ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತ ಮಹಿಳೆಗೆ ಹೇಳುವುದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ಮನೆಗೆಲಸ ಮಾಡಲು ಇಷ್ಟವಿಲ್ಲದಿದ್ದರೆ ಅದನ್ನು ಆಕೆ ಮದುವೆಗೆ ಮುನ್ನವೇ ಹೇಳಬೇಕಿತ್ತು. ಆಗ ವರ ಬೇರೆ ಆಲೋಚನೆ ಮಾಡಲು ಸಾಧ್ಯವಿತ್ತು ಎಂದ ನ್ಯಾಯಾಲಯ.
Aurangabad Bench, Bombay High Court
Aurangabad Bench, Bombay High Court

ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತ ಮಹಿಳೆಗೆ ಹೇಳುವುದು ಸೇವಕಿಯ ಕೆಲಸಕ್ಕೆ ಸಮನಾಗದು ಮತ್ತು ಅದು ಅವಳ ಮೇಲೆಸಗುವ ಕ್ರೌರ್ಯವಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಇತ್ತೀಚೆಗೆ ತಿಳಿಸಿದೆ [ಸಾರಂಗ್‌ ದಿವಾಕರ್‌ ಆಮ್ಲೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹೀಗಾಗಿ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಮಹಿಳೆಯ ಪತಿ ಮತ್ತು ಅತ್ತೆಯ ವಿರುದ್ಧ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಎಸ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿದೆ.

“ಮದುವೆಯಾದ ಹೆಂಗಸನ್ನು ಸಂಸಾರದ ಸಲುವಾಗಿ ಗೃಹ ಕೃತ್ಯ ಮಾಡುವಂತೆ ಹೇಳಿದರೆ ಅದು ಮನೆಗೆಲಸದವರಿಗೆ ಹೇಳಿದಂತೆ ಆಗುವುದಿಲ್ಲ. ಮನೆಗೆಲಸ ಮಾಡಲು ಇಷ್ಟವಿಲ್ಲದಿದ್ದರೆ ಅದನ್ನು ಆಕೆ ಮದುವೆಗೆ ಮುನ್ನವೇ ಹೇಳಬೇಕಿತ್ತು. ಆಗ ವರ ಬೇರೆ ಯೋಚನೆ ಮಾಡಲು ಸಾಧ್ಯವಿತ್ತು ಅಥವಾ ಮದುವೆಯ ನಂತರ ಈ ಸಮಸ್ಯೆ ಉದ್ಭವಿಸಿದ್ದರೆ ಅದನ್ನು ಆರಂಭದಲ್ಲಿಯೇ ಪರಿಹರಿಸಿಕೊಳ್ಳಬೇಕಿತ್ತು” ಎಂದು ಪೀಠ ಹೇಳಿದೆ.

Also Read
ಪತಿ ವಿರುದ್ದ ನಿರಾಧಾರವಾಗಿ ನಪುಂಸಕತ್ವ ಆರೋಪ ಮಾಡುವುದು ಮಾನಸಿಕ ಕ್ರೌರ್ಯ ಎಂದ ಹೈಕೋರ್ಟ್‌; ವಿಚ್ಛೇದನಕ್ಕೆ ಅನುಮತಿ

ಮದುವೆಯಾದ ಒಂದು ತಿಂಗಳ ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡ ಮಾವನ ಮನೆಯವರು ನಂತರ ಸೇವಕಿಯಂತೆ ಕಾಣಲಾರಂಭಿಸಿದರು. ವಾಹನ ಖರೀದಿಗೆಂದು ₹ 4 ಲಕ್ಷ ನೀಡುವಂತೆ ಬೇಡಿಕೆ ಇಡತೊಡಗಿದರು. ಅದೇ ಕಾರಣಕ್ಕೆ ಪತಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು  ದೂರು ನೀಡಿದ್ದರು.  

ಆದರೆ ಇವೆಲ್ಲ ಕಪೋಲಕಲ್ಪಿತ ಘಟನೆಗಳು. ಆಕೆ ಈ ಹಿಂದೆ ಪುರುಷನೊಬ್ಬನನ್ನು ಮದುವೆಯಾಗಿದ್ದಳು. ಆ ಕುಟುಂಬ ಸದಸ್ಯರ ವಿರುದ್ಧವೂ ಇದೇ ರೀತಿಯ ದೂರು ದಾಖಲು ಮಾಡಲಾಗಿತ್ತು. ಅವರನ್ನೆಲ್ಲಾ ನ್ಯಾಯಾಲಯ ಖುಲಾಸೆಗೊಳಿಸಲಾಗಿದೆ ಎಂಬುದು ಪತಿಯ ವಾದವಾಗಿತ್ತು.

ಆದರೆ ಈ ಹಿಂದೆ ನೀಡಿದ್ದ ದೂರುಗಳನ್ನು ಆಧರಿಸಿ ಆಕೆಗೆ ಹಣ ಕೀಳುವ ಪ್ರವೃತ್ತಿ ಇದೆ ಎಂಬ ತೀರ್ಮಾನಕ್ಕೆ ಬರಲಾಗದು. ಪತಿ ಅದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಇದೇ ವೇಳೆ ಪತಿ ಮನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ ಎಂಬ ಪದ ಐಪಿಸಿ ಸೆಕ್ಷನ್‌ 498A ಅಡಿ ಆರೋಪ ಮಾಡಲು ಸಾಕಾಗುವುದಿಲ್ಲ. ಕೃತ್ಯಗಳನ್ನು ವಿವರಿಸದ ಹೊರತು ಆ ಕೃತ್ಯಗಳು ಕಿರುಕುಳ ಅಥವಾ ವ್ಯಕ್ತಿಯನ್ನು ಕ್ರೌರ್ಯಕ್ಕೆ ಒಳಪಡಿಸುತ್ತವೆಯೇ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.  

ಈ ಹಿನ್ನೆಲೆಯಲ್ಲಿ ಪತಿ ಮತ್ತು ಅತ್ತೆಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ನ್ಯಾಯಾಲಯ ಸ್ಥಳೀಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಅವರ ಮುಂದೆ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳನ್ನೂ ಬದಿಗೆ ಸರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sarang_Diwakar_Amle___Ors__v__State_of_Maharasthtra___Anr__.pdf
Preview

Related Stories

No stories found.
Kannada Bar & Bench
kannada.barandbench.com