‘ನೀಟ್’ ಅಭ್ಯರ್ಥಿಗಳ ತಾಳಿ ತೆಗೆದಿರಿಸಿದ್ದು ಧಾರ್ಮಿಕ ಹಕ್ಕುಗಳ ಉಲ್ಲಂಘನೆ- ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ದಾಖಲು

ಈ ವರ್ಷ ‘ನೀಟ್’ ಪರೀಕ್ಷೆಗೆ ಹಾಜರಾದ ವಿವಾಹಿತ ಮಹಿಳೆಯರಿಗೆ ತಾಳಿ, ಕಾಲುಂಗುರ ಇತ್ಯಾದಿಗಳನ್ನು ತೆಗೆಯುವಂತೆ ಸೂಚಿಸಿದ್ದು ಭವಿಷ್ಯದಲ್ಲಿ "ಇದೇ ರೀತಿಯ ಚಿತ್ರಹಿಂಸೆ" ಮುಂದುವರೆಯಬಹುದು ಎನ್ನುತ್ತದೆ ಅರ್ಜಿ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಈ ವರ್ಷ ‘ನೀಟ್’ ಪರೀಕ್ಷೆಗೆ ಹಾಜರಾದ ವಿವಾಹಿತ ಮಹಿಳೆಯರಿಗೆ ತಾಳಿ (ಮಂಗಳಸೂತ್ರ) ತೆಗೆದಿಡುವಂತೆ ಹೇಳಿದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವೈದ್ಯಕೀಯ ಪ್ರವೇಶ ಪರೀಕ್ಷೆಗೆ ವಿಧಿಸಿರುವ ವಸ್ತ್ರ ಸಂಹಿತೆಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಚೆನ್ನೈನ ವಕೀಲ ಎಸ್‌ ಅರವಿಂದ್‌ ರಾಜ್‌ ಎನ್ನುವರು ಅರ್ಜಿ ಸಲ್ಲಿಸಿದ್ದಾರೆ.

ಹಿಂದೂ ಮಹಿಳೆಯರಿಗೆ ಪವಿತ್ರ ಆಭರಣಗಳಾದ ತಾಳಿ (ಮಂಗಳ ಸೂತ್ರ), ಕಾಲುಂಗುರ, ಮೂಗುತಿ ಓಲೆಗಳನ್ನು ತೆಗೆದಿಡುವಂತೆ ಒತ್ತಾಯಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ತಾಳಿ ಎಂಬುದು ಬಹಳ ಮುಖ್ಯವಾದ ಸಂಕೇತವಾಗಿದ್ದು ಮಹಿಳೆ ತಾನು ವಿವಾಹವಾಗಿರುವ ಗುರುತಾಗಿ ಇದನ್ನು ತನ್ನ ಜೀವಮಾನದುದ್ದಕ್ಕೂ ಧರಿಸಿರಬೇಕೆಂದು ನಿರೀಕ್ಷಿಸಲಾಗಿದೆ. ಇದು ಗಂಡ ಹೆಂಡತಿ ನಡುವಿನ ಪ್ರೇಮ ಮತ್ತು ಅಕ್ಕರೆಯನ್ನು ಸಾರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಗಂಡ ಸಾವನ್ನಪ್ಪಿದ ಬಳಿಕವಷ್ಟೇ ಅದನ್ನು ತೆಗೆದುಹಾಕಬೇಕು. ಈ ಕಾರಣದಿಂದಲೇ ಹಿಂದೂಗಳ ಉನ್ನತ ಧಾರ್ಮಿಕ ಮೌಲ್ಯ ಮತ್ತು ಪವಿತ್ರ ಬಂಧಕ್ಕೆ ಧಾರ್ಮಿಕ ಪ್ರತೀಕದಂತಿರುವ ಇದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಪರಿಶೀಲನೆ ವೇಳೆ ಕೂಡ ತೆಗೆಯುವಂತೆ ಹೇಳುವುದಿಲ್ಲ.

