ಪತ್ರಕರ್ತರ ಡಿಜಿಟಲ್ ಸಾಧನ ಶೋಧ ಅಥವಾ ವಶಪಡಿಸಿಕೊಳ್ಳುವಿಕೆ ಗಂಭೀರ ವಿಚಾರ, ಮಾರ್ಗಸೂಚಿ ಅಗತ್ಯ: ಸುಪ್ರೀಂ ಕೋರ್ಟ್

ಈ ಕುರಿತ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಸಮಯಾವಕಾಶ ನೀಡಿರುವ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ.
supreme court and mobile phone
supreme court and mobile phone
Published on

ವ್ಯಕ್ತಿಗಳು, ಅದರಲ್ಲಿಯೂ ಪತ್ರಕರ್ತರು ಅಥವಾ ಮಾಧ್ಯಮ ಸಿಬ್ಬಂದಿಗೆ ಸೇರಿದ ಫೋನ್‌ ಅಥವಾ ಇತರೆ ಡಿಜಿಟಲ್ ಸಾಧನಗಳ ಶೋಧ ಮತ್ತು ವಶಪಡಿಸಿಕೊಳ್ಳುವಿಕೆ ನಿಯಂತ್ರಿಸಲು ಮಾರ್ಗಸೂಚಿ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮಾಧ್ಯಮ ವೃತ್ತಿಪರರು ತಮ್ಮ ಸಾಧನಗಳಲ್ಲಿ ತಮ್ಮ ಸುದ್ದಿಮೂಲಗಳ ಬಗ್ಗೆ ಗೌಪ್ಯ ಮಾಹಿತಿ ಅಥವಾ ವಿವರಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಹೇಳಿತು.

Also Read
ನ್ಯೂಸ್‌ಕ್ಲಿಕ್‌ ಪ್ರಕರಣ: ಪುರಕಾಯಸ್ಥ, ಚಕ್ರವರ್ತಿ ಅವರನ್ನು ನ.2ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ ದೆಹಲಿ ನ್ಯಾಯಾಲಯ

"ಮಾಧ್ಯಮ ವೃತ್ತಿಪರರು, ತಮ್ಮ ಫೋನ್‌ಗಳಲ್ಲಿ ಸುದ್ದಿಮೂಲಗಳು, ಸಂಪರ್ಕ ಮಾಹಿತಿಗಳನ್ನು ಇರಿಸಿಕೊಂಡಿರುತ್ತಾರೆ. ಹಾಗಾಗಿ, ಕೆಲ ಮಾರ್ಗಸೂಚಿಗಳು ಇರಬೇಕು. ಇದು ಗಂಭೀರ ವಿಚಾರ" ಎಂದು ನ್ಯಾಯಮೂರ್ತಿ ಕೌಲ್ ಮೌಖಿಕವಾಗಿ ಹೇಳಿದರು. ಇದಕ್ಕೆ ನ್ಯಾ. ಧುಲಿಯಾ ತಲೆದೂಗಿದರು.

ಕಾನೂನು ಜಾರಿ ಸಂಸ್ಥೆಗಳು ಡಿಜಿಟಲ್ ಸಾಧನ ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಜಾರಿಗೆ ತರಲು ಕೋರಿ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Kannada Bar & Bench
kannada.barandbench.com