ಡ್ರಗ್ಸ್ ಖರೀದಿಸಲು ಹಣಕಾಸು ವ್ಯವಹಾರ, ಸಹ ಆರೋಪಿಗೆ ಸಕ್ರಿಯ ನೆರವು: ನಟಿ ರಿಯಾ ವಿರುದ್ಧ ಎನ್‌ಸಿಬಿ ಆರೋಪ

ರಿಯಾ ಮತ್ತು ಆಕೆಯ ಸಹೋದರನ ಜಾಮೀನಿಗೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಯಲಿದ್ದು ಎನ್‌ಸಿಬಿ ಪ್ರತಿಕ್ರಿಯಾತ್ಮಕ ಅರ್ಜಿ ಸಲ್ಲಿಸಿದೆ. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಎ ಪ್ರಕರಣಕ್ಕೆ ಅನ್ವಯವಾಗುತ್ತದೆ ಎಂದು ಅದು ಪ್ರತಿಪಾದಿಸಿದೆ.
ಎನ್‌ಸಿಬಿ
ಎನ್‌ಸಿಬಿ

ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಬಳಕೆಗಾಗಿ ನಟಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳನ್ನು ಖರೀದಿಸಲು ಸಕ್ರಿಯ ನೆರವು, ಪ್ರೇರಣೆ ಒದಗಿಸಿದ್ದು ಹಣಕಾಸು ವ್ಯವಹಾರ ಮಾಡಿದ್ದಾರೆ ಎಂದು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಕೂಡ ಈ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂದು ಎನ್‌ಸಿಬಿ ಪುನಃ ಪ್ರತಿಪಾದಿಸಿದ್ದು ರಿಯಾಗೆ ತಿಳಿದಂತೆಯೇ ಆಕೆಯ ನಗದು ಹಣ ಅಥವಾ ಕಾರ್ಡ್ ಬಳಸಿ ಮಾದಕವಸ್ತುಗಳಿಗೆ ಸಹೋದರ ಹಣ ಪಾವತಿ ಮಾಡಿದ್ದಾನೆ ಎಂದು ಎನ್‌ಸಿಬಿ ಹೇಳಿದೆ.

Also Read
ನಟ ಸುಶಾಂತ್ ಗೆ ಖರೀದಿಸಿದ್ದ ಡ್ರಗ್ ಸಣ್ಣ ಪ್ರಮಾಣದ್ದು- ಜಾಮೀನು ನೀಡಬಹುದಾದ ಪ್ರಕರಣ ಎಂದಿದೆ ರಿಯಾ ಜಾಮೀನು ಅರ್ಜಿ
Also Read
ನಟಿ ರಿಯಾ, ಶೌವಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌‌ಡಿಪಿಎಸ್‌ ವಿಶೇಷ ನ್ಯಾಯಾಲಯ

ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ರಿಯಾ ಮತ್ತು ಶೌವಿಕ್ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಬೇಕೆಂದು ಎನ್‌ಸಿಬಿ ವಾದ ಮಂಡಿಸಿದೆ.

ಎನ್ ಸಿಬಿ ವಾದದ ಪ್ರಮುಖಾಂಶಗಳು ಹೀಗಿವೆ:

  • ಮಾದಕವಸ್ತು ಪ್ರಕರಣ ಸುಶಾಂತ್ ಸಾವಿಗೆ ಮಾತ್ರ ಸಂಬಂಧಿಸಿದ್ದಲ್ಲ ಹಾಗಾಗಿ ಪ್ರಕರಣ ತನ್ನ ನ್ಯಾಯವ್ಯಾಪ್ತಿಗೆ ಬರುತ್ತದೆ.

  • ಮಾದಕ ವಸ್ತುಗಳ ಅಕ್ರಮ ಸಾಗಣಿಕೆ ವ್ಯವಹಾರದಲ್ಲಿ ರಿಯಾ ಮತ್ತು ಅವಳ ಸಹೋದರ ಭಾಗಿಯಾಗಿದ್ದು ಹಣಕಾಸು ನೆರವು ಒದಗಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಮಾದಕವಸ್ತು ಜಾಲದಲ್ಲಿ ಅವರಿಬ್ಬರ ಪಾತ್ರವಿದೆ.

  • ಇಬ್ಬರೂ ಸಹ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಸಹ ಆರೋಪಿಗಳಿಂದ ವಾಣಿಜ್ಯ ಬಳಕೆ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಆರೋಪದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಎಲೆಕ್ಟ್ರಾನಿಕ್ ಮತ್ತು ಆರ್ಥಿಕ ಪುರಾವೆಗಳು ಎನ್‌ಸಿಬಿ ಬಳಿ ಇವೆ.

  • ವೈಯಕ್ತಿಕ ಸೇವನೆಗೆ ಮಾತ್ರವಲ್ಲದೆ ಇತರರಿಗೆ ಸರಬರಾಜು ಮಾಡಲು ಕೂಡ ಮಾದಕ ವಸ್ತುಗಳನ್ನು ಖರೀದಿಸಲಾಗಿತ್ತು.

  • ಮಾದಕ ವಸ್ತು ಸೇವಿಸುತ್ತಿದ್ದ ಸುಶಾಂತ್ ಗೆ ರಿಯಾ ಆಶ್ರಯ ನೀಡಿದ್ದರು ಮತ್ತು ವಿಷಯವನ್ನು ಮರೆಮಾಚಿದ್ದರು. ಸುಶಾಂತ್ ಮಾದಕವಸ್ತು ಸೇವನೆಗಾಗಿ ಆಕೆಯ ಮನೆಯನ್ನು ಬಳಸುತ್ತಿದ್ದ ಮತ್ತು ಅಲ್ಲಿ ಮಾದಕವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು.

  • ಈ ಆಧಾರದ ಮೇಲೆ, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಎ (ಅಕ್ರಮ ಸಾಗಣೆಗೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದು) ಈ ಪ್ರಕರಣದಲ್ಲಿ ಅನ್ವಯಿಸುತ್ತದೆ.

  • ಇದಲ್ಲದೆ, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 37ರ ನಿಯಮಗಳು ಕೂಡ ಅನ್ವಯಿಸುತ್ತವೆ. ಆರೋಪಿ ತಪ್ಪಿತಸ್ಥ ಎಂದು ನಂಬಲು ಸಕಾರಣ ಇಲ್ಲದಿದ್ದರೆ ಜಾಮೀನು ನೀಡಲು ಈ ನಿಯಮ ಸಮ್ಮತಿ ಸೂಚಿಸುವುದಿಲ್ಲ.

Related Stories

No stories found.
Kannada Bar & Bench
kannada.barandbench.com