ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಇಂದೇ ಜೈಲು ಆಡಳಿತ ಅಧಿಕಾರಿಗಳಿಗೆ ಪೀಠದ ಆದೇಶದ ಕುರಿತು ತಿಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇಂದು ಸಂಜೆ ಅಥವಾ ನಾಳೆ ಸಂಜನಾ ಬಿಡುಗಡೆಯಾಗುವ ಸಾಧ್ಯತೆ ಇದೆ.
Sanjjanaa Galrani, Karnataka High Court
Sanjjanaa Galrani, Karnataka High Court
Published on

ಸ್ಯಾಂಡಲ್‌ವುಡ್‌ ಡ್ರಗ್‌ ಹಗರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಕನ್ನಡದ ನಟಿ ಸಂಜನಾ ಗಲ್ರಾನಿ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ (ಅರ್ಚನಾ ಸಂಜನಾ ಗಲ್ರಾನಿ ವರ್ಸಸ್‌ ರಾಜ್ಯ ಸರ್ಕಾರ).

ಈ ಮೊದಲು ಹೈಕೋರ್ಟ್‌ ಗಲ್ರಾನಿ ಅವರಿಗೆ ಜಾಮೀನು ನಿರಾಕರಿಸಿತ್ತು. ವೈದ್ಯಕೀಯ ಕಾರಣಗಳನ್ನು ಮುಂದು ಮಾಡಿ ಜಾಮೀನು ಮಂಜೂರು ಮಾಡುವಂತೆ ಹೊಸ ಅರ್ಜಿಯನ್ನು ಸಂಜನಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ಕೆಳಗಿನ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ:

  • 3 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರು ಭದ್ರತೆ ನೀಡಬೇಕು.

  • ತಿಂಗಳಲ್ಲಿ ಎರಡು ಬಾರಿ ಸಮೀಪದ ಪೊಲೀಸ್‌ ಠಾಣೆಯಲ್ಲಿ ಹಾಜರಾತಿ ಹಾಕಬೇಕು.

  • ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದು, ಸಾಕ್ಷಿ ತಿರುಚದಂತೆ ಸಂಜನಾಗೆ ನಿರ್ದೇಶಿಸಲಾಗಿದೆ.

ಇಂದೇ ಜೈಲಿನ ಆಡಳಿತಕ್ಕೆ ಪೀಠದ ಆದೇಶದ ಕುರಿತು ತಿಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇಂದು ಸಂಜೆ ಅಥವಾ ನಾಳೆ ಗಲ್ರಾನಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ.

Also Read
[ಬ್ರೇಕಿಂಗ್] ಸ್ಯಾಂಡಲ್‌ವುಡ್ ಡ್ರಗ್ ಹಗರಣ: ರಾಗಿಣಿ, ಸಂಜನಾ ಹಾಗೂ ಇತರೆ ಮೂವರ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ವಿ ಜಿ ತಗಡಿ ಅವರು ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ಸಂಜನಾ ಗಲ್ರಾನಿ ಅವರ ಆರೋಗ್ಯ ತಪಾಸಣೆಗೆ ಸೋಮವಾರ ನ್ಯಾಯಾಲಯ ಸೂಚಿಸಿತ್ತು. ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು ಗಲ್ರಾನಿ ಅವರನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com