ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ಕರ್ನಾಟಕದ ನೂತನ ಅಡ್ವೊಕೇಟ್‌ ಜನರಲ್‌

ಶಶಿಕಿರಣ್‌ ಶೆಟ್ಟಿ ಅವರು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರ ಪುತ್ರರಾಗಿದ್ದಾರೆ.
Senior Advocate Shashi Kiran Shetty
Senior Advocate Shashi Kiran Shetty

ಕರ್ನಾಟಕದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ಅವರ ಹೆಸರು ಅಧಿಕೃತಗೊಂಡಿದೆ. ಈ ಸಂಬಂಧ ಇನ್ನಷ್ಟೇ ಸರ್ಕಾರದ ಆದೇಶ ಪ್ರಕಟವಾಗಬೇಕಿದೆ.

ಶಶಿಕಿರಣ್‌ ಶೆಟ್ಟಿ ಅವರು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರ ಪುತ್ರರಾಗಿದ್ದಾರೆ.

ಈ ಸಂಬಂಧ "ಬಾರ್‌ ಅಂಡ್‌ ಬೆಂಚ್‌" ಜೊತೆ ಮಾತನಾಡಿದ ಶಶಿಕಿರಣ್‌ ಶೆಟ್ಟಿ ಅವರು “ನನ್ನ ಮೇಲೆ ನಂಬಿಕೆ ಇರಿಸಿ ಈ ಹುದ್ದೆಗೆ ನೇಮಿಸಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.

Also Read
ಬದಲಾದ ಸರ್ಕಾರ: ಯಾರಾಗಲಿದ್ದಾರೆ ಅಡ್ವೊಕೇಟ್‌ ಜನರಲ್?

ಇದೇ ವೇಳೆ ಮುಂದಿನ ದಿನಗಳಲ್ಲಿ ಎಜಿ ಆಗಿ ಆದ್ಯತೆ ನೀಡುವ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಅವರು, “ಕ್ಷುಲ್ಲಕ ಪ್ರಕರಣಗಳಿಗೆ ತಡೆಯೊಡ್ಡುವ ಮೂಲಕ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ. ಯುವ ಕಾನೂನು ಅಧಿಕಾರಿಗಳನ್ನು ನೇಮಿಸುವ ಮೂಲಕ ಕಾನೂನು ಇಲಾಖೆಯನ್ನು ಬಲಗೊಳಿಸುವ ಉದ್ದೇಶ ಹೊಂದಿದ್ದೇನೆ. ನ್ಯಾಯಾಲಯ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿಲು ಮೂಲಸೌಕರ್ಯ ಹೆಚ್ಚಿಸುವ ಉದ್ದೇಶ ಹೊಂದಿದ್ದೇನೆ” ಎಂದು ಪ್ರತಿಕ್ರಿಯಿಸಿದರು.

Related Stories

No stories found.
Kannada Bar & Bench
kannada.barandbench.com