ಸ್ವಾಧೀನ ನಿಯಮ ಉಲ್ಲಂಘನೆ: ಅಂಬಾನಿ ಕುಟುಂಬಸ್ಥರಿಗೆ ರೂ 25 ಕೋಟಿ ದಂಡ ವಿಧಿಸಿದ ಸೆಬಿ

ರಿಲಯನ್ಸ್ ಇಂಡಸ್ಟ್ರೀಸ್‌ನ 12 ಕೋಟಿ ಷೇರುಗಳ ವಿತರಣೆಗೆ ಸಂಬಂಧಿಸಿದಂತೆ ಜನವರಿ 2000ರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸೆಬಿ ತನಿಖೆ ನಡೆಸಿತ್ತು.
Mukesh Ambani, Anil Ambani
Mukesh Ambani, Anil Ambani

2011 ರ ಸೆಬಿ ನಿಯಮಾವಳಿಗಳ ಉಲ್ಲಂಘನೆಗಾಗಿ ಉದ್ಯಮಿಗಳಾದ ಮುಕೇಶ್‌ ಮತ್ತು ಅನಿಲ್‌ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) 25 ಕೋಟಿ ರೂ ದಂಡ ವಿಧಿಸಿದೆ. 38 ಹಂಚಿಕೆ ಘಟಕಗಳಿಗೆ ಪ್ರತಿ ಷೇರಿಗೆ 75 ರೂ ದರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ 12 ಕೋಟಿ ಷೇರುಗಳ ವಿತರಣೆಗೆ ಸಂಬಂಧಿಸಿದಂತೆ ಜನವರಿ 2000ರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸೆಬಿ ತನಿಖೆ ನಡೆಸಿತ್ತು.

ಸ್ವಾಧೀನದ ನಿಯಮಗಳ ನಿಯಂತ್ರಣ ಸಂಖ್ಯೆ 11 (1) ರ ಪ್ರಕಾರ, ಸಾರ್ವಜನಿಕ ಪ್ರಕಟಣೆ ನೀಡದ ಹೊರತಾಗಿ ಮತದಾನದ ಹಕ್ಕಿನ ಶೇ.5ಕ್ಕೂ ಹೆಚ್ಚು ಹೆಚ್ಚುವರಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಐಎಲ್‌ ಗೆ ನಿರ್ಬಂಧವಿದೆ. ಆದರೆ, ಆರ್‌ಐಎಲ್ ಪ್ರವರ್ತಕರು ಮತ್ತು ಪರ್ಸನ್ಸ್ ಆಕ್ಟಿಂಗ್ ಇನ್ ಕನ್ಸರ್ಟ್ (ಪಿಎಸಿ) ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಸಾರ್ವಜನಿಕ ಘೋಷಣೆ ಮಾಡದೆ, ಅಂಬಾನಿ ಕುಟುಂಬಸ್ಥರು 11(1)ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೆಬಿಯ ನ್ಯಾಯ ನಿರ್ಣಯ ಅಧಿಕಾರಿ ಕೆ ಸರವಣನ್‌ ಬುಧವಾರ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

Also Read
ಷೇರುಪೇಟೆ ಕೈಚಳಕ: ಮುಕೇಶ್‌ ಅಂಬಾನಿಗೆ ₹15 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ₹25 ಕೋಟಿ ದಂಡ ವಿಧಿಸಿದ ಸೆಬಿ

ಮುಕೇಶ್ ಮತ್ತು ಅನಿಲ್, ಅವರ ಪತ್ನಿಯರಾದ ನೀತಾ ಮತ್ತು ಟೀನಾ, ಮತ್ತು ಮುಖೇಶ್ ಮತ್ತು ನೀತಾ ಅಂಬಾನಿ ಮಕ್ಕಳಾದ ಆಕಾಶ್ ಮತ್ತು ಇಶಾ ಸೇರಿದಂತೆ 36 ಆರ್‌ಐಎಲ್ ಪ್ರವರ್ತಕರ ವಿರುದ್ಧ 2011 ರಲ್ಲಿ ನ್ಯಾಯ ನಿರ್ಣಯ ಪ್ರಕ್ರಿಯೆ ಆರಂಭಿಸಲಾಗಿತ್ತು.

ವಾರೆಂಟ್‌ ನೀಡಿದ ಹದಿನೇಳು ವರ್ಷ ಮತ್ತು ಷೇರು ಸ್ವಾಧೀನಪಡಿಸಿಕೊಂಡು ಹನ್ನೊಂದು ವರ್ಷಗಳ ನಂತರ ನ್ಯಾಯ ನಿರ್ಣಯ ಮಾಡುವುದು ಅವಿವೇಕದ ಮತ್ತು ಅವಧಿ ಮೀರಿದ ನಿರ್ಣಯ ಎಂದು ಅಂಬಾನಿ ಕುಟುಂಬದವರು ನ್ಯಾಯ ನಿರ್ಣಯ ಅಧಿಕಾರಿ ಮುಂದೆ ವಾದಿಸಿದ್ದರು.

ಆದರೆ ಸುಪ್ರೀಂಕೋರ್ಟ್‌ ಈಗಾಗಲೇ ಇಂತಹ ಪ್ರಕರಣಗಳಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ಸರವಣನ್‌ ಅವರು 1995ರ ಸೆಬಿ ನಿಯಮಾವಳಿಗಳು 1956ರ ಕಂಪೆನಿ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿ ರೂ.25 ಕೋಟಿ ದಂಡ ವಿಧಿಸಿದರು.

Related Stories

No stories found.
Kannada Bar & Bench
kannada.barandbench.com