ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಯನ್ನು ಪಿಎಂಒ ಆಗಲಿ, ಸರ್ಕಾರವಾಗಲಿ ಮಾಡುತ್ತಿಲ್ಲ: ಕೇಂದ್ರದ ಮಾಹಿತಿ

ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಯನ್ನು ಪಿಎಂಒ ಆಗಲಿ, ಸರ್ಕಾರವಾಗಲಿ ಮಾಡುತ್ತಿಲ್ಲ: ಕೇಂದ್ರದ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾನು ನಿರ್ವಹಿಸುತ್ತಿಲ್ಲ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಹೀಗಾಗಿ ಬೆಳಗಾವಿ ಮೂಲದ ವಕೀಲ ಸುರೇಂದ್ರ ಉಗಾರೆ ಅವರು ಕೇಳಿದ ಮಾಹಿತಿ ಕಚೇರಿಯ ದಾಖಲೆಗಳ ಭಾಗವಾಗಿಲ್ಲ ಎಂದು ಅದು ಹೇಳಿದೆ.

Communication by PMO
Communication by PMO

ಪ್ರಧಾನ ಮಂತ್ರಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಧಾನಿಯವರ ಕಚೇರಿಯಾಗಲಿ ಅಥವಾ ಭಾರತ ಸರ್ಕಾರವಾಗಲಿ ನಿರ್ವಹಿಸುತ್ತಿಲ್ಲ. ಹಾಗಾಗಿ, ಕೋರಲಾಗಿರುವ ಮಾಹಿತಿಯು ಕಚೇರಿಯು ಹೊಂದಿರುವ ದಾಖಲೆಗಳ ಭಾಗವಲ್ಲ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಮಾಹಿತಿ ಹಕ್ಕು ಕಾಯಿದೆ- 2005ರ ಅಡಿ ಮಾಹಿತಿ ಬಯಸಿ ಉಗಾರೆ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಇತ್ತೀಚೆಗೆ ಪ್ರಧಾನಿ ಕಚೇರಿ ಪ್ರತಿಕ್ರಿಯೆ ನೀಡಿದೆ.

Also Read
ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ವಿವರ ಬಹಿರಂಗಪಡಿಸಿದ ಬೆಳಗಾವಿ ಮೂಲದ ವಕೀಲರ ಆರ್‌ಟಿಐ ಅರ್ಜಿ

Related Stories

No stories found.
Kannada Bar & Bench
kannada.barandbench.com