೂ ಕಟುವಾಗಿ ಟೀಕಿಸಿತು. ಆಸ್ತಿ ನಾಶಕ್ಕಾಗಿ ಸರ್ಕಾರ ನೀಡುತ್ತಿರುವ ಸಬೂಬು ತನಗೆ ಸರಿದೋರುತ್ತಿಲ್ಲ ಎಂದಿತು.  ಅಂತೆಯೇ ತೆರವು ಕಾರ್ಯಾಚರಣೆ ವೇಳೆ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಆ ಮೊತ್ತವನ್ನು ಬಿಹಾರ ಸರ್ಕಾರ, ಪಾಟ್ನಾ ಮಹಾನಗರ ಪಾಲಿಕೆ ಮತ್ತು ತಪ್ಪಿತಸ್ಥ ಅಧಿಕಾರಿಗಳಿಂದಲೇ ಭರಿಸಬೇಕು ಎಂದು ಆದೇಶಿಸಿತು.

Kannada Bar & Bench
kannada.barandbench.com