[ಹುತಾತ್ಮರ ಸ್ಮಾರಕ] ಕೊರೊನಾ ಮುಂಚೂಣಿ ಯೋಧರೂ ಸಹ ದೇಶಕ್ಕಾಗಿ ಮಡಿದ ಹುತಾತ್ಮರು: ಕೇರಳ ಸಿಜೆ

ಭಾರತದ ಹುತಾತ್ಮರ ತ್ಯಾಗಕ್ಕೆ ಕೃತಜ್ಞತೆಯ ಸಂಕೇತವಾಗಿರುವ ಈ ಸ್ಮಾರಕವನ್ನು ಆಗಸ್ಟ್ 12 ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಉದ್ಘಾಟಿಸಿದರು.
Kerala HC Martyr's Column
Kerala HC Martyr's Column
Published on

ಸ್ವಾತಂತ್ರ್ಯದ ಪೂರ್ವದಲ್ಲಿ ಮತ್ತು ಆನಂತರ ದೇಶಕ್ಕಾಗಿ ಹುತಾತ್ಮರಾದ ಸರ್ವರ ಸ್ಮರಣಾರ್ಥವಾಗಿ ಕೇರಳ ಹೈಕೋರ್ಟ್ ತನ್ನ ಆವರಣದಲ್ಲಿ ನಿರ್ಮಿಸಲಾದ ನೂತನ ಹುತಾತ್ಮ ಸ್ಮಾರಕ ಸ್ತಂಭವನ್ನು ಸ್ವಾತಂತ್ರ್ಯದ ಅಮೃತೋತ್ಸವದ ದಿನವಾದ ಸೋಮವಾರ ಅನಾವರಣಗೊಳಿಸಿತು.

ಸ್ತಂಭವನ್ನು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಆಗಸ್ಟ್ 12, 2022 ರಂದು ಉದ್ಘಾಟಿಸಿದ್ದರು.

Also Read
[ಕೋವಿಡ್‌] ಎರಡು ವರ್ಷ ಮೀರಿ ಮುಚ್ಚಿರುವ ಟಿಎನ್‌ಎನ್‌ಎಲ್‌ಯು; ವಿದ್ಯಾರ್ಥಿಗಳ ಆತಂಕ ಅಲ್ಲಗಳೆದ ಕುಲಪತಿ

ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು “ಹುತಾತ್ಮರ ಸ್ತಂಭ ಭವಿಷ್ಯದ ಪೀಳಿಗೆಗೆ ನಿರಂತರ ಸ್ಮರಣಿಕೆಯಾಗಿರಬೇಕು. ಭವಿಷ್ಯದ ಪೀಳಿಗೆ ಭಾರತವನ್ನು ಶ್ರೇಷ್ಠ ದೇಶವನ್ನಾಗಿ ಮಾಡಲು ದೃಢಸಂಕಲ್ಪದಿಂದ ಕೆಲಸ ಮಾಡಬೇಕು, ಹುತಾತ್ಮರನ್ನು ಗೌರವಿಸುವುದು ಮೂಲಭೂತ ಕರ್ತವ್ಯವೆಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಷ್ಟೇ ಹುತಾತ್ಮರಲ್ಲ ಬದಲಿಗೆ ಸ್ವಾತಂತ್ರ್ಯಾನಂತರ ಕೋವಿಡ್‌ ಮುಂಚೂಣಿ ಹೋರಾಟಗಾರರಾಗಿ ಪ್ರಾಣ ತೆತ್ತವರೂ ಹುತಾತ್ಮರು ಎಂದು ನ್ಯಾಯಮೂರ್ತಿಗಳು ಹೇಳಿದರು.

Kannada Bar & Bench
kannada.barandbench.com