ಹಿರಿಯ ವಕೀಲ ಬಸವ ಪ್ರಭು ಎಸ್ ಪಾಟೀಲ್ ಸಿಕ್ಕಿಂನ ನೂತನ ಅಡ್ವೊಕೇಟ್ ಜನರಲ್

2008ರಲ್ಲಿ ತಮ್ಮ 39ನೇ ವಯಸ್ಸಿಗೆ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡ ಪಾಟೀಲ್ ಅವರು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
Senior Advocate Basava Prabhu S Patil
Senior Advocate Basava Prabhu S Patil

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಬಸವ ಪ್ರಭು ಎಸ್ ಪಾಟೀಲ್ ಅವರನ್ನು ಸಿಕ್ಕಿಂನ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಗಿದೆ.

ಸಿಕ್ಕಿಂ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸೋಮವಾರ ಈ ಕುರಿತು ಅಧಿಸೂಚನೆ ಪ್ರಕಟಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಪಾಟೀಲ್ 1991ರಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ ವಕೀಲರಾಗಿ ನೋಂದಾಯಿಸಿಕೊಂಡರು. 2008ರಲ್ಲಿ ತಮ್ಮ 39ನೇ ವಯಸ್ಸಿಗೆ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡ ಪಾಟೀಲ್‌ ಅವರು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ.

Also Read
ಬಡವರಿಗೆ ನ್ಯಾಯ ಸಿಗದಿದ್ದರೆ ಸರ್ಕಾರಿ ವಕೀಲರ ನೇಮಕ ಸಾರ್ಥಕವಾಗಲ್ಲ: ಸಿಎಂ ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್‌ ಅಲ್ಲದೆ, ಅವರು ವಿವಿಧ ಹೈಕೋರ್ಟ್‌ಗಳು ಮತ್ತು ನ್ಯಾಯಮಂಡಳಿಗಳಲ್ಲಿ ವಾದ ಮಂಡಿಸಿದ್ದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣಗಳಲ್ಲಿಯೂ ತಮ್ಮ ವಾದ ಚಾತುರ್ಯ ತೋರಿದ್ದಾರೆ.

ಕರ್ನಾಟಕ,  ಆಂಧ್ರಪ್ರದೇಶ ಸರ್ಕಾರಗಳು, ಕೇಂದ್ರ ಕಾನೂನು ಸಚಿವರು, ವಿವಿಧ ಮುಖ್ಯಮಂತ್ರಿಗಳು, ಟಾಟಾ, ರಿಲಯನ್ಸ್, ಜಿಎಂಆರ್ ಮತ್ತಿತರ ದೊಡ್ಡ ಸಂಸ್ಥೆಗಳನ್ನು ಪಾಟೀಲ್ ಅವರು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದಾರೆ.

ಅವರು ಪ್ರಸ್ತುತ ಅಡ್ವೊಕೇಟ್-ಆನ್-ರೆಕಾರ್ಡ್ ಪರೀಕ್ಷೆ ನಡೆಸುವ ಸುಪ್ರೀಂ ಕೋರ್ಟ್ ಪರೀಕ್ಷಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

[ಅಧಿಸೂಚನೆಯ ಪ್ರತಿಯನ್ನು ಇಲ್ಲಿ ಓದಿ]

Attachment
PDF
Basava_Prabhu_S_Patil_appointment_as_Advocate_General.pdf
Preview

Related Stories

No stories found.
Kannada Bar & Bench
kannada.barandbench.com