ವ್ಯಕ್ತಿತ್ವ ಹಕ್ಕು ರಕ್ಷಣೆ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್

ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಇಂದು ( ಡಿಸೆಂಬರ್ 11) ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
Salman Khan
Salman KhanFacebook
Published on

ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ [ಸಲ್ಮಾನ್ ಖಾನ್ ಮತ್ತು ಅನಾಮಧೇಯ ವ್ಯಕ್ತಿಗಳ ನಡುವಣ ಪ್ರಕರಣ] .

ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಇಂದು ( ಡಿಸೆಂಬರ್ 11) ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

Also Read
ಜೂನಿಯರ್ ಎನ್‌ಟಿಆರ್‌ ವ್ಯಕ್ತಿತ್ವ ಹಕ್ಕು ಉಲ್ಲಂಘನೆ: ಕ್ರಮಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಅನಾಮಧೇಯ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ತಮ್ಮ ವ್ಯಕ್ತಿತ್ವ ಹಕ್ಕನ್ನು ಅನಧಿಕೃತವಾಗಿ ಬಳಸದಂತೆ ತಡೆಯಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಸಲ್ಮಾನ್‌ ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವ ಗುಣಲಕ್ಷಣಗಳನ್ನು ವಾಣಿಜ್ಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನ್ಯಾಯಾಲಯಗಳ ಮೊರೆ ಹೋಗಿರುವ ಖ್ಯಾತನಾಮರ ಸುದೀರ್ಘ ಪಟ್ಟಿಗೆ ಈ ಹಿರಿಯ ನಟ ಸೇರಿದ್ದಾರೆ.

Also Read
ವ್ಯಕ್ತಿತ್ವ ಹಕ್ಕು ರಕ್ಷಣೆ: ಖ್ಯಾತನಾಮರೆಲ್ಲಾ ದೆಹಲಿ ಹೈಕೋರ್ಟ್‌ಗೆ ಮಾತ್ರವೇ ಅರ್ಜಿ ಸಲ್ಲಿಸುವುದೇಕೆ?

ಈ ಹಿಂದೆ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್,  ಐಶ್ವರ್ಯ ರೈ ಬಚ್ಚನ್,  ಅಭಿಷೇಕ್ ಬಚ್ಚನ್,  ನಾಗಾರ್ಜುನ,  ಅನಿಲ್ ಕಪೂರ್, ಜಾಕಿ ಶ್ರಾಫ್, ಕರಣ್ ಜೋಹರ್, ಅಧ್ಯಾತ್ಮ ಕ್ಷೇತ್ರದ ಶ್ರೀ ರವಿಶಂಕರ ,  ಜಗ್ಗಿ ವಾಸುದೇವ್ ಮತ್ತಿತರರು  ವ್ಯಕ್ತಿತ್ವ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ರಕ್ಷಣೆ ನೀಡಿದೆ.

ಡಿಎಸ್‌ಕೆ ಲೀಗಲ್‌ನ ಪರಾಗ್ ಎಚ್ ಖಾಂಧರ್ ಮತ್ತು ಚಂದ್ರಿಮಾ ಮಿತ್ರಾ  ಸಲ್ಮಾನ್‌ ಖಾನ್‌ ಅವರು ಮೊಕದ್ದಮೆ ಹೂಡಿದ್ದಾರೆ.

Kannada Bar & Bench
kannada.barandbench.com