'ವ್ಯಾಪಾರ ವಿಧಾನ'ಗಳಿಗೆ ಪೇಟೆಂಟ್ ತಡೆಯುವ ಪೇಟೆಂಟ್ ಕಾಯಿದೆಯ ನಿಯಮಾವಳಿ ಮರುಪರಿಶೀಲಿಸಬೇಕಿದೆ: ದೆಹಲಿ ಹೈಕೋರ್ಟ್

ಪೇಟೆಂಟ್ ಕಾಯಿದೆಯ ಸೆಕ್ಷನ್ 3(ಕೆ) ಕಾರಣದಿಂದಾಗಿ, ಸ್ಟಾರ್ಟ್-ಅಪ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಅನೇಕ ಆವಿಷ್ಕಾರಗಳನ್ನು ಪೇಟೆಂಟ್ ಮಾಡದೇ ಹೋಗಬಹುದು ಎಂದು ನ್ಯಾಯಾಲಯ ಹೇಳಿದೆ.
Justice Prathiba M Singh
Justice Prathiba M Singh

'ವ್ಯಾಪಾರ ವಿಧಾನ'ಗಳಿಗೆ ಪೇಟೆಂಟ್ ತಡೆಯುವ ಪೇಟೆಂಟ್ ಕಾಯಿದೆಯಲ್ಲಿನ ನಿಯಮಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಓಪನ್‌ಟಿವಿ ಇಂಕ್‌ ಮತ್ತು ದ ಕಂಟ್ರೋಲರ್‌ ಆಫ್‌ ಪೇಟೆಂಟ್ಸ್‌ ಅಂಡ್‌ ಡಿಸೈನ್ಸ್‌ ಮತ್ತಿತರರ ನಡುವಣ ಪ್ರಕರಣ].

ಸ್ಟಾರ್ಟ್ ಅಪ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಸ್‌ಎಂಇ) ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕವುಗಳ ಆವಿಷ್ಕಾರಗಳು ಉದಯೋನ್ಮುಖ ತಂತ್ರಜ್ಞಾನಗಳಿಂದ ಕೂಡಿರುವುದರಿಂದ ಅವುಗಳನ್ನು ಪೇಟೆಂಟ್‌ನಿಂದ ಹೊರಗಿಡಬಹುದು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ವ್ಯವಹಾರ ವಿಧಾನಗಳು ಅಥವಾ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಆನ್ವಯಿಕ  ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹ ಆವಿಷ್ಕಾರಗಳು ಇರಬಹುದು  ಎಂದು ನ್ಯಾಯಾಲಯ ಹೇಳಿದೆ.

“ಈ ಕ್ಷೇತ್ರದಲ್ಲಿ ವೃದ್ಧಿಸುತ್ತಿರುವ ನಾವೀನ್ಯತೆಯ ದೃಷ್ಟಿಯಿಂದ ಪೇಟೆಂಟ್‌ ಕಾಯಿದೆ 1970 ರ ಸೆಕ್ಷನ್ 3 (ಕೆ)ಯಲ್ಲಿನ ಹೊರಗಿಡುವಿಕೆ ವಿಚಾರವನ್ನು ಮರುಪರಿಶೀಲಿಸುವ ಅಗತ್ಯವಿದೆ. ಹೀಗಾಗಿ ಪೇಟೆಂಟ್‌ ಕಾನೂನನ್ನು ಅನ್ಯವಾಗಿಸುವುದು ಇಲ್ಲವೇ ಮುಂದಿನ ದಿನಗಳಲ್ಲಿ ಪೇಟೆಂಟ್‌ ಎಂಬುದನ್ನು ಅಪ್ರಸ್ತುತವಾಗದಂತೆ ನೋಡಿಕೊಳ್ಳಲು ಸಮಿತಿಯ ವರದಿ ಶಿಫಾರಸು ಮಾಡಿದಂತೆ, ಡಿಜಿಟಲ್ ವಲಯದಲ್ಲಿ ತಂತ್ರಜ್ಞಾನದ ಪ್ರಗತಿಯನ್ನು ಪರಿಗಣಿಸುವ ಅಗತ್ಯ ತುರ್ತಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ. ಸಂಸದೀಯ ಸ್ಥಾಯಿ ಸಮಿತಿ ಪ್ರಸ್ತುತಪಡಿಸಿದ “ಭಾರತದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಆಡಳಿತದ ಪರಾಮರ್ಶೆ”ಗೆ ಸಂಬಂಧಿಸಿದ 161ನೇ ವರದಿಯನ್ನು ಅದು ಉಲ್ಲೇಖಿಸಿದ್ದು ಸಮಿತಿಯು ಸಹ ಇದೇ ರೀತಿಯ ಕಳವಳ ವ್ಯಕ್ತಪಡಿಸಿದೆ ಎಂದು ಪೀಠ ಹೇಳಿದೆ.

