ಕೆಲಸಕ್ಕೆ ತೊಂದರೆಯಾಗುವುದರಿಂದ ತಲೆಗೂದಲು ಪದೇಪದೇ ಸರಿಪಡಿಸಿಕೊಳ್ಳದಿರಿ: ಮಹಿಳಾ ವಕೀಲರಿಗೆ ಪುಣೆ ನ್ಯಾಯಾಲಯದ ಸೂಚನೆ!

ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ವಿವಾದಾತ್ಮಕ ನೋಟಿಸ್ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Women lawyer
Women lawyerImage for representative purpose

ನ್ಯಾಯಾಲಯದ ಕಾರ್ಯಚಟುವಟಿಕೆಗೆ ತೊಂದರೆಯಾಗುವುದರಿಂದ ಮುಕ್ತ ನ್ಯಾಯಾಲಯದಲ್ಲಿ ತಮ್ಮ ತಲೆಗೂದಲನ್ನು ಪದೇಪದೇ ಸರಿಪಡಿಸಿಕೊಳ್ಳದಿರಿ ಎಂಬ ವಿಲಕ್ಷಣ ಪ್ರಕಟಣೆಯೊಂದನ್ನು ಅಕ್ಟೋಬರ್ 20ರಂದು ಪುಣೆ ಜಿಲ್ಲಾ ನ್ಯಾಯಾಲಯ ಹೊರಡಿಸಿತ್ತು.

ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read
ಬೇಸಿಗೆ ಬಿಸಿಲು: ಕಪ್ಪು ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಿದ ಮದ್ರಾಸ್ ಹೈಕೋರ್ಟ್ [ಚುಟುಕು]

“ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಪದೇ ಪದೇ ಗಮನಕ್ಕೆ ಬಂದಿದ್ದು ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು.

ಪ್ರಕಟಣೆ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ “ವಾವ್‌, ಇಲ್ಲಿ ನೋಡಿ, ಮಹಿಳಾ ವಕೀಲರಿಂದ ಯಾರು ಮತ್ತು ಏಕೆ ವಿಚಲಿತರಾಗಿದ್ದಾರೆ ಎಂದು!” ಎಂಬುದಾಗಿ  ಟ್ವೀಟ್‌ ಮಾಡಿ, ನೋಟಿಸ್‌ನ ಫೋಟೊವನ್ನು ಲಗತ್ತಿಸಿದ್ದರು.

Kannada Bar & Bench
kannada.barandbench.com