ಪದೇ ಪದೇ ಆದೇಶ ಉಲ್ಲಂಘನೆ, ತನಿಖೆಗೆ ಅಡ್ಡಿ: ಬೈಜು ರವೀಂದ್ರನ್‌ಗೆ ಅಮೆರಿಕ ನ್ಯಾಯಾಲಯ ಶತಕೋಟಿ ಡಾಲರ್ ದಂಡ

ಮೂಲ ಅರ್ಜಿಯ ಅಂಶಗಳನ್ನು ಆಧರಿಸಿ ಒಂದು ಶತಕೋಟಿ ಡಾಲರ್ ದಂಡ ವಿಧಿಸುತ್ತಿಲ್ಲ ಬದಲಿಗೆ ಕಾಣೆಯಾದ ಹಣದ ಬಗ್ಗೆ ಮಾಹಿತಿ ನೀಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸದ ಕಾರಣಕ್ಕೆ ವಿಧಿಸಲಾಗಿದೆ.
Byju Raveendran
Byju Raveendranx.com
Published on

ನ್ಯಾಯಾಲಯ ನೀಡುತ್ತಿದ್ದ ಆದೇಶಗಳು, ನಿರ್ದೇಶನಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದ ನಾಪತ್ತೆಯಾದ ಬೈಜೂಸ್‌ ಆಲ್ಫಾಕ್ಕೆ ಸೇರಿದ 533 ದಶಲಕ್ಷ ಡಾಲರ್‌ ನಿಧಿ ಪತ್ತೆ ಹಚ್ಚಲು ಅಡ್ಡಿಪಡಿಸುತ್ತಿದ್ದ ಕಾರಣಕ್ಕೆ ಬೈಜೂಸ್‌ ಸಂಸ್ಥಾಪಕ ರವೀಂದ್ರನ್‌ 1.07 ಶತಕೋಟಿ ಡಾಲರ್‌ (ಸುಮಾರು ₹9,000 ಕೋಟಿ) ದಂಡ ಪಾವತಿಸಬೇಕು ಎಂದು ಅಮೆರಿಕದ ಡೆಲವೇರ್ ಜಿಲ್ಲೆಯ ಯುನೈಟೆಡ್ ಸ್ಟೇಟ್ಸ್ ದಿವಾಳಿ ಪ್ರಕ್ರಿಯಾ ನ್ಯಾಯಾಲಯ ಆದೇಶಿಸಿದೆ  [ಬೈಜುಸ್ ಆಲ್ಫಾ ಮತ್ತುಬೈಜು ರವೀಂದ್ರನ್ ನಡುವಣ ಪ್ರಕರಣ]  

ಮೂಲ ಅರ್ಜಿಯ ಅಂಶಗಳನ್ನು ಆಧರಿಸಿ ಶತಕೋಟಿ ಡಾಲರ್ ದಂಡ ವಿಧಿಸುತ್ತಿಲ್ಲ ಬದಲಿಗೆ ಕಾಣೆಯಾದ ಹಣದ ಬಗ್ಗೆ ಮತ್ತು 540.6  ದಶಲಕ್ಷ ಡಾಲರ್‌ ಮೌಲ್ಯದ ಕ್ಯಾಮ್‌ಶಾಫ್ಟ್ ಕ್ಯಾಪಿಟಲ್ ಫಂಡ್ ಪಾಲುದಾರಿಕೆ ಬಡ್ಡಿಯ ವರ್ಗಾವಣೆ ಬಗ್ಗೆ  ಮಾಹಿತಿ ನೀಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸದ ಕಾರಣಕ್ಕೆ ವಿಧಿಸಲಾಗಿದೆ.

Also Read
ಇಮೇಲ್‌ ಸಂವಹನ ಸುರಕ್ಷಿತವಾಗಿ ಕಾಪಾಡಲು ಬೈಜೂಸ್‌ ಆರ್‌ಪಿ ಶೈಲೇಂದ್ರಗೆ ಹೈಕೋರ್ಟ್‌ ನಿರ್ದೇಶನ

ಅಮೆರಿಕದ ಸಿವಿಲ್‌ ಪ್ರಕ್ರಿಯಾ ಸಂಹಿತೆಯಡಿ ವಿಧಿಸಬಹುದಾದ ಗರಿಷ್ಠ ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ. ಬಹುಮುಖ್ಯವಾಗಿ, ಈ ಆದೇಶ ರವೀಂದ್ರನ್ ಅವರಿಗೆ ಮಾತ್ರ ಅನ್ವಯಿಸುತ್ತದೆ. ಸಹ-ಪ್ರತಿವಾದಿಗಳಾದ ದಿವ್ಯಾ ಗೋಕುಲ್‌ ನಾಥ್‌ ಮತ್ತು ಅನಿತಾ ಕಿಶೋರ್ ಅವರಿಗೆ ಶಿಕ್ಷೆ ವಿಧಿಸಲಾಗಿಲ್ಲ. ಅವರು ಯಾವುದೇ ಪೂರ್ವನಿಯೋಜಿತ ತೀರ್ಪನ್ನು ಎದುರಿಸಬೇಕಾಗಿಲ್ಲ.

