ಸಾಕ್ಷ್ಯ ಕಾಯಿದೆಯ ಸೆಕ್ಷನ್ 106 ಆಧರಿಸಿ ಆರೋಪಿಗೆ ಪುರಾವೆಯ ಹೊರೆ ಹೊರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಆರೋಪಿಯ ಅಪರಾಧಕ್ಕೆ ಕಾರಣವಾಗುವ ಸನ್ನಿವೇಶಗಳ ಸರಣಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿತು.
Supreme Court, Justice Sanjiv khanna, Justice Belatrivedi

Supreme Court, Justice Sanjiv khanna, Justice Belatrivedi

ಆರೋಪಿಗಳ ವಿರುದ್ಧ ಆಪಾದಿಸಲಾದ ಮೂಲ ವಾಸ್ತವಾಂಶಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದರೆ, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 106 ಆಶ್ರಯಿಸುವ ಮೂಲಕ ಪುರಾವೆಯ ಭಾರವನ್ನು ಆರೋಪಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. [ಸತ್ಯೆ ಸಿಂಗ್ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].

ಆರೋಪಿಯ ತಪ್ಪನ್ನು ಸಾಬೀತುಪಡಿಸುವ ತನ್ನ ಕರ್ತವ್ಯದಿಂದ ಪ್ರಾಸಿಕ್ಯೂಷನ್‌ಗೆ ಮುಕ್ತಿ ನೀಡುವ ಉದ್ದೇಶ ಕಾಯಿದೆಯ ಸೆಕ್ಷನ್‌ 106ಕ್ಕೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಹೇಳಿತು.

Also Read
ಪುದುಚೆರಿ ಬಿಜೆಪಿ ಪ್ರಚಾರ: ಆಧಾರ್‌ ಮಾಹಿತಿ ಸೋರಿಕೆ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯ; ತನಿಖೆಗೆ ಹೈಕೋರ್ಟ್ ಆದೇಶ

ಆರೋಪಿಗಳ ವಿರುದ್ಧ ಆರೋಪ ಮಾಡಿದಂತೆ ಮೂಲ ವಾಸ್ತವಾಂಶಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಸಾಕ್ಷ್ಯಾಧಾರ ಕಾಯಿದೆಯ ಸೆಕ್ಷನ್ 106ರಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಪರಿವರ್ತಿಸುವ ಮೂಲಕ ಆರೋಪಿಯ ಮೇಲೆ ಪುರಾವೆಯ ಹೊರೆಯನ್ನು ಹೊರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಆ ಮೂಲಕ ಆರೋಪಿಯ ಅಪರಾಧಕ್ಕೆ ಕಾರಣವಾಗುವ ಸನ್ನಿವೇಶಗಳ ಸರಣಿ ಸಾಬೀತು ಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್, ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿತು.

Related Stories

No stories found.
Kannada Bar & Bench
kannada.barandbench.com