ರಾಜಕೀಯ ಪಕ್ಷಗಳಿಗೂ ಪೋಶ್ ಕಾಯಿದೆ ಅನ್ವಯ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್: ನಾಳೆ ವಿಚಾರಣೆ

ರಾಜಕೀಯ ಪಕ್ಷಗಳು ಕಾಯಿದೆಯನ್ನು ಅದರಲ್ಲಿಯೂ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸುವ ಆಂತರಿಕ ದೂರುಗಳ ಸಮಿತಿ ರಚನೆಯ ವಿಚಾರದಲ್ಲಿ ಪಾಲಿಸುತ್ತಿಲ್ಲ ಎಂದಿದೆ ಮನವಿ.
Supreme Court
Supreme Court
Published on

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ಅನ್ನು (ಪಿಒಎಸ್‌ಎಚ್‌- ಪೋಶ್‌ ಕಾಯಿದೆ)  ದೇಶದೆಲ್ಲೆಡೆಯ ರಾಜಕೀಯ ಪಕ್ಷಗಳಿಗೂ ಅನ್ವಯಿಸುವಂತ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಸಲ್ಲಿಸಲಾಗಿದೆ .

ಸುಪ್ರೀಂ ಕೋರ್ಟ್ ವಕೀಲ ಯೋಗಮಯ ಎಂ ಜಿ ಅವರು ಅರ್ಜಿ  ಸಲ್ಲಿಸಿದ್ದು, ಡಿಸೆಂಬರ್ 9ರಂದು (ಸೋಮವಾರ) ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಮನಮೋಹನ್ ಅವರಿದ್ದ ಪೀಠ ವಿಚಾರಣೆ ನಡೆಸಲಿದೆ.

Also Read
ಪೋಶ್ ಕಾಯಿದೆ: ಎಲ್ಲಾ ಸರ್ಕಾರಿ ಇಲಾಖೆಗಳು ಸಾರ್ವಜನಿಕ ಉದ್ದಿಮೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಸುಪ್ರೀಂ ಆದೇಶ

ರಾಜಕೀಯ ಪಕ್ಷಗಳು ಕಾಯಿದೆಯನ್ನು ಅದರಲ್ಲಿಯೂ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸುವ ಆಂತರಿಕ ದೂರುಗಳ ಸಮಿತಿ (ಐಸಿಸಿ) ರಚನೆಯ ವಿಚಾರದಲ್ಲಿ ಪಾಲಿಸುತ್ತಿಲ್ಲ ಎಂದು ಮನವಿ ಗಮನ ಸೆಳೆದಿದೆ. ಕಾಯಿದೆಗೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ಸ್ಥಿತಿಗತಿಯ ವಿವರವನ್ನೂ ಅರ್ಜಿ ಒದಗಿಸಿದೆ:

1. ಸಿಪಿಐ (ಎಂ): ಬಾಹ್ಯ ಸದಸ್ಯರೊಂದಿಗೆ ಐಸಿಸಿಗಳನ್ನು ಸ್ಥಾಪಿಸಿದೆ.

2. ಎಎಪಿ: ತನ್ನ  ಸಮಿತಿಗಳ ಬಗ್ಗೆ ಪಾರದರ್ಶಕ ವಿವರ ಒದಗಿಸಿಲ್ಲ

3. ಬಿಜೆಪಿ: ಅಸಮರ್ಪಕವಾಗಿ ಐಸಿಸಿ ರಚಿಸಿರುವುದನ್ನು ಒಪ್ಪಿಕೊಂಡಿದೆ.  ದೂರುಗಳನ್ನು ಕಾಲಕಾಲಕ್ಕೆ ಶಿಸ್ತು ಸಮಿತಿಗಳು ನಿರ್ವಹಿಸುತ್ತವೆ ಅಥವಾ ರಾಜ್ಯ ಮಟ್ಟದ ಕಚೇರಿಗೆ ಉಲ್ಲೇಖಿಸಲಾಗುತ್ತದೆ.