Also Read
ಹಕ್ಕುಸ್ವಾಮ್ಯ ಉಲ್ಲಂಘನೆ: 'ಮಾನ್ಸೂನ್ ಹಾರ್ವೆಸ್ಟ್' ಬಳಸದಂತೆ ಆಹಾರ ಕಂಪನಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ನಿಯಮಾವಳಿಗೆ ಬದಲಾವಣೆ ತರುವುದು ಸ್ಪಷ್ಟವಾಗಿ ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರ ಎಂಬುದನ್ನೂ ನ್ಯಾಯಾಲಯ ಈ ಸಂದರ್ಭದಲ್ಲಿ ಒಪ್ಪಿಕೊಂಡಿತು. ಆದರೂ ಆದಾಗ್ಯೂ, ಅದು ತೀರ್ಪಿನ ಪ್ರತಿಯನ್ನು ಉದ್ಯಮ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪರಿಗಣನೆಗೆ ಕಳಿಸುವಂತೆ ನಿರ್ದೇಶಿಸಿದೆ.

ಪೇಟೆಂಟ್ ಮತ್ತು ವಿನ್ಯಾಸಗಳ ನಿಯಂತ್ರಕರ ಕಚೇರಿ ಮೇ 31, 2021ರಂದು ಹೊರಡಿಸಿದ್ದ ನಿರ್ಧಾರವನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿ ಅಮೆರಿಕ ಮೂಲದ ಕಂಪನಿ ಓಪನ್‌ ಟಿವಿ ಇಂಕ್‌ ಸಲ್ಲಿಸಿದ್ದ ಮೇಲ್ಮನವಿಯ  ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪೇಟೆಂಟ್ಸ್‌ ಕಾಯಿದೆಯ ಸೆಕ್ಷನ್‌ 15ರ ಅಡಿ 'ಸಿಸ್ಟಮ್ ಅಂಡ್‌ ಮೆಥಡ್‌ ಟು ಪ್ರೊವೈಡ್‌ ಗಿಫ್ಟ್‌ ಮೀಡಿಯಾ ಎಂಬ ಪೇಟೆಂಟ್ ಮಂಜೂರಾತಿಗಾಗಿ ತಾನು ಸಲ್ಲಿಸಿದ್ದ  ಅರ್ಜಿಯನ್ನು ನಿರಾಕರಿಸಿ ಪೇಟೆಂಟ್ ಮತ್ತು ವಿನ್ಯಾಸಗಳ ನಿಯಂತ್ರಕರ ಕಚೇರಿ ಮೇ 31, 2021ರಂದು ಹೊರಡಿಸಿದ್ದ ನಿರ್ಧಾರವನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿ ಅಮೆರಿಕ ಮೂಲದ ಕಂಪನಿ ಓಪನ್‌ ಟಿವಿ ಇಂಕ್‌ ಸಲ್ಲಿಸಿದ್ದ ಮೇಲ್ಮನವಿಯ  ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪೇಟೆಂಟ್‌ ಪಡೆದ ವಿಷಯ ಕಾಯಿದೆಯ ಸೆಕ್ಷನ್ 3(ಕೆ) ವ್ಯಾಪ್ತಿಗೆ ಬರುತ್ತದೆ  ಆದ್ದರಿಂದ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಪೇಟೆಂಟ್ ಅನ್ನು ನಿರಾಕರಿಸಲಾಗಿತ್ತು. ಅಲ್ಲದೆ ಪೇಟೆಂಟ್‌ ಮತ್ತು ವಿನ್ಯಾಸ ನಿಯಂತ್ರಕರು “10ನೇ ಡಿಸೆಂಬರ್, 2020ರಂದು ನಡೆದಿದ್ದ ಹಕ್ಕುಗಳ ತಿದ್ದುಪಡಿಯು ಕಾಯಿದೆಯ ಸೆಕ್ಷನ್ 59 ರ ಮಾನದಂಡಗಳನ್ನು ಪೂರೈಸಿಲ್ಲ ಎಂದಿದ್ದರು.

ಪ್ರಕರಣವನ್ನು ಪರಿಗಣಿಸಿದ ನಂತರ, ನ್ಯಾ. ಸಿಂಗ್ ಅವರು ಮೇಲ್ಮನವಿದಾರರ ಆವಿಷ್ಕಾರವು ವ್ಯವಹಾರ ವಿಧಾನವಾಗಿರುವುದರಿಂದ  ಕಾಯಿದೆಯ ಸೆಕ್ಷನ್ 3 (ಕೆ) ಅಡಿಯಲ್ಲಿ ಪೇಟೆಂಟ್‌ನಿಂದ ಹೊರಗಿಡುವಿಕೆಯಿಂದ ಆಕರ್ಷಿತವಾಗಿದೆ ಮತ್ತು ಆದ್ದರಿಂದ ಪೇಟೆಂಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com