ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಹೂಡಿದ್ದ ಮಾನನಷ್ಟ ಮೊಕದ್ದಮೆ ಗಣನೆಗೆ ತೆಗೆದುಕೊಂಡ ರೌಸ್ ಅವೆನ್ಯೂ ನ್ಯಾಯಾಲಯ

ಕಳೆದವ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಿರುವನಂತಪುರಂ ಕ್ಷೇತ್ರದ ಮತದಾರರಿಗೆ ಚಂದ್ರಶೇಖರ್ ಲಂಚ ನೀಡಿದ್ದಾರೆ ಎಂದು ಆರೋಪಿಸಿ ತರೂರ್ ಅವರು ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.
Rajeev Chandrasekhar and Shashi Tharoor
Rajeev Chandrasekhar and Shashi Tharoor facebook
Published on

ಕಳೆದ ಲೋಕಸಭಾ ಚುನಾವಣೆ ವೇಳೆ ತನ್ನ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ತಿರುವನಂತಪುರ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಹೂಡಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ [ರಾಜೀವ್ ಚಂದ್ರಶೇಖರ್ ಮತ್ತು ಶಶಿ ತರೂರ್ ನಡುವಣ ಪ್ರಕರಣ].

ಐಪಿಸಿ ಸೆಕ್ಷನ್ 500 (ಮಾನನಷ್ಟ) ಮತ್ತು 171 ಜಿ (ಚುನಾವಣೆಯ ಮೇಲೆ ಪ್ರಭಾವ ಬೀರುವ ಸುಳ್ಳು ಹೇಳಿಕೆ) ಅಡಿಯಲ್ಲಿ ಆರೋಪಗಳನ್ನು ಹೆಚ್ಚುವರಿ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಪರಿಗಣಿಸಿದರು.

Also Read
ಮತದಾರರಿಗೆ ಆಮಿಷ ಆರೋಪ ಮಾಡಿದ್ದ ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮಾನನಷ್ಟ ಮೊಕದ್ದಮೆ

ಚುನಾವಣಾ ಪ್ರಚಾರದ ವೇಳೆ ರಾಜೀವ್ ಚಂದ್ರಶೇಖರ್ ಮತದಾರರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಶಶಿ ತರೂರ್ ಅವರು ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ ಕಾರಣಕ್ಕೆ ಈ ದಾವೆ ಹೂಡಲಾಗಿತ್ತು.

 ಜುಲೈ 25ರಂದು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನಾಮಿಕಾ ಅವರೆದುರು ಪ್ರಕರಣ ವಿಚಾರಣೆಗೆ ಬಂದಿತಾದರೂ ರೌಸ್‌ ಅವೆನ್ಯೂ ನ್ಯಾಯಾಲಯ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯವಾಗಿರುವುದರಿಂದ, ಈ ಪ್ರಕರಣವನ್ನು ಅಲ್ಲಿ ವಿಚಾರಣೆ ನಡೆಸಿರಲಿಲ್ಲ.

Also Read
ವಕೀಲರು, ಪೊಲೀಸರ ನಡುವಿನ ಗಲಭೆ ಪ್ರಕರಣ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ  ತರೂರ್‌ ಅವರ ಹೇಳಿಕೆ ತಮ್ಮ ಪ್ರತಿಷ್ಠೆಗೆ ಮಸಿ ಬಳಿದಿದ್ದಲ್ಲದೆ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣವಾಯಿತು ಎಂದು ಚಂದ್ರಶೇಖರ್ ಹೇಳಿದ್ದರು.

ತಿದ್ದುಪಡಿ ಮಾಡಿದ ದೂರನ್ನು ಸಲ್ಲಿಸಲು ನ್ಯಾಯಾಲಯ ಶನಿವಾರ ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತಾವಿತ ಬದಲಾವಣೆಗಳು ದೂರಿನ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂದು ಸೂಚಿಸಿತು. ಪ್ರಕರಣವನ್ನು ಅದು ಅಕ್ಟೋಬರ್ 4, 2024ಕ್ಕೆ ಮುಂದೂಡಿದೆ.  ಚಂದ್ರಶೇಖರ್ ಅವರನ್ನು ಹಿರಿಯ ವಕೀಲ ಪ್ರಮೋದ್ ಕುಮಾರ್ ದುಬೆ ಮತ್ತವರ ತಂಡ ಪ್ರತಿನಿಧಿಸಿತ್ತು.

Kannada Bar & Bench
kannada.barandbench.com