ಎಸ್‌ಸಿಬಿಎ ಮನವಿಗೆ ಸ್ಪಂದಿಸಿದ ಸಿಜೆಐ: ವಿಚಾರಣೆ ವೇಳೆ ಮೊಬೈಲ್ ಬಳಕೆ ಅಬಾಧಿತ

ಎಸ್‌ಸಿಬಿಎ ಮಂಗಳವಾರ ನಡೆಸಿದ ವರ್ಚುವಲ್ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಿ ಮೊಬೈಲ್ ಬಳಸಲು ಸಿಜೆಐ ಅನುವು ಮಾಡಿಕೊಟ್ಟರು.
ಎಸ್‌ಸಿಬಿಎ ಮನವಿಗೆ ಸ್ಪಂದಿಸಿದ ಸಿಜೆಐ: ವಿಚಾರಣೆ ವೇಳೆ ಮೊಬೈಲ್ ಬಳಕೆ ಅಬಾಧಿತ

ನ್ಯಾಯಾಲಯ ಕಲಾಪ ಅಬಾಧಿತವಾಗಿ ನಡೆಯಬೇಕು ಎಂಬುದು ಒಂದು ಸಲಹೆಯಾಗಿದ್ದು ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ ಇರದ ವಕೀಲರು ಮೊಬೈಲ್‌ ಫೋನ್‌ ಬಳಸಿ ವಿಚಾರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಮಂಗಳವಾರ ನಡೆಸಿದ ವರ್ಚುವಲ್‌ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಿ ಮೊಬೈಲ್‌ ಬಳಸಲು ಸಿಜೆಐ ಅನುವು ಮಾಡಿಕೊಟ್ಟರು. ವಿಚಾರಣೆ ವೇಳೆ ಮೊಬೈಲನ್ನು ಕೈಯಲ್ಲಿ ಹಿಡಿಯದೆ ಒಂದೆಡೆ ಸ್ಥಿರವಾಗಿ ಇಡಬೇಕು ಮತ್ತು ವಕೀಲರ ಮುಖ ಪರದೆ ಮೇಲೆ ಕಾಣುವಂತಿರಬೇಕು ಹಾಗೂ ಅವರ ಧ್ವನಿ ಕೇಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

Also Read
ಮೊಬೈಲ್ ಫೋನ್ ಮೂಲಕ ವರ್ಚುವಲ್ ವಿಚಾರಣೆಗೆ ಹಾಜರಾಗುವ ವಕೀಲರನ್ನು ನಿಷೇಧಿಸಬೇಕಾಗಬಹುದು: ಸಿಜೆಐ ಎಚ್ಚರಿಕೆ

ವಕೀಲರ ಫೋನ್‌ ಮ್ಯೂಟ್/ಅನ್‌ಮ್ಯೂಟ್ ಮಾಡುವ ಸಮಸ್ಯೆಯನ್ನು ಪರಿಶೀಲಿಸಿ ವ್ಯವಸ್ಥೆಯನ್ನು ಸುಗಮಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದ ನ್ಯಾಯಮೂರ್ತಿಗಳು ಪ್ರಕರಣಗಳ ಮೌಖಿಕ ಪ್ರಸ್ತಾವನೆ ಈಗಾಗಲೇ ಎಲ್ಲಾ ನ್ಯಾಯಾಲಯಗಳಲ್ಲಿ ಲಭ್ಯವಿದ್ದು ವಕೀಲರು ಪೀಠಗಳ ಮುಂದೆ ತಮ್ಮ ಪ್ರಕರಣ ಪ್ರಸ್ತಾಪಿಸುವಾಗ ಸಂಬಂಧಪಟ್ಟ ನ್ಯಾಯಾಲಯದ ಮಾಸ್ಟರ್‌ ಅವರನ್ನು ಸಂಪರ್ಕಿಸಬಹುದು ಎಂದು ಭರವಸೆ ನೀಡಿದ್ದಾಗಿ ಸಂಘದ ಸುತ್ತೋಲೆ ತಿಳಿಸಿದೆ.

ಪ್ರತ್ಯೇಕ ಮನವಿ ಸಲ್ಲಿಸಿದ ಎಸ್‌ಸಿಎಒಆರ್‌ಎ

ಇದೇ ವಿಷಯವಾಗಿ ಸುಪ್ರೀಂಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಅಸೋಸಿಯೇಷನ್‌ (ಎಸ್‌ಸಿಎಒಆರ್‌ಎ) ಕೂಡ ಮಂಗಳವಾರ ಮನವಿ ಸಲ್ಲಿಸಿದ್ದು “ಕೆಲವು ವಕೀಲರಿಗೆ ಮೊಬೈಲ್‌ ಏಕೈಕ ಸಂಪನ್ಮೂಲವಾಗಿದ್ದು ಅದನ್ನು ಬಳಸುವುದು ಅವರಿಗೆ ಅನಿವಾರ್ಯವಾಗಿದೆ, ಆದ್ದರಿಂದ ರಿಜಿಸ್ಟ್ರಿಯು ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವಾಗ ಇಂಥದ್ದೇ ಉಪಕರಣ ಅಥವಾ ಕನೆಕ್ಟಿವಿಟಿಯನ್ನು ಬಳಸುವಂತೆ ಒತ್ತಾಯಿಸಬಾರದು” ಎಂದು ಸಿಜೆಐ ಅವರನ್ನು ಕೋರಿತ್ತು. ಇಂತಹ ನೋಟಿಸ್‌ ನೀಡುವ ಮೊದಲು ಸಂಘವನ್ನು ಸುಪ್ರೀಂಕೋರ್ಟ್‌ ರೆಜಿಸ್ಟ್ರಿ ಸಂಪರ್ಕಿಸುವ ಯತ್ನ ಮಾಡಿಲ್ಲ ಎಂದು ಸಂಘದ ಕಾರ್ಯದರ್ಶಿ ಜೋಸೆಫ್‌ ಅರಿಸ್ಟಾಟಲ್‌ ಎಸ್‌ ಅವರು ಮನವಿಯಲ್ಲಿ ತಿಳಿಸಿದ್ದರು.

ಎಸ್‌ಸಿಬಿಎ ಸುತ್ತೋಲೆ ಮತ್ತು ಎಸ್‌ಸಿಎಒಆರ್‌ಎ ಮನವಿಗಳನ್ನು ಇಲ್ಲಿ ಓದಿ:

Attachment
PDF
SCBA circular.pdf
Preview
Attachment
PDF
Representation__SCAORA_to_CJI.pdf
Preview

Related Stories

No stories found.
Kannada Bar & Bench
kannada.barandbench.com