ರಸ್ಕ್ ಎಂಬುದು ಬ್ರೆಡ್ ಅಲ್ಲ; ರಸ್ಕ್‌ಗೆ ವ್ಯಾಟ್ ವಿನಾಯಿತಿ ನೀಡಲು ನಿರಾಕರಿಸಿದ ಮೇಘಾಲಯ ಹೈಕೋರ್ಟ್

ಬ್ರೆಡ್ ಬ್ರೆಡ್ಡೇ, ರಸ್ಕ್ ರಸ್ಕೇ. ಎರಡನ್ನೂ ಎಂದಿಗೂ ಸಮೀಕರಿಸಬಾರದು " ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡೇಂಗ್ಡೋ ಅವರಿದ್ದ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ರಸ್ಕ್ ಎಂಬುದು ಬ್ರೆಡ್ ಅಲ್ಲ; ರಸ್ಕ್‌ಗೆ ವ್ಯಾಟ್ ವಿನಾಯಿತಿ ನೀಡಲು ನಿರಾಕರಿಸಿದ ಮೇಘಾಲಯ ಹೈಕೋರ್ಟ್

Meghalaya High Court


meghalayahighcourt.nic.in

ರಸ್ಕ್ ಬ್ರೆಡ್‌ಗಿಂತ ಭಿನ್ನವಾಗಿರುವುದರಿಂದ ರಾಜ್ಯದಲ್ಲಿ ಬ್ರೆಡ್‌ಗೆ ನೀಡಲಾದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿನಾಯಿತಿಯನ್ನು ರಸ್ಕ್‌ಗೆ ವಿಸ್ತರಿಸಲಾಗದು ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

ಬ್ರೆಡ್‌ನ ಪದಾರ್ಥಗಳನ್ನೇ ರಸ್ಕ್‌ ಒಳಗೊಂಡಿದ್ದರೂ ರಸ್ಕ್‌ ತಯಾರಿಕೆಗೆ ಹೆಚ್ಚಿನ ಉತ್ಪಾದನಾ ಚಟುವಟಿಕೆ ನಡೆಯುವುದರಿಂದ ಇದು ವ್ಯಾಟ್‌ ತೆರಿಗೆಗೆ ಒಳಪಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡೇಂಗ್ಡೋ ಅವರಿದ್ದ ಪೀಠ ಹೇಳಿತು. ಹೀಗಾಗಿ ಬ್ರೆಡ್‌ ಬ್ರೆಡ್ಡೇ, ರಸ್ಕ್‌ ರಸ್ಕೇ. ಎರಡನ್ನೂ ಎಂದಿಗೂ ಸಮೀಕರಿಸಬಾರದು” ಎಂದು ಅದು ಅರ್ಜಿದಾರರಿಗೆ ತಿಳಿಸಿತು.

Also Read
ಆಹಾರ ವಿತರಣಾ ಆ್ಯಪ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಆಹಾರ ಮಳಿಗೆಗಳ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಮನವಿ [ಚುಟುಕು]

ಆ ಮೂಲಕ ಅರ್ಜಿದಾರರು ಪ್ರಶ್ನಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ತೀರ್ಪು ಮತ್ತು ಮೇಘಾಲಯ ಕಂದಾಯ ಮಂಡಳಿಯ ಆದೇಶಗಳಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದ ನ್ಯಾಯಾಲಯ ಆ ತೀರ್ಪುಗಳನ್ನು ಎತ್ತಿಹಿಡಿಯಿತು.

ಅರ್ಜಿದಾರ ರಸ್ಕ್‌ ತಯಾರಿಕಾ ಕಂಪೆನಿಗೆ 2015ರಲ್ಲಿ ವ್ಯಾಟ್‌ ತೆರಿಗೆ ವಿನಾಯಿತಿ ನಿರಾಕರಿಸಿತ್ತು. ಆದರೂ ತೆರಿಗೆ ಕಟ್ಟಲು ವಿಳಂಬ ಧೋರಣೆ ಅನುಸರಿಸಿದಕ್ಕೆ ಸಂಬಂಧಿಸಿದ ವ್ಯಾಜ್ಯ ಇದಾಗಿದೆ.

Related Stories

No stories found.
Kannada Bar & Bench
kannada.barandbench.com