ಭವಿಷ್ಯದಲ್ಲಿಯೂ ಇದೇ ರೀತಿಯ ಚಿತ್ರಹಿಂಸೆ ಮುಂದುವರೆಯಬಹುದು ಎಂದು ಆತಂಕ ವ್ಯಕ್ತಪಡಿಸಿಸಿರುವ ಅರ್ಜಿದಾರರು ಇದು ಅಸಾಂವಿಧಾನಿಕ ಕ್ರಮ ಎಂದು ತಿಳಿಸಿದ್ದಾರೆ.

Also Read
ತೆರಿಗೆ ವಂಚನೆ: ಎ ಆರ್ ರೆಹಮಾನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋದ ಆದಾಯ ತೆರಿಗೆ ಇಲಾಖೆ

ಅರ್ಜಿಯಲ್ಲಿರುವ ಪ್ರತಿಪಾದನೆ:

  • ನಿಗದಿಪಡಿಸಿದ ಷರತ್ತುಗಳು ಬಹಳ ಅಸ್ಪಷ್ಟವಾಗಿದ್ದು ತೀರಾ ಸಾಮಾನ್ಯೀಕರಿಸಲಾಗಿದೆ. ತಪಾಸಣೆ ಹೆಸರಿನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಲಾಗಿದೆ.

  • ಪರೀಕ್ಷೆ ಇನ್ನು ಕೆಲವೇ ಕ್ಷಣಗಳಿರುವಾಗ ತಾಳಿ ತೆಗೆದು ಹಾಕುವಂತೆ ಒತ್ತಡ ಹೇರಿ ಮಾನಸಿಕ ಸಂಕಷ್ಟಗಳನ್ನು ಒಡ್ಡಲಾಗಿದೆ.

  • ಇಂತಹ ಹಿಂಸೆ 2017ರಿಂದಲೂ ನಡೆಯುತ್ತಿದ್ದು ಭವಿಷ್ಯದಲ್ಲಿಯೂ ಮುಂದುವರೆಯಬಹುದು.

  • ಕೆಲ ಬಣ್ಣದ ಬಟ್ಟೆಗಳನ್ನು ಮತ್ತು ಪವಿತ್ರ ಆಭರಣಗಳನ್ನು ತೆಗೆದುಹಾಕುವಂತೆ ಹೇಳಿರುವುದು ಕಾನೂನು ಬಾಹಿರ. ಈ ರೀತಿ ಖಾಸಗಿ ವಸ್ತುಗಳನ್ನು ತೆಗೆದಿರಿಸುವಂತೆ ಹೇಳುವುದು ಸಂವಿಧಾನದ 21ನೇ ವಿಧಿಗೆ ವಿರುದ್ಧ ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ.

  • ಪರೀಕ್ಷಾ ಕೇಂದ್ರಕ್ಕೆ ಮೂರು ಗಂಟೆ ಮುಂಚಿತವಾಗಿ ವಿದ್ಯಾರ್ಥಿ ಹಾಜರಾಗುವಂತೆ ಒತ್ತಾಯಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ.

  • ಪರೀಕ್ಷಾ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ದೂರದೂರದ ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿತ್ತು.

  • ಪರೀಕ್ಷಾ ಕೇಂದ್ರಕ್ಕೆ 3 ಗಂಟೆಗಳ ಮುಂಚಿತವಾಗಿ ವಿದ್ಯಾರ್ಥಿಯನ್ನು ಹಾಜರಾಗುವಂತೆ ಒತ್ತಾಯಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ.

  • ಪರೀಕ್ಷಾ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ದೂರದ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ನಿಗದಿಗೊಳಿಸಲಾಗಿದೆ.

ಅಂತಿಮವಾಗಿ ಅರ್ಜಿದಾರರು ಇಂತಹ ಷರತ್ತುಗಳು, ಅಸಾಂವಿಧಾನಿಕ, ಸ್ವೇಚ್ಛೆ, ಅವಿವೇಕದಿಂದ ಕೂಡಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದಾಗಿ ಹೈಕೋರ್ಟ್ ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com