ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ನೈರ್ಮಲ್ಯ ಸೌಲಭ್ಯ ಮತ್ತು ಋತುಸ್ರಾವಕ್ಕೆ ಸಂಬಂಧಿಸಿದ ಉತ್ಪನ್ನಗಳ ಲಭ್ಯತೆ ಇಲ್ಲದಿರುವುದರಿಂದ ಅನೇಕ ಹೆಣ್ಣುಮಕ್ಕಳು ಶಾಲೆ ಬಿಡುತ್ತಾರೆ ಎಂದು ಅರ್ಜಿದಾರರು ಹೇಳಿದರು.
Supreme Court
Supreme Court

ಪ್ರತಿ ಶಾಲೆಯಲ್ಲಿ ಹದಿಹರೆಯದ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಎಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ಎಲ್ಲಾ ರಾಜ್ಯ ಸರ್ಕಾರಗಳು  ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ [ಡಾ.ಜಯ ಠಾಕೂರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ವಸತಿ ಶಾಲೆಗಳಲ್ಲಿ ಬಾಲಕಿಯರ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸುವಂತೆ ನಿರ್ದೇಶಿಸಬೇಕು ಎಂದು ಕೂಡ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿತು. 2023ರ ಜನವರಿ ಎರಡನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಅರ್ಜಿದಾರರು ಎತ್ತಿರುವ ಸಮಸ್ಯೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದಲ್ಲಿ ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯ ಕೋರಿತು.

Also Read
ಪ್ರಕರಣ ರದ್ದುಗೊಳಿಸಲು ಶಾಲಾಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪೂರೈಸುವಂತೆ ಆರೋಪಿಗೆ ದೆಹಲಿ ಹೈಕೋರ್ಟ್‌ ಷರತ್ತು

ವಕೀಲ ವರೀಂದರ್ ಕುಮಾರ್ ಶರ್ಮಾ ಅವರ ಮೂಲಕ ಅರ್ಜಿದಾರರು ಸಲ್ಲಿಸಿದ್ದಮನವಿಯಲ್ಲಿ ಮುಟ್ಟಿನ ನೈರ್ಮಲ್ಯ ಕುರಿತಾದ ಅಸಮರ್ಪಕ ನಿರ್ವಹಣೆಯಿಂದಾಗಿ ಶಿಕ್ಷಣಕ್ಕೆ ಪ್ರಮುಖ ಅಡಚಣೆ ಉಂಟಾಗಿದ್ದು, ನೈರ್ಮಲ್ಯ ಸೌಲಭ್ಯಗಳು ಮತ್ತು ಋತುಸ್ರಾವಕ್ಕೆ ಸಂಬಂಧಿಸಿದ ಉತ್ಪನ್ನಗಳ ಲಭ್ಯತೆ ಇಲ್ಲದಿರುವುದರಿಂದ ಅನೇಕ ಹೆಣ್ಣುಮಕ್ಕಳು ಶಾಲೆ  ತೊರೆಯುತ್ತಾರೆ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಶೌಚಾಲಯ ಸೌಲಭ್ಯ  ಇಲ್ಲದಿರುವುದರಿಂದ  ಹುಡುಗಿಯರು ಎದುರಿಸುತ್ತಿರುವ ತೊಂದರೆಗಳು ಜಟಿಲವಾಗಿವೆ  ಎಂದು ತಿಳಿಸಲಾಗಿತ್ತು.

ದಾಸ್ರಾ ವರದಿಯ ಪ್ರಕಾರ 23 ದಶಲಕ್ಷಕ್ಕೂ ಹೆಚ್ಚು ಹುಡುಗಿಯರು ವಾರ್ಷಿಕವಾಗಿ ಸರಿಯಾದ ಋತುಸ್ರಾವ ನೈರ್ಮಲ್ಯ ನಿರ್ವಹಣೆ (MHM) ಸೌಲಭ್ಯಗಳ ಕೊರತೆಯಿಂದಾಗಿ ಶಾಲೆ ತೊರೆಯುತ್ತಿದ್ದಾರೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವರುಣ್ ಠಾಕೂರ್ ತಿಳಿಸಿದರು.

ನೀರು, ಮೂಲಭೂತ ಶುಚಿತ್ವ ಮತ್ತು ನೈರ್ಮಲ್ಯದ ಕೊರತೆಯಿಂದಾಗಿ ಪ್ರಪಂಚದಾದ್ಯಂತ 800,000 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸುವ ಸರ್ಕಾರೇತರ ಸಂಸ್ಥೆ ʼವಾಟರ್‌ ಏಡ್‌ʼ ಪ್ರಕಟಿಸಿರುವ ವರದಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com