ತನ್ನ ಆಸ್ತಿ 533 ದಶಲಕ್ಷ ಡಾಲರ್‌ ಸೇರಿದಂತೆ ಕಂಪೆನಿ ಆಸ್ತಿಗಳನ್ನು ಮರೆಮಾಚಿದ ಆರೋಪಕ್ಕೆ ಸಂಬಂಧಿಸಿದಂತೆ ಬೈಜು ರವೀಂದ್ರನ್, ದಿವ್ಯಾ ಗೋಕುಲನಾಥ್ ಮತ್ತು ಅನಿತಾ ಕಿಶೋರ್ ವಿರುದ್ಧ ಆಲ್ಫಾ ಬೈಜೂಸ್‌ ಏಪ್ರಿಲ್ 2025ರಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ರವೀಂದ್ರನ್ ನ್ಯಾಯಾಲಯದ ಆದೇಶಗಳನ್ನು ಪಾಲಿಸದೇ ನಿರಂತರ ಅಡ್ಡಿ ಉಂಟುಮಾಡಿದ್ದರು.

Also Read
ಬಿಸಿಸಿಐ ಜೊತೆಗಿನ ಬೈಜೂಸ್‌ ಒಪ್ಪಂದ ಒಪ್ಪಿದ ಎನ್‌ಸಿಎಲ್‌ಎಟಿ, ದಿವಾಳಿ ಪ್ರಕ್ರಿಯೆ ಸ್ಥಗಿತ

ಅನೇಕ ಅವಕಾಶಗಳನ್ನು ನೀಡಿದ್ದರೂ ರವೀಂದ್ರನ್‌ ಮಾಹಿತಿ ಒದಗಿಸಿಲ್ಲ. ಗಡುವಿನ ಹೊರತಾಗಿಯೂ ದಾಖಲೆ ಸಲ್ಲಿಸದೆ, ಕೇವಲ 4 ಸಾರ್ವಜನಿಕ ಮತ್ತು ಸಂಬಂಧವೇ ಇಲ್ಲದ ದಾಖಲೆಗಳನ್ನಷ್ಟೇ ನೀಡಿ ಆಸ್ತಿ ಬಗ್ಗೆ ಅಗತ್ಯ ಹಣಕಾಸು ದಾಖಲೆ ನೀಡದೆ ಜೊತೆಗೆ ಅನೇಕ ವಿಚಾರಣೆಗೆ ಹಾಜರಾಗದೆ ರವೀಂದ್ರನ್‌ ನಡೆದುಕೊಂಡಿದ್ದಾರೆ. ರವೀಂದ್ರನ್‌ ಕಾಕತಾಳೀಯವಾಗಿ ಹೀಗೆ ನಡೆದುಕೊಂಡಿಲ್ಲ ಬದಲಿಗೆ ಉದ್ದೇಶಪೂರ್ವಕವಾಗಿ ವರ್ತಿಸಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.  

ಪ್ರತಿ ದಿನ $10,000 ದಂಡ ಪಾವತಿಸಬೇಕು ಎಂದು ನ್ಯಾಯಾಲಯ ಜುಲೈ 2025ರಲ್ಲಿ ಆದೇಶ ಹೊರಡಿಸಿತ್ತು. ಆದರೆ ರವೀಂದ್ರನ್‌ ನವೆಂಬರ್‌ ಬಂದರೂ ಬಿಡಿಗಾಸು ಪಾವತಿಸಿಲ್ಲ ಎಂದ ನ್ಯಾಯಾಲಯ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಇಂತಹ ವರ್ತನೆ ಹಿಂದೆಂದೂ ಕಂಡಿರಲಿಲ್ಲ. ಹೀಗಾಗಿ ತಾನು ಶತಕೋಟಿ ಡಾಲರ್‌ ಪಾವತಿಸುವಂತೆ ಇದೀಗ ಹೊರಡಿಸಿರುವ ಕ್ರಮ ನ್ಯಾಯ ಸಮ್ಮತವಾಗಿದೆ ಎಂದು ಹೇಳಿದೆ.

[ಆದೇಶದ ಪ್ರತಿ]

Attachment
PDF
Byju_s_Alpha_Vs_Byju_Raveendran
Preview
Kannada Bar & Bench
kannada.barandbench.com