4. ಕಾಂಗ್ರೆಸ್: ಅಸಮರ್ಪಕವಾಗಿ ಐಸಿಸಿ ರಚಿಸಿರುವುದನ್ನು ಒಪ್ಪಿಕೊಂಡಿದೆ.  ದೂರುಗಳನ್ನು ಕಾಲಕಾಲಕ್ಕೆ ಶಿಸ್ತು ಸಮಿತಿಗಳು ನಿರ್ವಹಿಸುತ್ತವೆ ಅಥವಾ ರಾಜ್ಯ ಮಟ್ಟದ ಕಚೇರಿಗೆ ಉಲ್ಲೇಖಿಸಲಾಗುತ್ತದೆ.

5. ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಘಟಕ: ಐಸಿಸಿಯನ್ನು ಕಡ್ಡಾಯಗೊಳಿಸಲಾಗಿದೆಯಾದರೂ ಇದು ವಿಶಾಲ ವ್ಯಾಪ್ತಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (ಎಐಸಿಸಿ) ಅನ್ವಯವಾಗಿಲ್ಲ.

Also Read
ಸರ್ಕಾರಿ ಉದ್ಯೋಗಾಂಕ್ಷಿಗಳ ಲಿಂಗ ಸೂಕ್ಷ್ಮತೆ ಮೌಲ್ಯಮಾಪನ: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ರಾಜಕೀಯ ಪಕ್ಷಗಳಲ್ಲಿ ಪ್ರಮಾಣಿತ ಐಸಿಸಿಗಳು ಇಲ್ಲದಿರುವುದರಿಂದ ಲೈಂಗಿಕ ಕಿರುಕುಳದ ದೂರುಗಳ ಅಸಮರ್ಪಕ ವರದಿ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಎಡೆ ಮಾಡಿಕೊಡಲಿದೆ. ಪ್ರಮಾಣಿತ ಐಸಿಸಿ ರಚನೆಯಿಂದ ಸಂತ್ರಸ್ತರಿಗೆ ವಿವಿಧ ಹಂತದ ರಕ್ಷಣೆ ಮತ್ತು ಬೆಂಬಲ ದೊರೆಯಲಿದೆ ಎಂದು ಅದು ಹೇಳಿದೆ.

ಕಾಯಿದೆಯಡಿಯಲ್ಲಿ 'ಕೆಲಸದ ಸ್ಥಳ' ಮತ್ತು 'ಉದ್ಯೋಗದಾತ' ಎಂಬ ವ್ಯಾಖ್ಯಾನಗಳನ್ನು ರಾಜಕೀಯ ಪಕ್ಷಗಳ ಸಂದರ್ಭಕ್ಕನುಗುಣವಾಗಿಯೂ ಅರ್ಥೈಸಿಕೊಳ್ಳಬೇಕು ಎಂದು ಮನವಿಯಲ್ಲಿ ಪ್ರಾರ್ಥಿಸಲಾಗಿದೆ.

ಕಾಯಿದೆ ಜಾರಿಗಾಗಿ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಜಾರಿಗೊಳಿಸುವಂತೆಯೂ ಅದು ಕೋರಿದೆ.

ಕೇಂದ್ರ ಸರ್ಕಾರ,  ಕಾಂಗ್ರೆಸ್, ಬಿಜೆಪಿ, ಟಿಎಂಸಿ, ಎನ್‌ಸಿಪಿ, ಎನ್‌ಪಿಪಿ, ಬಿಎಸ್‌ಪಿ, ಎಎಪಿ, ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳನ್ನು ಮೊಕದ್ದಮೆಯ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿದಾರರ ಪರವಾಗಿವಕೀಲರಾದ ಶ್ರೀರಾಮ್ ಪರಕ್ಕತ್ ಮತ್ತು ದೀಪಕ್ ಪ್ರಕಾಶ್ ವಾದ ಮಂಡಿಸಲಿದ್ದಾರೆ.

ಖಾಸಗಿ ವಲಯದ ಐಸಿಸಿ ಸದಸ್ಯರನ್ನು ಪೋಶ್‌ ಕಾಯಿದೆಯಡಿ ಸಾರ್ವಜನಿಕ ಸೇವಕರು ಎಂದು ಘೋಷಿಸುವಂತೆ ಕೋರಿದ್ದ ಬೇರೊಂದು ಪಿಐಎಲ್‌ ಸಂಬಂಧ ಈಚೆಗಷ್ಟೇ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.

Kannada Bar & Bench
kannada.barandbench.com