ಸರ್ಕಾರದ ರೂ. 5 ಕೋಟಿ ನಿಧಿಯಿಂದ ವಕೀಲ ಗುಮಾಸ್ತರಿಗೆ ಸೂಕ್ತ ಮೊತ್ತ ತೆಗೆದಿರಿಸಿ: ವಕೀಲರ ಪರಿಷತ್ತಿಗೆ ಹೈಕೋರ್ಟ್ ಸೂಚನೆ

ವಕೀಲ ಗುಮಾಸ್ತರ ಅನುಕೂಲಕ್ಕಾಗಿ ಮೊತ್ತ ನಿಗದಿಪಡಿಸುವ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ ಎಂದು ಪರಿಷತ್ತು ತಿಳಿಸಿದ ನಂತರ ಕೋರ್ಟ್ ಈ ನಿರ್ದೇಶನ ನೀಡಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು
Published on

ಕೋವಿಡ್- 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಕೀಲರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿದ್ದ ರೂ 5 ಕೋಟಿ ನಿಧಿಯಿಂದ ವಕೀಲ ಗುಮಾಸ್ತರಿಗೆ ಸೂಕ್ತ ಮೊತ್ತ ನಿಗದಿಪಡಿಸುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ಗೆ ಸೂಚಿಸಿದೆ.

ವಕೀಲರಿಗೆ ಆರ್ಥಿಕ ಸಹಾಯ ಕೋರಿ ವಕೀಲ ಸಂಘಗಳು ನೀಡಿದ ಪ್ರಾತಿನಿಧ್ಯಗಳನ್ನು ಪರಿಗಣಿಸಲು ರಾಜ್ಯ ಸರ್ಕಾರ ನಿರಾಕರಿಸಿದ್ದು ಅದನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶನ ನೀಡಿದೆ.

Also Read
ಕೋವಿಡ್-19: ಎಲ್ಲಾ ಮಧ್ಯಂತರ ಆದೇಶಗಳ ಅವಧಿಯನ್ನು ಮತ್ತೆ ನ. 29ರವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್
Also Read
ಕೋರ್ಟ್‌ ಸಿಬ್ಬಂದಿಗಳು ಕ್ವಾರಂಟೈನ್‌ ಗೆ ಒಳಗಾದ ಅವಧಿಯನ್ನು ‘ಕರ್ತವ್ಯದ ಮೇಲೆ’ ಎಂದು ಪರಿಗಣಿಸಿ: ಕರ್ನಾಟಕ ಹೈಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ಪೀಠ ಹೀಗೆ ಪ್ರತಿಕ್ರಿಯಿಸಿದೆ:

"...ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದ್ಯಕ್ಕೆ ರೂ.5 ಕೋಟಿ ನಿಧಿಯಿಂದ ಸೂಕ್ತ ಮೊತ್ತದ ಹಣವನ್ನು ನಿಗದಿಗೊಳಿಸುವಂತೆ ನಿರ್ದೇಶಿಸುತ್ತಿದ್ದೇವೆ."

ಕರ್ನಾಟಕ ಹೈಕೋರ್ಟ್

ವಕೀಲ ಗುಮಾಸ್ತರ ಅನುಕೂಲಕ್ಕಾಗಿ ಕೆಎಸ್‌ಬಿಸಿ ಮೊತ್ತವನ್ನು ನಿಗದಿಪಡಿಸುವುದು ಖಚಿತವಾಗಿಲ್ಲ ಎಂದು ಸಲ್ಲಿಸಿದ ನಂತರ ನ್ಯಾಯಾಲಯವು ಈ ನಿರ್ದೇಶನವನ್ನು ಜಾರಿಗೊಳಿಸಿತು.

ಸರ್ಕಾರ ಬಿಡುಗಡೆ ಮಾಡಿದ ರೂ.5 ಕೋಟಿ ನಿಧಿಯಿಂದ ಕನಿಷ್ಠ ರೂ. 25 ಲಕ್ಷವನ್ನು ವಕೀಲ ಗುಮಾಸ್ತರಿಗೆ ಮೀಸಲಿಡಬೇಕೆಂದು ವಕೀಲರಾದ ಮೂರ್ತಿ ಡಿ ನಾಯಕ್ ಸಲಹೆ ನೀಡಿದರು.

ಕೋವಿಡ್- 19 ಹರಡುವುದನ್ನು ತಡೆಯಲು ಪ್ರಯತ್ನಿಸುವ ನಡುವೆ ನ್ಯಾಯಾಲಯಗಳ ಕಾರ್ಯಚಟುವಟಿಕೆಯನ್ನು ಸುಧಾರಿಸುವತ್ತಲೂ ಗಮನ ಹರಿಸಬೇಕು ಎಂದು ವಿಚಾರಣೆಯ ವೇಳೆ, ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣ ಮುಂದಿನ ಅಕ್ಟೋಬರ್ 10ರಂದು ವಿಚಾರಣೆಗೆ ಬರಲಿದೆ.

Kannada Bar & Bench
kannada.barandbench.com