'ಮೋದಿ ಕಮ್ಯಾಂಡರ್‌ ಇನ್‌ ಥೀಫ್‌' ಹೇಳಿಕೆ: ರಾಹುಲ್‌ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ಮುಂದೂಡಿದ ಬಾಂಬೆ ಹೈಕೋರ್ಟ್‌

ರಾಹುಲ್‌ ಗಾಂಧಿ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣವನ್ನು ಡಿಸೆಂಬರ್‌ 20ರವರೆಗೆ ಮುಂದೂಡುವಂತೆ ಗಿರ್ಗಾಂವ್‌ನಲ್ಲಿರುವ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನ್ಯಾ. ಎಸ್‌ ಕೆ ಶಿಂಧೆ ನಿರ್ದೇಶಿಸಿದ್ದಾರೆ.
Rahul Gandhi, Bombay High Court
Rahul Gandhi, Bombay High Court

ಕಾಂಗ್ರೆಸ್‌ ನಾಯಕ, ವಯನಾಡ್‌ನ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸದಸ್ಯರೊಬ್ಬರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 20ರವರೆಗೆ ಮುಂದೂಡುವಂತೆ ಸೋಮವಾರ ಬಾಂಬೆ ಹೈಕೋರ್ಟ್‌ ಆದೇಶಿಸಿದೆ.

ಬಿಜೆಪಿಯ ಮಹೇಶ್‌ ಹುಕುಮ್‌ಚಂದ್‌ ಶ್ರೀಶ್ರೀಮಲ್‌ ದಾಖಲಿಸಿರುವ ಮಾನಹಾನಿ ದೂರನ್ನು ವಜಾ ಮಾಡುವಂತೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಕೆ ಶಿಂಧೆ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಶ್ರೀಶ್ರೀಮಲ್‌ ದೂರನ್ನು ಆಧರಿಸಿ 2019ರ ಆಗಸ್ಟ್‌ 28ರಂದು ಗಿರ್ಗಾಂವ್‌ನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಗಾಂಧಿ ಅವರ ವಿರುದ್ಧ ಕ್ರಿಮಿನಲ್‌ ಮಾನಹಾನಿ ಪ್ರಕ್ರಿಯೆ ಆರಂಭಿಸಿದೆ.

ಅರ್ಜಿದಾರರ ಪರ ವಕೀಲ ರೋಹನ್‌ ಮಹದಿಕ್‌ ಅವರು ರಾಹುಲ್‌ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವ ಕಾಲಾವಕಾಶ ಕೋರಿದರು. ಹೀಗಾಗಿ, ಡಿಸೆಂಬರ್‌ 20ರ ವರೆಗೆ ರಾಹುಲ್‌ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿತು. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಮಹದಿಕ್‌ ಅವರಿಗೆ ನ್ಯಾಯಾಲಯ ಸೂಚಿಸಿದೆ.

Also Read
[ಬಿಟಿಸಿ ಹಗರಣ] ರಾಹುಲ್‌, ಮಲ್ಯ ಖಾತೆಗಳು, ಎನ್‌ಡಿಟಿವಿ, ಇ-ಪ್ರೊಕ್ಯೂರ್‌ಮೆಂಟ್‌ ತಾಣಗಳ ಹ್ಯಾಕ್‌ ಮಾಡಿದ್ದ ಶ್ರೀಕಿ

ರಾಜಸ್ಥಾನದಲ್ಲಿ 2018ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಮ್ಯಾಂಡರ್‌ ಇನ್‌ ಥೀಫ್‌' (ಕಳ್ಳರ ಮುಖ್ಯಸ್ಥ) ಎಂದು ರಾಹುಲ್‌ ಗಾಂಧಿ ಕರೆದಿದ್ದರು ಎಂದು ಆರೋಪಿಸಿ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com