ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳ ಮನೆಗಳಿಗೆ 1000 ಎಂಬಿಪಿಎಸ್ ಸಾಮರ್ಥ್ಯದ ಅಂತರ್ಜಾಲ: ನ್ಯಾ. ಚಂದ್ರಚೂಡ್

ನೂತನ ವರ್ಚುವಲ್ ವಿಚಾರಣಾ ಪ್ಲಾಟ್‌ಫಾರ್ಮ್‌ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ ಎಂದು ಸುಪ್ರೀಂಕೋರ್ಟ್ ಇ- ಸಮಿತಿ ಅಧ್ಯಕ್ಷರಾಗಿರುವ ನ್ಯಾ. ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳ ಮನೆಗಳಿಗೆ 1000 ಎಂಬಿಪಿಎಸ್ ಸಾಮರ್ಥ್ಯದ ಅಂತರ್ಜಾಲ: ನ್ಯಾ. ಚಂದ್ರಚೂಡ್

ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳ ಮನೆಗಳಿಗೆ 1000 ಎಂಬಿಪಿಎಸ್ ಸಾಮರ್ಥ್ಯದ ಅಂತರ್ಜಾಲ ಅಳವಡಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಇ- ಸಮಿತಿ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೋಮವಾರ ಮುಕ್ತ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ವರ್ಚುವಲ್ ವಿಚಾರಣೆಗಳನ್ನು ಆಯೋಜಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್‌ ಬಿಡ್‌ ಕರೆಯಲಾಗಿದ್ದು ಬಿಡ್‌ಗಳನ್ನು ಮೌಲ್ಯಮಾಪನ ಮಾಡಿದ ನಂತರ ಟೆಂಡರ್‌ ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

"ನ್ಯಾಯಾಲಯದ ವಿಚಾರಣೆಗೆ ವೀಡಿಯೊ ಕಾನ್ಫರೆನ್ಸಿಂಗ್ ವಿಧಾನ ಆಯ್ಕೆ ಮಾಡುವಂತೆ ನಾವು ಪಕ್ಷಕಾರರಿಗೆ ಆಹ್ವಾನಿಸಿದ್ದೇವೆ. ಬಿಡ್‌ಗಳನ್ನು ತಾಂತ್ರಿಕ ಸಮಿತಿ ಮೌಲ್ಯಮಾಪನ ಮಾಡಿದೆ. ಈಗಾಗಲೇ ಟೆಂಡರ್ ನೀಡಲಾಗಿದೆ. ಕೆಲವು ಸಂಗತಿಗಳು ಜಾರಿಗೆ ಬರಬೇಕಿದೆ. ಇದು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ನಾವು ಅವರಿಗೆ ಎಲ್ಲವನ್ನೂ ಹಸ್ತಾಂತರಿಸುತ್ತೇವೆ" ಎಂದರು.

Also Read
ತಮ್ಮ ಆಯ್ಕೆಯ ವಿಡಿಯೋ ಕಾನ್ಫರೆನ್ಸ್‌ ವೇದಿಕೆ ಆರಿಸಿಕೊಳ್ಳಲು ಹೈಕೋರ್ಟ್‌ಗಳಿಗೆ ಅನುಮತಿಸಿದ ಸುಪ್ರೀಂ ಕೋರ್ಟ್‌ ಇ-ಸಮಿತಿ

ಹೊಸ ಸಾಫ್ಟ್‌ವೇರ್‌ನಲ್ಲಿ ವಕೀಲರನ್ನು ಮ್ಯೂಟ್‌ ಮಾಡುವ ಆಯ್ಕೆ ಇದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಬಾರಿ ವಿಚಾರಣೆಗೆ ಅಡಚಣೆ ಉಂಟಾಗಿದೆ ಎಂದು ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.

ತಾವು ಯಾವ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಅಳವಡಿಸಿಕೊಳ್ಳಬೇಕು ಎಂಬುದು ಹೈಕೋರ್ಟ್‌ಗಳಿಗೆ ಬಿಟ್ಟ ವಿಚಾರ ಎಂದು ಕೂಡ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. "ಸ್ಥಳೀಯ ಸಮಸ್ಯೆಗಳಿಗೆ ಅನುಗುಣವಾಗಿ, ಅಳವಡಿಸಿಕೊಳ್ಳಬೇಕಾದ ವಿಧಾನದ ಆಯ್ಕೆಯನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಬಿಟ್ಟಿದ್ದೇವೆ. ಇದು ಲಿಂಕ್‌ಗಳಿಗಾಗಿ ನ್ಯಾಯಾಲಯಗಳ ಮೇಲೆ ಇರುವ ಒತ್ತಡವನ್ನು ಅವಲಂಬಿಸಿರುತ್ತದೆ” ಎಂದು ಅವರು ಹೇಳಿದರು.

Related Stories

No stories found.