ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ಆರೋಪ: ಸಪ್ನಾ ಗಿಲ್ ಹಾಗೂ ಮೂವರಿಗೆ ಮುಂಬೈ ನ್ಯಾಯಾಲಯ ಜಾಮೀನು

ಶಾ ಅವರನ್ನು ನಿಂದಿಸಿ ಮತ್ತು ಅವರ ಕಾರಿಗೆ ಹಾನಿ ಮಾಡಿದ ಆರೋಪದ ಮೇಲೆ ಸಪ್ನಾ ಮತ್ತಿತರರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ಆರೋಪ: ಸಪ್ನಾ ಗಿಲ್ ಹಾಗೂ ಮೂವರಿಗೆ ಮುಂಬೈ ನ್ಯಾಯಾಲಯ ಜಾಮೀನು
A1

ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಹೋಟೆಲ್ ಸಹಾರಾ ಸ್ಟಾರ್‌ನ ಹೊರಗೆ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದ ಭೋಜಪುರಿ ನಟಿ ಹಾಗೂ ಸಾಮಾಜಿಕ ಮಾಧ್ಯಮ ಇನ್‌ಫ್ಲೂಯೆನ್ಸರ್‌ ಸಪ್ನಾ ಗಿಲ್ ಮತ್ತು ಇತರ ಮೂವರು ಆರೋಪಿಗಳಿಗೆ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.

ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಆದೇಶ ನೀಡಿದೆ. ಶಾ ಅವರನ್ನು ನಿಂದಿಸಿ ಮತ್ತು ಅವರ ಕಾರಿಗೆ ಹಾನಿ ಮಾಡಿದ ಆರೋಪದ ಮೇಲೆ ಸಪ್ನಾ ಮತ್ತಿತರರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

Also Read
ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ ಪ್ರಕರಣ: ಫೆಬ್ರವರಿ 20ರವರೆಗೆ ಆರೋಪಿ ಸಪ್ನಾ ಗಿಲ್‌ ಪೊಲೀಸ್‌ ಕಸ್ಟಡಿಗೆ

ದೂರಿನ ಪ್ರಕಾರ, ಶಾ ಮತ್ತವರ ಸ್ನೇಹಿತರು ಕೆಲ ದಿನಗಳ ಹಿಂದೆ ಹೋಟೆಲ್ ಸಹಾರಾ ಸ್ಟಾರ್‌ ಕೆಫೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದರು. ಸಪ್ನಾ ಮತ್ತು ಠಾಕೂರ್ ಅವರು ತಮ್ಮೊಂದಿಗೆ ಕೆಲವು ಸೆಲ್ಫಿ ತೆಗೆದುಕೊಂಡ ನಂತರ ಹೆಚ್ಚು ಫೋಟೋಗಳಿಗಾಗಿ ಕಿರುಕುಳ ನೀಡಲು ಆರಂಭಿಸಿದರು. ಆದರೆ ತಾವು ನಿರಾಕರಿಸಿದಾಗ ಅನುಚಿತವಾಗಿ  ವರ್ತಿಸಿದರು ಎಂದು ಶಾ ಆರೋಪಿಸಿದ್ದರು.

ಬೆಳಗಿನ ಜಾವ ತಾವು ಹೋಟೆಲ್‌ ತೊರೆಯುತ್ತಿದ್ದಾಗ ಸಪ್ನಾ ಅವರು ಇತರರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಮೇಲೆ ದಾಳಿ ಮಾಡಿದರು. ಅಲ್ಲದೆ ಸುಳ್ಳು ದೂರು ದಾಖಲಿಸುವುದಾಗಿ ತಿಳಿಸಿದ ಸಪ್ನಾ ₹50,000 ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com