ವಂಚನೆ ಆರೋಪ: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಅನಿಲ್ ಅಂಬಾನಿಗೆ ಸೆಬಿ ನಿರ್ಬಂಧ

ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣದ ವ್ಯವಹಾರ ನಡೆಸುವಲ್ಲಿ ಆರ್ಎಚ್ಎಫ್ಎಲ್ನ ಆಯಾಕಟ್ಟಿನ ಹುದ್ದೆಗಳಲ್ಲಿರುವವರು ಅನಿಲ್ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
SEBI, Anil Ambani

SEBI, Anil Ambani

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನಿಂದ ಇತರ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಉದ್ಯಮಿ ಅನಿಲ್‌ ಅಂಬಾನಿಗೆ ಭಾರತೀಯ ಷೇರು ವಿನಿಮಯ ಮಂಡಳಿ ಸೆಬಿ ನಿರ್ಬಂಧ ವಿಧಿಸಿದೆ.

ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣದ ವ್ಯವಹಾರ ನಡೆಸುವಲ್ಲಿ ಆರ್‌ಎಚ್‌ಎಫ್‌ಎಲ್‌ನ ಆಯಾಕಟ್ಟಿನ ಹುದ್ದೆಗಳಲ್ಲಿರುವವರು ಅನಿಲ್‌ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಪತ್ತೆ ಮಾಡಿದೆ.

Also Read
ಷೇರು ಬೆಲೆ ಅಕ್ರಮವಾಗಿ ಹೆಚ್ಚಿಸಿದ ಟೆಲಿಗ್ರಾಮ್ ಗುಂಪಿನ ಮೇಲೆ ಸೆಬಿ ಚಾಟಿ: ಕೃತ್ಯ ಎಸಗಿದ್ದು ಹೇಗೆ ಗೊತ್ತೆ?

ಮುಂದಿನ ಆದೇಶದವರೆಗೆ ಸೆಬಿಯಲ್ಲಿ ನೋಂದಾಯಿತ ಯಾವುದೇ ದಲ್ಲಾಳಿಗಳೊಂದಿಗೆ ಹಾಗೂ ಪಟ್ಟಿ ಮಾಡಲಾದ ಸಾರ್ವಜನಿಕ ಕಂಪನಿಯೊಂದಿಗೆ ಕಾರ್ಯನಿರ್ವಹಿಸುವುದನ್ನು ಮತ್ತು ಸಾರ್ವಜನಿಕ ಕಂಪನಿಯೊಂದಿಗೆ ನಿರ್ದೇಶಕರು/ಪ್ರವರ್ತಕರಾಗಿ ಕೆಲಸ ಮಾಡದಂತೆಯೂ , ಅಂಬಾನಿ ಮತ್ತಿತರಿಗೆ ಅದು ನಿರ್ಬಂಧಿಸಿದೆ. ಅನಿಲ್‌ ಅವರಿಗೆ ಸಂಬಂಧಿಸಿದಂತೆಯೂ ಸೆಬಿ ನಿರ್ದಿಷ್ಟ ಆಪಾದನೆಗಳನ್ನು ಮಾಡಿದೆ.

ಆರ್‌ಎಚ್‌ಎಫ್‌ಎಲ್‌ನ ಪ್ರವರ್ತಕರು ಮತ್ತು ವ್ಯವಸ್ಥಾಪಕರು ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಸೆಬಿ ಈ ಕ್ರಮ ಕೈಗೊಂಡಿದೆ. ಅಲ್ಲದೆ ವಿವಿಧ ಸಾಲದಾತರಿಂದ ಆರ್‌ಎಚ್‌ಎಫ್‌ಎಲ್‌ ಎರವಲು ಪಡೆದ ಹಣದಲ್ಲಿ ಭಾಗಶಃ ಮಾತ್ರ ಮರುಪಾವತಿಯಾಗಿದೆ ಎಂದು ಬ್ಯಾಂಕ್‌ಗಳಿಂದಲೂ ಸೆಬಿ ದೂರು ಸ್ವೀಕರಿಸಿತ್ತು.

Related Stories

No stories found.
Kannada Bar & Bench
kannada.barandbench.com